ರೆಡ್ಮಿ 6A ಸ್ಮಾರ್ಟ್‌ಫೋನ್ ಬ್ಲಾಸ್ಟ್‌!...ಮಹಿಳೆಯ ಜೀವವೇ ಹೋಯಿತು!

|

ಶಿಯೋಮಿ ಕಂಪನಿಯ ರೆಡ್ಮಿ 6A ಸ್ಮಾರ್ಟ್‌ಫೋನ್ ಸ್ಫೋಟಗೊಂಡು ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ MD Talk YT ಎಂಬ ಯೂಟ್ಯೂಬರ್ ತನ್ನ ರೆಡ್ಮಿ 6A (Redmi 6A) ಫೋನ್ ಸ್ಫೋಟಗೊಂಡು ತನ್ನ ಚಿಕ್ಕಮ್ಮ ಸತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಯೂಟ್ಯೂಬರ್‌

ಹೌದು, ಸೆಪ್ಟೆಂಬರ್ 9, 2022 ರಂದು ರೆಡ್ಮಿ 6A ಸ್ಮಾರ್ಟ್‌ಫೋನ್ ಸ್ಪೋಟ್‌ದಿಂದಾಗಿ ದೆಹಲಿ-ಎನ್‌ಸಿಆರ್ ಪ್ರದೇಶದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಯೂಟ್ಯೂಬರ್‌ ವರದಿ ಮಾಡಿದ್ದಾರೆ. ಟೆಕ್ ಯೂಟ್ಯೂಬರ್‌ನ ಟ್ವೀಟ್ ಪ್ರಕಾರ, ಅವರ ಚಿಕ್ಕಮ್ಮ ಸ್ಮಾರ್ಟ್‌ಫೋನ್ ಬಳಸುತ್ತಿದ್ದರು ಮತ್ತು ಫೋನ್‌ ಅನ್ನು ದಿಂಬಿನ ಮೇಲೆ ಇಟ್ಟುಕೊಂಡು ಮಲಗಿದ್ದಾಗ ಆ ಸ್ಮಾರ್ಟ್‌ಫೋನ್ ಸ್ಫೋಟಗೊಂಡು ಅವರ ಜೀವವನ್ನು ಬಲಿತೆಗೆದುಕೊಂಡಿದೆ ಎಂದು ವರದಿಯಾಗಿದೆ. ಈ ಟ್ವೀಟ್‌ಗೆ ಶಿಯೋಮಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ನೋಡಬಹುದಾಗಿದೆ

ಯೂಟ್ಯೂಬರ್‌ ಸ್ಪೋಟ್‌ಗೊಂಡ ಆ ಸ್ಮಾರ್ಟ್‌ಫೋನ್‌ನ ಫೋಟೊಗಳನ್ನು ಟ್ವಿಟರ್‌ ನಲ್ಲಿ ಅವರು ಶೇರ್ ಮಾಡಿದ್ದಾರೆ. ಫೋನಿನ ಮುಂಭಾಗದ ಸ್ಕ್ರೀನ್ ಸಂಪೂರ್ಣವಾಗಿ ಹಾನಿ ಆಗಿರುವುದನ್ನು ಫೋಟೊದಲ್ಲಿ ನೋಡಬಹುದಾಗಿದೆ. ಜೊತೆಗೆ ಫೋನಿನ ಹಿಂದಿನ ಪ್ಯಾನೆಲ್‌ ಸಹ ಸುಟ್ಟ ಹೋಗಿದೆ. ಅಲ್ಲದೆ ಫೋನಿನ ಬ್ಯಾಟರಿ ಊದಿಕೊಂಡಿದೆ. ಟ್ವೀಟ್‌ನಲ್ಲಿ ಮೃತ ಮಹಿಳೆಯ ಫೋಟೊಗಳನ್ನು ಅವರು ಶೇರ್‌ ಮಾಡಿದ್ದಾರೆ. ಹಾಗೆಯೇ ಫೋನ್ ಸ್ಪೋಟದಿಂದ ಅವರು ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವ ಫೋಟೋಗಳನ್ನು ಅವರು ಟ್ವೀಟ್‌ ನಲ್ಲಿ ಶೇರ್ ಮಾಡಿದ್ದಾರೆ.

ಪ್ರಯತ್ನಿಸುತ್ತಿದೆ

ಗ್ರಾಹಕರ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದ್ದು, ನಾವು ಅಂತಹ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ಈ ಹಂತದಲ್ಲಿ, ನಮ್ಮ ತಂಡವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದೆ ಮತ್ತು ಘಟನೆಯ ಕಾರಣವನ್ನು ನಿರ್ಧರಿಸುತ್ತದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಂಪನಿಯು ಟ್ವೀಟ್ ಮೂಲಕ ಹೇಳಿದೆ.

ಫೋನ್‌ ಚಾರ್ಜ್‌ ಮಾಡುವಾಗ ಈ ರೀತಿ ಮಾಡಿಬೇಡಿ

ಫೋನ್‌ ಚಾರ್ಜ್‌ ಮಾಡುವಾಗ ಈ ರೀತಿ ಮಾಡಿಬೇಡಿ

ಬೇರೆ ಚಾರ್ಜರ್ ಬಳಸದಿರಿ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನಿ ನೊಂದಿಗೆ ನೀಡಿರುವ ಅಧಿಕೃತ ಚಾರ್ಜರ್‌ ಅನ್ನು ಮಾತ್ರವೇ ಬಳಕೆ ಮಾಡಿರಿ. ಕಂಪನಿಯ ಚಾರ್ಜರ್ ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಾಮರ್ಥ್ಯದ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ಬ್ಯಾಟರಿ ಲೈಫ್‌ಗೆ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ. ಜೊತೆಗೆ ಫೋನ್‌ ಮೇಲೆಂದ ಮೇಲೆ ಬಿಸಿ ಆಗುವ ಹಾಗೂ ಫೋನ್‌ ಸ್ಪೋಟ ಆಗುವ ಸಾಧ್ಯತೆಗಳು ಇರುತ್ತವೆ.

ಪೂರ್ಣ 100% ಚಾರ್ಜ್ ಬೇಡಬೇಡಿ

ಪೂರ್ಣ 100% ಚಾರ್ಜ್ ಬೇಡಬೇಡಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಕೆಲವರು ಸಾಮಾನ್ಯವಾಗಿ ಬ್ಯಾಟರಿ ಫುಲ್ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ನಿರ್ಧಾರವಲ್ಲ. ಈ ನಿಟ್ಟಿನಲ್ಲಿ ಎಂದಿಗೂ ಫುಲ್ 100% ಚಾರ್ಜ್ ಮಾಡಲೇಬೇಡಿ. ಚಾರ್ಜಿಂಗ್ 90 ರ ಗಡಿ ತಲುಪಿದರೆ ಸಾಕು ಅಥವಾ 92 ರಿಂದ 94 ಪರ್ಸೆಂಟ್‌ ಇದ್ದಾಗ ಚಾರ್ಜಿಂಗ್ ನಿಲ್ಲಿಸಿ. ಇದು ಬ್ಯಾಟರಿ ಬಾಳಿಕೆಯನ್ನು ವೃದ್ಧಿಸುತ್ತದೆ.

ರಾತ್ರಿಯಿಡಿ ಚಾರ್ಜ್ ಮಾಡಬೇಡಿ

ರಾತ್ರಿಯಿಡಿ ಚಾರ್ಜ್ ಮಾಡಬೇಡಿ

ಅನೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.

ಚಾರ್ಜ್ ಮಾಡುವಾಗ ಫೋನ್‌ ಬಳಕೆ ಉತ್ತಮವಲ್ಲ

ಚಾರ್ಜ್ ಮಾಡುವಾಗ ಫೋನ್‌ ಬಳಕೆ ಉತ್ತಮವಲ್ಲ

ಸ್ಮಾರ್ಟ್‌ಫೋನ್ ಚಾರ್ಜಿಗೆ ಹಾಕಿದಾಗ ಫೋನ್ ಬಳಕೆ ಮಾಡಬೇಡಿರಿ. ಫೋನ್ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಫೋನ್ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕರ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಬಿಟ್ಟುಬಿಡಿ.

Best Mobiles in India

English summary
Xiaomi is investigating Redmi 6A explosion that allegedly killed a woman.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X