Subscribe to Gizbot

ಭಾರತದಲ್ಲಿ ಶ್ಯೋಮಿ ಎಮ್ಐ 4 ಗೆ ಅದ್ಭುತ ದರಕಡಿತ

Written By:

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶ್ಯೋಮಿ 64 ಜಿಬಿ ಆವೃತ್ತಿಯ ಎಮ್ಐ 4 ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಡಿಮೆ ಮಾಡಿದೆ. ರೂ 2,000 ಕ್ಕೆ ತನ್ನ ಫೋನ್ ಬೆಲೆಯನ್ನು ಕಂಪೆನಿ ಇಳಿಸಿದೆ. ಎಮ್ಐ 4 ನ 64 ಜಿಬಿ ಆವೃತ್ತಿ ರೂ 19,999 ಕ್ಕೆ ದೊರೆಯುತ್ತಿದೆ. ಫೆಬ್ರವರಿಯಲ್ಲಿ ಈ ಫೋನ್ ಲಾಂಚ್ ಆಗಿದ್ದು ಆಗ ಬೆಲೆ ರೂ 23,999 ಆಗಿತ್ತು. 16 ಜಿಬಿ ಆವೃತ್ತಿ ಬೆಲೆ ರೂ 17,999 ಆಗಿದೆ.

ಓದಿರಿ: ಫೋನ್ ಹ್ಯಾಂಗಿಂಗ್: ನಿವಾರಣೆಗಾಗಿ ಇಲ್ಲಿದೆ ಸರಳ ಟಿಪ್ಸ್

ಭಾರತದಲ್ಲಿ ಶ್ಯೋಮಿ ಎಮ್ಐ 4 ಗೆ ಅದ್ಭುತ ದರಕಡಿತ

ಶ್ಯೋಮಿ ಎಮ್ಐ 3 ನ ಸಕ್ಸೆಸರ್ ಆಗಿರುವ ಫೋನ್ ಸ್ಟೈನ್‌ಲೆಸ್ ಸ್ಟೀಲ್ ಮೆಟಲ್ ಫ್ರೇಮ್ ಅನ್ನು ಹೊಂದಿಕೊಂಡು ಬರುತ್ತಿದೆ ಇದು 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಪಡೆದುಕೊಂಡಿದ್ದು ಬದಲಾಯಿಸಬಹುದಾದ ಪ್ಲಾಸ್ಟಿಕ್ ಹಿಂಭಾಗವನ್ನು ಹೊಂದಿದೆ.

ಓದಿರಿ: ಗೂಗಲ್ ಕುರಿತಾದ 10 ಆಸಕ್ತಿಕರ ಸಂಗತಿಗಳು

ಭಾರತದಲ್ಲಿ ಶ್ಯೋಮಿ ಎಮ್ಐ 4 ಗೆ ಅದ್ಭುತ ದರಕಡಿತ

ಶ್ಯೋಮಿ ಎಮ್ಐ 4, 2.5GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದೆ ಇದು 3 ಜಿಬಿ RAM ಅನ್ನು ಪಡೆದುಕೊಂಡಿದೆ. ಫೋನ್ MIUI 6 ಅನ್ನು ಚಾಲನೆ ಮಾಡುತ್ತಿದ್ದು, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಡಿವೈಸ್‌ನಲ್ಲಿದೆ.

ಭಾರತದಲ್ಲಿ ಶ್ಯೋಮಿ ಎಮ್ಐ 4 ಗೆ ಅದ್ಭುತ ದರಕಡಿತ

ಫೋನ್‌ನ ರಿಯರ್ ಕ್ಯಾಮೆರಾ 13 ಎಮ್‌ಪಿಯಾಗಿದ್ದು 8 ಎಮ್‌ಪಿ ಮುಂಭಾಗದಲ್ಲಿದೆ. 3080mAh ಬ್ಯಾಟರಿ ಡಿವೈಸ್‌ನಲ್ಲಿದೆ. ಒಂದೂವರೆ ದಿನ ಬ್ಯಾಟರಿ ಬಾಳಿಕೆ ಶ್ಯೋಮಿಯಲ್ಲಿದ್ದು ಶೀಘ್ರದಲ್ಲೇ ಚಾರ್ಜ್ ಆಗುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಫೋನ್ ಸಂಪರ್ಕ ವಿಶೇಷತೆಗಳೆಂದರೆ 3ಜಿ, ವೈಫೈ 802.11ac, ಬ್ಲ್ಯೂಟೂತ್ 4.0 ಮತ್ತು ಜಿಪಿಎಸ್ ಆಗಿದೆ. ಫೋನ್ 4ಜಿ ಡೇಟಾ ಮತ್ತು ಎನ್‌ಎಫ್‌ಸಿಗೆ ಬೆಂಬಲವನ್ನು ಒದಗಿಸುತ್ತಿಲ್ಲ.

English summary
Chinese device maker Xiaomi has announced a price cut for the 64GB variant of its Mi 4 smartphone. The company which had announced a Rs 2,000 price cut in April has now decided to reduce it further by another Rs 2,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot