ಶ್ಯೋಮಿ ರೆಡ್ಮೀ ನೋಟ್ 4ಜಿ ದರಕಡಿತ ಬೆಲೆಯಲ್ಲಿ

Written By:

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶ್ಯೋಮಿ ರೆಡ್ಮೀ ನೋಟ್ 4ಜಿ ಮೇಲೆ ದರಕಡಿತ ಕೊಡುಗೆಯನ್ನು ವಿಧಿಸಿದೆ.

ಶ್ಯೋಮಿ ರೆಡ್ಮೀ ನೋಟ್ 4ಜಿ ದರಕಡಿತ ಬೆಲೆಯಲ್ಲಿ

ರೆಡ್ಮೀ ನೋಟ್ 4ಜಿ ಬೆಲೆ ರೂ 7,999 ಆಗಿದೆ. ಫೋನ್‌ ಲಾಂಚ್ ಆದಾಗ ಬೆಲೆ ರೂ 9,999 ಆಗಿತ್ತು. ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬೆಲೆಯಲ್ಲಿ ಫೋನ್ ದೊರೆಯುತ್ತಿದ್ದು ಮುಖ್ಯ ಇ ಕಾಮರ್ಸ್ ಸೈಟ್‌ಗಳಾದ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮತ್ತು ಅಮೆಜಾನ್‌ನಲ್ಲಿ ಡಿವೈಸ್ ಲಭ್ಯವಿದೆ.

ಓದಿರಿ: ಮಾರುಕಟ್ಟೆ ಕಿಂಗ್ ಶ್ಯೋಮಿ ಸ್ಟೋರ್ ಡಿವೈಸ್ ಸಂಗ್ರಹ

ಶ್ಯೋಮಿ ರೆಡ್ಮೀ ನೋಟ್ 4ಜಿ ದರಕಡಿತ ಬೆಲೆಯಲ್ಲಿ

ಇನ್ನು ಡಿವೈಸ್ ವಿಶೇಷತೆಗಳನ್ನು ಹೇಳುವುದಾದರೆ ಇದು 5.5 ಇಂಚಿನ 720 ಪಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಅಂತೆಯೇ ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಡಿವೈಸ್ ಒಳಗೊಂಡಿದೆ.

ಓದಿರಿ: ಸ್ಮಾರ್ಟ್‌ಫೋನ್ ಬಳಸುವ ಸ್ಮಾರ್ಟ್‌ ಜನರಿಗಾಗಿ 10 ಅಪ್ಲಿಕೇಶನ್‌ಗಳು

ಶ್ಯೋಮಿ ರೆಡ್ಮೀ ನೋಟ್ 4ಜಿ ದರಕಡಿತ ಬೆಲೆಯಲ್ಲಿ

ಫ್ಯಾಬ್ಲೆಟ್ 1.6GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, 2ಜಿಬಿ RAM ಡಿವೈಸ್‌ನಲ್ಲಿದೆ. ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ಇದನ್ನು ವಿಸ್ತರಿಸಬಹುದು. ಶ್ಯೋಮಿಯ MIUI ಓಎಸ್ ಆಧಾರಿತ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿದೆ. ರೆಡ್ಮೀ ನೋಟ್ 3,100 mAh ಬ್ಯಾಟರಿಯೊಂದಿಗೆ ಬಂದಿದೆ. ರೆಡ್ಮೀ ನೋಟ್ 3ಜಿಯಂತೆಯೇ, 4ಜಿ ಅವೃತ್ತಿ ಸಿಂಗಲ್ ಸಿಮ್ ಡಿವೈಸ್ ಆಗಿದೆ.

English summary
Chinese device maker Xiaomi has announced a price cut Redmi Note 4G. The Redmi Note 4G smartphone is now available at Rs 7,999. The phone was originally launched in November 2014 at Rs 9,999.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot