ಹೊಸ ಅನುಭವ ನೀಡಲಿರುವ ಯಾಹೂ ಮೇಲ್‌

Written By:

ಟೆಕ್‌ ಅಭಿವೃದ್ದಿ ಗೊಂಡಂತೆ ಇಂದು ಗ್ಯಾಜೆಟ್ಸ್ ಮತ್ತು ಸ್ಮಾರ್ಟ್‌ಫೋನ್‌ಗಳು ಸಾಂಪ್ರದಾಯಿಕ ಫೀಚರ್‌ಗಳನ್ನು ದೂರ ಮಾಡುತ್ತಿವೆ. ಅಲ್ಲದೇ ಅಪ್ಲಿಕೇಶನ್‌ಗಳ ಮೂಲಕ ಮೊಬೈಲ್‌ನಲ್ಲಿ ಬಳಸುವ ಹಲವು ಇಮೇಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಸಹ ಹೊಸ ಫೀಚರ್‌ಗಳನ್ನು ಪಡೆಯುತ್ತಿವೆ. ಅಂತೆಯೇ ಈಗ ಯಾಹು ಮೇಲ್‌ ತನ್ನ ಬಳಕೆದಾರರಿಗೆ ಹೊಸದೊಂದು ಫೀಚರ್ ನೀಡಿದೆ.

ಓದಿರಿ: ಹ್ಯಾಕಿಂಗ್ ತಪ್ಪಿಸಲು 'ಹ್ಯಾಕಿಂಗ್ ವಿತ್‌ ಸ್ಮಾರ್ಟ್‌ಫೋನ್ಸ್' ಬುಕ್‌

ಹೊಸ ಅನುಭವ ನೀಡಲಿರುವ ಯಾಹೂ ಮೇಲ್‌

iOS ಮತ್ತು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳ ಮೂಲಕ ಯಾಹೂ ಮೇಲ್‌ ಬಳಸುವವರು ಇನ್ನು ಮುಂದೆ ಯಾಹು ಅಕೌಂಟ್‌ ಕೀ ಎಂಬ ಹೊಸ ಸೇವೆ ಪಡೆಯಲಿದ್ದಾರೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ: ಯಾಹೂ ಮೇಲ್‌ ಆಕ್ಸೆಸ್‌ಮಾಡಲು ಬಳಕೆದಾರರು ಯಾವಾಗ ಅಕೌಂಟ್ ಕೀ ಬಳಸುತ್ತಾರೋ ಆಗ ಯಾಹೂ ಪಾಸ್‌ವರ್ಡ್‌ ಕೇಳುವುದಿಲ್ಲ. ಬದಲಾಗಿ, ಅಕೌಂಟ್‌ ಕೀ ಸೇವೆ ಸ್ಮಾರ್ಟ್‌ಫೋನ್‌ಗೆ ಸಂದೇಶ ಕಳುಹಿಸಿ ಖಾತೆಗೆ ಕನೆಕ್ಟ್‌ ಆಗುತ್ತದೆ. ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಎಸ್‌ ಅಥವಾ ನೋ ಎಂದು ಟ್ಯಾಪ್‌ ಮಾಡುವ ಮೂಲಕ, ಬಳಕೆದಾರರು ಖಾತೆಯಲ್ಲಿ ಲಾಗಿನ್ ಆಗಲು ಅಥವಾ ಅನಧಿಕೃತ ಪ್ರವೇಶವನ್ನು ನಿರಾಕರಿಸಲು ಸಹಾಯವಾಗಿದೆ.

ಒಂದು ವೇಳೆ ಬಳಕೆದಾರರು ಸ್ಮಾರ್ಟ್‌ಫೋನ್‌ ಅನ್ನು ಕಳೆದುಕೊಂಡಲ್ಲಿ ಅಥವಾ ಅಪಹರಣವಾದಲ್ಲಿ, ಬಳಕೆದಾರ ತನ್ನ ಇಮೇಲ್‌ ಮೂಲಕ ಅಥವಾ ಸಂದೇಶಗಳ ಮೂಲಕ ಗುರುತನ್ನು ಬದಲಿಸಬಹುದಾಗಿದೆ.

ಓದಿರಿ: ಈ ವೆಬ್‌ಸೈಟ್‌ಗಳಲ್ಲಿ ಉಚಿತ ಸಿನಿಮಾಗಳನ್ನು ನೋಡಿರಿ

ಹೊಸ ಅನುಭವ ನೀಡಲಿರುವ ಯಾಹೂ ಮೇಲ್‌

ಡೈಲನ್ ಕೇಸಿ, ಪ್ರಾಡಕ್ಟ್‌ ನಿರ್ವಹಣೆಯ ಉಪಾಧ್ಯಕ್ಷ '' ಅಕೌಂಟ್‌ ಕೀ ಸಾಂಪ್ರದಾಯಿಕ ಪಾಸ್‌ ವರ್ಡ್‌ ಬಳಸುವುದಕ್ಕಿಂತ ಇದು ಹೆಚ್ಚು ಸುರಕ್ಷಿತವಾಗಿದೆ'' ಎಂದು ಯಾಹೂ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅಲ್ಲದೇ ಈ ಫೀಚರ್ ಅಕೌಂಟ್‌ ಕೀ ಇಲ್ಲದೇ ಬೇರೆ ಯಾರಾದರೂ ಖಾತೆಯನ್ನು ಪ್ರವೇಶಿಸುವುದನ್ನು ನಿಷೇಧಿಸುತ್ತದೆ ಎಂದಿದ್ದಾರೆ. ಅಲ್ಲದೇ ಇದು ಸರ್ಚ್‌ ಮತ್ತು AOL ಮೇಲ್‌ಗಳಿಗೂ ಸಂಪರ್ಕಿಸುತ್ತದೆ. ಟ್ವಿಟರ್, ಲಿಂಕ್ಡ್‌ಇನ್‌, ಫೇಸ್‌ಬುಕ್‌ಗಳಿಗೆ ಫೋಟೊ ಸೇರಿಸಲು ಮತ್ತು ಸಂಪರ್ಕ ಕಾರ್ಡ್‌ಗಳನ್ನು ಸೇರಿಸಲು ಅನುಕೂಲ ಹೊಂದಿದೆ ಎಂದಿದ್ದಾರೆ.

English summary
Yahoo's next step in password security is to eliminate them altogether.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot