Subscribe to Gizbot

ಫೋನ್ ಸಂಖ್ಯೆಗೂ ಬೇಕಿದೆ ಆಧಾರ್ ಲಿಂಕ್!..ಇಲ್ದಿದ್ರೆ ವರ್ಕ್ ಆಗೊಲ್ಲಾ!!

Written By:

ಕೇಂದ್ರ ಸರ್ಕಾರ ಸರ್ಕಾರದ ಪ್ರತಿಯೊಂದು ಯೋಜನೆಗಳಿಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡುತ್ತಿದ್ದು, ಇದೀಗ ಮೊಬೈಲ್ ಫೋನ್ ಸಂಖ್ಯೆಗೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನುವ ವರದಿಯಾಗಿದೆ.!!

ಸಿಮ್‌ಕಾರ್ಡ್‌ಗಳ ದುರ್ಭಳಕೆ, ಭಯೋತ್ಪಾಧಕ ಶಕ್ತಿಗಳನ್ನು ಮಟ್ಟಹಾಕಲು ಮತ್ತು ದೇಶದ ಸುರಕ್ಷತೆಗಾಗಿ ಮೋದಿ ಸರ್ಕಾರ ಈ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಎಲ್ಲ ಮೊಬೈಲ್‌ ಸಂಖ್ಯೆಗಳನ್ನು ಆಧಾರ್‌ ಸಂಖ್ಯೆಯ ಮೂಲಕ ಪರಿಶೀಲನೆ ನಡೆಸಲು ಶೀಘ್ರದಲ್ಲಿಯೇ ಆದೇಶ ಹೊರಬೀಳುವ ಸಾಧ್ಯತೆಗಳಿವೆ.!!

ಫೋನ್ ಸಂಖ್ಯೆಗೂ ಬೇಕಿದೆ ಆಧಾರ್ ಲಿಂಕ್!..ಇಲ್ದಿದ್ರೆ ವರ್ಕ್ ಆಗೊಲ್ಲಾ!!

ಸರ್ಕಾರದ ಎಲ್ಲಾ ಇ-ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡೊದು ಹೇಗೆ?

ಆಧಾರ್ ಸಂಖ್ಯೆ ಜತೆಗೆ ಸಂಪರ್ಕ ಇಲ್ಲದ ಮೊಬೈಲ್ ನಂಬರ್‌ಗಳನ್ನು 2018ರ ಒಳಗೆ ಡಿಆಕ್ಟಿವೇಟ್ ಮಾಡುವಂತೆ ಟೆಲಿಕಾಂ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ಕಳುಹಿಸಿದೆ ಎನ್ನಲಾಗುತ್ತಿದ್ದು, ಹಳೆಯ ಮೊಬೈಲ್ ನಂಬರ್ ಬಳಕೆ ಮಾಡುತ್ತಿರುವವರು ಮತ್ತೊಮ್ಮೆ ರಿಜಿಸ್ಟರ್ ಮಾಡಿಕೊಳ್ಳಬೇಕಿದೆ.!!

ಫೋನ್ ಸಂಖ್ಯೆಗೂ ಬೇಕಿದೆ ಆಧಾರ್ ಲಿಂಕ್!..ಇಲ್ದಿದ್ರೆ ವರ್ಕ್ ಆಗೊಲ್ಲಾ!!

ಭಯೋತ್ಪಾಧಕ ಶಕ್ತಿಗಳನ್ನು ಮಟ್ಟಹಾಕಲು ಮತ್ತು ದೇಶದ ಸುರಕ್ಷತೆಯ ಕಾರಣದಿಂದಾಗಿ ಈ ಹಿಂದೆ ಸುಪ್ರೀಂ ಕೋರ್ಟ್ ರಾಷ್ಟ್ರದ ಎಲ್ಲ ಮೊಬೈಲ್ ಸಂಖ್ಯೆಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಹೇಳಿತ್ತು. ಹಾಗಾಗಿ, ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.

Read more about:
English summary
mobile number need to verification by Aadhaar. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot