ವಿಜ್ಞಾನ ಕ್ಷೇತ್ರದಲ್ಲಿನ 15 ಭಯಾನಕ ಪ್ರಯೋಗಗಳು

By Suneel
|

ವಿಜ್ಞಾನ ಮತ್ತು ಟೆಕ್ನಾಲಜಿ ಮನುಷ್ಯರ ಜೀವನ ಮಟ್ಟವನ್ನು ಅಭಿವೃದ್ದಿ ಪಡಿಸುತ್ತವೆ. ಅಲ್ಲದೇ ಪ್ರತಿಯೊಂದು ದೇಶದ ಬೆನ್ನೆಲುಬು ಸಹ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದನ್ನು ಮರೆಯುವ ಹಾಗಿಲ್ಲ. ಜೀವನ ಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೇ ಭಯಾನಕ ರೋಗಗಳನ್ನು ಗುಣಪಡಿಸುವುದು ಸಹ ವಿಜ್ಞಾನ ಮತ್ತು ತಂತ್ರಜ್ಞಾನವೇ. ಹಾಗೆ ಇನ್ನೂ ಹೆಚ್ಚು ಉಪಯೋಗವನ್ನು ಹೇಳೋದೇ ಆದ್ರೆ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಕೆಲವರು ಚಿತ್ರಹಿಂಸೆ ನೀಡಲು, ಕೊಲೆ ಮಾಡಲು, ಬ್ರೈನ್‌ವಾಸ್‌ ಮಾಡಲು ಸಹ ಬಳಸುತ್ತಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ದಿಗಳು ಸಹ ಇತ್ತೀಚಿನ ದಿನಗಳಲ್ಲಿ ಬಹುಬೇಗ ಬೆಳಕಿಗೆ ಬರುತ್ತವೆ. ಸುದ್ದಿ ಮಾದ್ಯಮಗಳ ಮೂಲಕ ಜನರು ಸಹ ಅವುಗಳನ್ನು ಶೀಘ್ರವಾಗಿಯೇ ತಿಳಿಯುತ್ತಾರೆ. ಆದರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಯಾರು ತಿಳಿಯದಂತಹ ಭಯಾನಕ ವಿಜ್ಞಾನದ ಪ್ರಯೋಗಗಳನ್ನು ತಿಳಿಸುತ್ತಿದ್ದೇವೆ. ಈ ವಿಜ್ಞಾನ ಪ್ರಯೋಗಗಳು ಹಲವು ಜೀವಗಳನ್ನು ನಾಶಪಡಿಸಿವೆ. ಪ್ರಳಯ ಸಂಭವಿಸುವ ಸಾಮರ್ಥ್ಯವನ್ನು ಸಹ ಇವು ಹೊಂದಿದ್ದವು. ಅಂತಹ ಭಯಾನಕ ವಿಜ್ಞಾನ ಪ್ರಯೋಗಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಪ್ರೌಢಶಾಲೆಯಲ್ಲಿ ಹೇಳದ ವಿಜ್ಞಾನದ ಅದ್ಭುತ ವಿಷಯಗಳು ಯಾವುವು ಗೊತ್ತೇ?

1

1

ಅಮೇರಿಕದ "Pittsburgh's McGowan " ಔಷಧಗಳ ಪುನರ್ ಉತ್ಪಾದನೆ ವಿಶ್ವವಿದ್ಯಾಲಯದಲ್ಲಿ ಪಿಗ್‌ ಆಗ್ಯಾನ್ಸ್‌ಗಳನ್ನು ಬಳಸಿಕೊಂಡು ಮಾನವನ ಬೆರಳನ್ನು ಬೆಳವಣಿಗೆ ಮಾಡುವ ಪ್ರಯೋಗವನ್ನ ಕೈಗೊಳ್ಳಲಾಗಿತ್ತು.
ಮಾಹಿತಿ ಮೂಲ:PubMed

2

2

ಮನಶಾಸ್ತ್ರಜ್ಞ "ಹ್ಯಾರ್ರಿ ಹಾರ್ಲೊ" ಪ್ರಾಣಿಗಳಲ್ಲಿ ಹತಾಶೆ ಹೇಗೆ ಉಂಟಾಗುತ್ತದೆ ಎಂದು ತಿಳಿಯಲು ಯುವ ಕೋತಿ ಮತ್ತು ಅದರ ತಾಯಿಯನ್ನು ಬೇರೆ ಬೇರೆ ಮಾಡಿ 10 ವಾರಗಳ ಕಾಲ ಹ್ಯಾರ್ರಿ ಹಾರ್ಲೊ ಯುವ ಕೋತಿಯನ್ನು ಒಂದೇ ಪಂಜರದಲ್ಲಿ ಕೂಡಿಹಾಕಿದ್ದನು.
ಮಾಹಿತಿ ಮೂಲ: American Journal of Psychiatry

rn

3

ಕೇಳಲೇ ಸ್ವಲ್ಪ ಭಯವಾಗುತ್ತೆ. 1940 ರಲ್ಲಿ ಸೋವಿಯತ್ ರಷ್ಯಾದ ಡಾ|| ಸೆರ್ಗೆಯ್ ಎಂಬುವವರು ಜೀವಂತ ನಾಯಿತ ತಲೆ ತೆಗೆದು ಒಂದು ಹೃದಯ ಶ್ವಾಸಕೋಶ ಗಣಕದಲ್ಲಿ ಜೀವಂತವಾಗಿ ಇಟ್ಟು ತಲೆಯನ್ನು ಮತ್ತೆ ಸೇರಿಸುವ ಪ್ರಯೋಗವನ್ನು ಮಾಡಿದ್ದರು. ಇದು ರಷ್ಯಾದ ಪಶ್ಚಿಮ ಭಾಗದಲ್ಲಿ ಬೃಹತ್‌ ಕೋಲಾಹಲಕ್ಕೆ ಕಾರಣವಾಗಿತ್ತು.
ಮಾಹಿತಿ ಮೂಲ:Time Magazine

4

4

'ನೆಕ್ಸಿಯಾ ಬಯೋಟೆಕ್ನಾಲಜಿ'ಯೂ ಟ್ರ್ಯಾನ್ಸ್‌ಜೆನಿಕ್‌ ಮೇಕೆಯೊಂದನ್ನು ಅಭಿವೃದ್ದಿ ಪಡಿಸಿತ್ತು. ಇದರ ಹಾಲು ಜೇಡದ ರೇಷ್ಮೆ ಪ್ರೋಟೀನ್‌ ಅನ್ನು ಹೊಂದಿತ್ತು. ಈ ಮೇಕೆಯ ಹಾಲು ಸೂಪರ್‌ ಬಯೋಸ್ಟೀಲ್‌ ಪಾಲಿಮರ್‌ ಸಂಸ್ಕರಿಸಲು ಬಳಕೆಯಾಗುತ್ತಿತ್ತು. ಸ್ಪೈಡರ್‌ ಅನ್ನು ಮೇಕೆಗೆ ಕ್ರಾಸ್ ಮಾಡಲಾಗಿದ್ದ ವಿಜ್ಞಾನ ಪ್ರಯೋಗದಿಂದ ವಾತಾವರಣದ ಮೇಲೆ ಯಾವ ರೀತಿಯ ಪ್ರಯೋಗ ಆಗುತ್ತಿತ್ತು ಎಂಬುದು ಮಾತ್ರ ತಿಳಿದಿರಲಿಲ್ಲ.
ಮಾಹಿತಿ ಮೂಲ:Science

5

5

2007 ರಲ್ಲಿ "THN1412" ಡ್ರಗ್‌ನ ರಕ್ತ ಕ್ಯಾನ್ಸರ್ ಚಿಕಿತ್ಸೆಯನ್ನು ಪ್ರಾರಂಭಿಸಿ ಮೊದಲು ಪ್ರಾಣಿಗಳಲ್ಲಿ ಪರೀಕ್ಷೆ ನಡೆಸಲಾಯಿತು. ಪ್ರಾಣಿಗಳಲ್ಲಿ ಪರೀಕ್ಷೆ ಸುರಕ್ಷಿತವಾಗಿ ನಡೆದ ನಂತರ ಅದನ್ನು ಮಾನವನಲ್ಲಿ ಪರೀಕ್ಷೆ ನಡೆಸಲು ಮುಂದಾದಾಗ ಈ ಚಿಕತ್ಸೆಯು ಮಾನವನಿಗೆ ಪ್ರಾಣಿಗಳಿಗಿಂತ 500 ಪಟ್ಟು ಕಡಿಮೆ ಅಸುರಕ್ಷಿತ ಎಂದು ತಿಳಿಯಲಾಯಿತು.
ಮಾಹಿತಿ ಮೂಲ: New Scientist

6

6

ಅಮೇರಿಕದ ಜೀವವಿಜ್ಞಾನ ಅಧ್ಯಯನ ಸಂಸ್ಥೆ "ಸಾಲ್ಕ್"ನಲ್ಲಿಯ ಸಂಶೋಧಕರು ಭ್ರೂಣ ಇಲಿಗೆ ಭ್ರೂಣೀಯ ಕಾಂಡಕೋಶಗಳನ್ನು ಇನ್‌ಜೆಕ್ಟ್‌ ಮಾಡುವ ಮುಖಾಂತರ ಮಾನವನ ಮೆದುಳನ್ನು ಬೆಳವಣಿಗೆ ಮಾಡುವುದು ಹೇಗೆ ಎಂಬುದನ್ನು ಕಂಡುಹಿಡಿದಿದ್ದರು. ಇದು ಸೂಪರ್‌ ಸ್ಮಾರ್ಟ್‌ ಇಲಿಗಳ ಮಕ್ಕಳನ್ನು ಸೃಷ್ಟಿಸಿತ್ತು.
ಮಾಹಿತಿ ಮೂಲ:Salk Institute

7

7

ಮೊಟ್ಟ ಮೊದಲ ಬಾರಿಗೆ 1998 ರಲ್ಲಿ RFID ಚಿಪ್‌ ಅನ್ನು ಐಡೆಂಟಿಟಿ ಕೋಡ್‌ ಆಗಿ ಮಾನವನಿಗೆ ಇಂಜೆಕ್ಟ್ ಮಾಡಲಾಗಿತ್ತು. ಈ ತಂತ್ರಜ್ಞಾನದಿಂದ ವ್ಯಕ್ತಿಯು ಎಲ್ಲಗೆ ಹೋಗುತ್ತಾನೆ ಎಂಬುದನ್ನು ಟ್ರ್ಯಾಕ್‌ ಮಾಡಲು ಬಳಸಲಾಗುತ್ತಿತ್ತು. ಪ್ರಸ್ತುತದಲ್ಲಿಯೂ ಕೆಲವು ಕಂಪನಿ, ಆಸ್ಪತ್ರೆಗಳು, ಎಫ್‌ಡಿಎ ಅನುಮತಿಗಾಗಿ ಐಡೆಂಟಿಟಿ ಕೋಡ್‌ ಅನ್ನು ಇಂಜೆಕ್ಟ್‌ ಮಾಡುತ್ತವೆ. ಕಂಪನಿಯ ಬಗ್ಗೆ, ಬ್ಯುಸಿನೆಸ್‌ ಅನ್ನು ಕಾಪಾಡಿಕೊಳ್ಳಲು ಹೀಗೆ ಮಾಡಲಾಗುತ್ತದೆ.

8

8

ಇದೊಂದು ಫೇಮಸ್‌ ಆಗದ ಪ್ರಯೋಗ. 1960 ರಲ್ಲಿ ಸ್ಟಾನ್ಲಿ ಎಂಬುವವರು "ಶಾಕ್" ಆದ ಬಗ್ಗೆ ಜನರು ಹೇಗೆ ವ್ಯಕ್ತ ಪಡಿಸುತ್ತಾರೆ ಎಂದು ತಿಳಿಯುವ ಮಾನಸಿಕ ಅಧ್ಯಯನವಾಗಿತ್ತು. ಆದರೆ ವ್ಯಕ್ತಿಗಳು ಹೆಚ್ಚಿನದಾಗಿ ವೈದ್ಯರ ಮುಂದೆಯು ಸುಳ್ಳು ಹೇಳಿ ನಂಬಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದು ತಿಳಿಯಿತು.
ಮಾಹಿತಿ ಮೂಲ: Journal of Abnormal and Social Psychology

9

9

1932-1972 ರವರೆಗೆ ಸಿಫಿಲಿಸ್‌ ರೋಗ ಇದ್ದ 399 ಆಫ್ರಿಕನ್‌ ಮತ್ತು ಅಮೇರಿಕನ್‌ ರೈತರು ಅಲಬಮಾದ ಟುಸ್ಕೆಗೀ ಪ್ರದೇಶದಲ್ಲಿ ವಿಜ್ಞಾನಿಗಳಿಂದ ಉಚಿತ ಚಿಕಿತ್ಸೆಗೆ ಒಳಗಾಗಿದ್ದರು. ಇದು ಮೊಟ್ಟ ಮೊದಲ ಪರಿಣಾಮಕಾರಿ ಪೆನ್ಸಿಲಿನ್‌ ಚಿಕಿತ್ಸೆ ಆಗಿತ್ತು. ವಿಶೇಷ ಅಂದ್ರೆ ವಿಜ್ಞಾನಿಗಳು ಈ ಚಿಕಿತ್ಸೆಯನ್ನು ಪ್ರಯೋಗವಾಗಿ ನೀಡಿದ್ದರು. ಈ ಚಿಕಿತ್ಸೆ ಹೇಗೆ ರೋಗದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಯಲು ರೈತರಿಗೆ ನೀಡಿದ್ದರು.
ಮಾಹಿತಿ ಮೂಲ: Journal of Health Care for the Poor and Underserved

10

10

ಬಯೋಟೆಕ್‌ ಸಿಸ್ಟಮ್‌ ವಿಜ್ಞಾನಿಗಳಿಗೆ ಮೆದುಳಿನಲ್ಲಿರುವ ನರಗಳನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತದೆ. ವಿವಿಧ ಬಣ್ಣಗಳ ಬೆಳಕಿನ ಮೂಲಕ ಇದು ಸಾಧ್ಯ. ಆದರೆ ಇದಕ್ಕೆ ಮೆದುಳು ಕಸಿ ಅಗತ್ಯವಿದೆ ಎನ್ನಲಾಗಿತ್ತು. ಯಾರು ತಾನೆ ಇದಕ್ಕೆ ಒಪ್ಪುತ್ತಾರೆ. ಒಮ್ಮೆ ಚಿಂತಿಸಿ ಮೆದುಳಿಗೆ ಆಪ್ಟೊಜೆನೆಟಿಕ್ಸ್‌ ಅನ್ನು ಬಳಸಲು ಸಾಧ್ಯವಿದೆಯೇ.
ಮಾಹಿತಿ ಮೂಲ: Wired

11

11

ಅಮೇರಿಕದ ಖಾಸಗಿ ವಿಶ್ವವಿದ್ಯಾಲಯದ ಪ್ರೊ. ಜೋಶ್‌ ಡೆಲ್ಲಡೊ "Stimocever" ಅನ್ನು ಸಂಶೋಧಿಸಿದ್ದರು. ಇದು ಮಾನವನ ಗುಣಸ್ವಭಾವವನ್ನು ನಿಯಂತ್ರಿಸಲು ಕಂಡುಹಿಡಿಯಲಾದ ರೇಡಿಯೋ ಕಸಿ. ಪರಿಣಾಮಕಾರಿಯಾಗಿ ಈ ಪ್ರಯೋಗವನ್ನು ಜೋಶ್‌ರವರು ವಿವರಿಸಿದ್ದರು. ಒಮ್ಮೆ ಮಹಿಳೆಗೆ ತೊಂದರೆಯಾಗಿ ಅಲ್ಸರ್‌ ಬೆಳವಣಿಗೆಯು ಸಹ ಆಕೆಯ ಬೆರಳಿನಲ್ಲಿ ಅಭಿವೃದ್ದಿಯಾಗಲು ಪ್ರಾರಂಭವಾಗಿತ್ತು. ನಂತರದಲ್ಲಿ ಜೋಶ್ ಈ ಪ್ರಯೋಗವನ್ನು ನಿಲ್ಲಿಸಿದರು.
ಮಾಹಿತಿ ಮೂಲ: Pain journal

12

12

ಎಲ್ಲರನ್ನು ಟ್ರ್ಯಾಕ್‌ ಮಾಡುವ ರಿಮೋಟ್‌ ಕಂಟ್ರೋಲ್‌ ಪ್ರಾಣಿಗಳನ್ನು ಅಭಿವೃದ್ದಿಪಡಿಸಿ ಆಗಿದೆ. ಅಂತೆಯೇ ಸಂಶೋಧಕರು ಸೈಬರ್‌ ನಿಯಂತ್ರಿತ ಇಲಿ ಮತ್ತು ರೆಕ್ಕೆಗಳನ್ನು ಕಂಡುಹಿಡಿದಿದ್ದಾರೆ. ಇವುಗಳು ರಿಮೋಟ್ ಮೂಲಕ ನಿಯಂತ್ರಣ ಹೊಂದುತ್ತವೆ. ಇವುಗಳನ್ನು ಮಿಲಿಟರಿಗೆ ಅಳವಡಿಸುವಲ್ಲಿ ಮಿಲಿಟರಿ ವಿಭಾಗಗಳು ಹೆಚ್ಚು ಆಕಾಂಕ್ಷಿಯಾಗಿವೆ.
ಮಾಹಿತಿ ಮೂಲ: Technology Revied, Nature

rn

13

ವೀಡಿಯೋ ನೋಡಿ. ಈ ಯಂತ್ರವು ಯುದ್ಧಕ್ಕೆ ಬಳಸಬಹುದಾದ ಏಕ ಮಾತ್ರ ಒನ್‌ ಮ್ಯಾನ್‌ ಅರ್ಮಿ ಇದ್ದಂತೆ. ಹಾರುವ ಮೂಲಕ ವಿರೋಧಿ ಮಿಸೆಲ್‌ಗಳನ್ನು ಟ್ರ್ಯಾಕ್‌ ಮಾಡಿ ಅವುಗಳನ್ನು ನಾಶಮಾಡಬಲ್ಲದು. ಇದರ ಪರೀಕ್ಷೆ ನಡೆಸಿದ ವೀಡಿಯೋ ನೋಡಿ.
ಮಾಹಿತಿ ಮೂಲ: Missile Defense Agency

14

14

"ನಿಕೊಲ ತೆಸ್ಲಾ", ಇವರನ್ನು ಹುಚ್ಚು ವಿಜ್ಞಾನಿ ಎಂತಲೇ ಕರೆಯುತ್ತಾರೆ. ಇವರು ಅಭಿವೃದ್ದಿ ಪಡಿಸಿದ ("ಕಿರಣ ಶಸ್ತ್ರ") ಯುದ್ಧ ವೆಪನ್ 200 km ದೂರದಲ್ಲಿರುವ 10,000 ವಿಮಾನಗಳನ್ನು ಒಮ್ಮೆಯೇ ಕೆಳಗೆ ಇಳಿಸುವ ಸಾಮರ್ಥ್ಯವನ್ನು ಹೊಂದಿದ್ದು. ನಿಕೊಲ ತೆಸ್ಲಾ ಈ ವೆಪನ್‌ ಅನ್ನು ಮಾರಾಟ ಮಾಡಲು ಪ್ರಯತ್ನಿಸಿದರು ಆದರೆ "ಡೆತ್‌ ರೇ"ವೆಪನ್‌ ಭಯಾನಕವಾಗಿದ್ದರಿಂದ ಯಾರೋಬ್ಬರು ಸಹ ಖರೀದಿಸಲಿಲ್ಲ.
ಮಾಹಿತಿ ಮೂಲ:New York Times

15

15

ಭೌತ ವಿಜ್ಞಾನಿ ರೊನಾಲ್ಡ್‌ ಮ್ಯಾಲ್ಲೆಟ್ಟ್ ಮುಚ್ಚಿದ ಟೈಮ್‌ ರೇಖೆ ರಚಿಸಲು ರಿಂಗ್ ಲೇಸರ್‌ ಅನ್ನು ಬಳಸಿದರು. ಇದು ಟೈಮ್‌ ಪ್ರಯಾಣ ಮಾಡಲು ಅನುಮತಿ ನೀಡುತ್ತಿತ್ತು. ಡಿವೈಸ್‌ನಲ್ಲಿ ಟೈಮ್‌ ಆಗುವ ಮೊದಲೇ ನಿರ್ಧಿಷ್ಟ ಸ್ಥಳಕ್ಕೆ ತಲುಪುವ ವ್ಯಕ್ತಿ ನೀವಾಗಬಹುದಿತ್ತು. ಆದರೆ ತಪ್ಪಾಗುತ್ತಿದ್ದದ್ದು ಏನು?
ಮಾಹಿತಿ ಮೂಲ:Mallett's proposal for the time machine

ಗಿಜ್‌ಬಾಟ್‌

ಗಿಜ್‌ಬಾಟ್‌

2016 ರಲ್ಲಿ ಐಟಿ ಉದ್ಯೋಗಿಗಳಿಗೆ ಬೇಡಿಕೆ, ಯೂತ್ಸ್‌ಗಳಿಗೆ ಬಂಪರ್‌ ಆಫರ್2016 ರಲ್ಲಿ ಐಟಿ ಉದ್ಯೋಗಿಗಳಿಗೆ ಬೇಡಿಕೆ, ಯೂತ್ಸ್‌ಗಳಿಗೆ ಬಂಪರ್‌ ಆಫರ್

ವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳುವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
15 of the Scariest Science Experiments Ever Conducted. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X