ಭಯಸೃಷ್ಟಿಸುತ್ತಿರುವ ಸೈಬೀರಿಯಾದ ನಿಗೂಢ ಕುಳಿ

By Shwetha
|

ಸೈಬೀರಿಯಾದ ಯಾಮಲ್ ಪೆನಿನ್‌ಸುಲಾದಲ್ಲಿ ರಹಸ್ಯಮಯವಾದ ರಂಧ್ರ ಪರಿವರ್ತಿತವಾದ ಕೊಳವೊಂದು ಕಂಡುಬಂದಿದ್ದು ಇದರ ಆಳ 50 ಮೀಟರ್‌ಗಳಾಗಿವೆ. ಎಂಬುದಾಗಿ ರಷ್ಯಾದ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಗ್ಯಾಸ್ ಸ್ಫೋಟಗಳಿಂದಾಗಿ ಈ ರೀತಿಯ ರಂಧ್ರವಿರುವ ಕೊಳಗಳು ಉಂಟಾಗಿರಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಇದರ ಸುತ್ತಲೂ ಸಣ್ಣ ಕುಳಿಗಳನ್ನು ಕೂಡ ವಿಜ್ಞಾನಿಗಳು ಪತ್ತೆಮಾಡಿದ್ದು, ಇದೆಲ್ಲಾ ಸಂಪೂರ್ಣವಾಗಿ ರಷ್ಯಾದ ಎಣ್ಣೆ ಮತ್ತು ಗ್ಯಾಸ್ ಉತ್ಪನ್ನ ಪ್ರದೇಶಗಳಿಗೆ ಸೇರಿದವುಗಳಾಗಿವೆ. ಇಂದಿನ ಲೇಖನದಲ್ಲಿ ಈ ರಹಸ್ಯಮಯವಾದ ಕುಳಿಗಳ ಕುರಿತು ದೊರಕಿರುವ ಇನ್ನಷ್ಟು ಮಾಹಿತಿಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಓದಿರಿ: ನಾಸಾ ಚಂದ್ರನ ಮೇಲೆ ಹಿಂದಿರುಗಿ ಹೋಗದಿರಲು ಕಾರಣವೇನು ಗೊತ್ತೇ?

#1

#1

ಮೊದಲಿಗೆ ಈ ಕುಳಿಗಳಲ್ಲಿ ನೀರು ತುಂಬಿಕೊಂಡು ನಂತರ ಇದು ಸಾಗರವಾಗಿ ಪರಿವರ್ತನೆಗೊಳ್ಳುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ಕುಳಿಯಲ್ಲಿರುವ ನೀರಿನ ಮಟ್ಟ ಏರಿಕೆಯಾಗುತ್ತಲೇ ಹೋಗುತ್ತಿದೆ.

#2

#2

ಸರಕಾರಿ ವೆಬ್‌ಸೈಟ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು ಈ ಕುಳಿ ಉಂಟಾಗಿರುವುದು ಮತ್ತು ಅದರಲ್ಲಿ ನೀರು ತುಂಬಿಕೊಂಡು ಅದು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಭಯಾನಕ ವಾತಾವರಣವನ್ನು ಸೃಷ್ಟಿ ಮಾಡಿದೆ.

#3

#3

ನಿಜಕ್ಕೂ ಇದರ ಗಾತ್ರ ನನಲ್ಲಿ ಆಶ್ಚರ್ಯವನ್ನುಂಟುಮಾಡುತ್ತಿದ್ದು ಇದು ತುಂಬಾ ದೊಡ್ಡದಾಗಿದೆ ಎಂಬುದು ಜಪಾನ್‌ನ ಬರಹಗಾರ ಆಶಿ ಶಿಂಬುನ್ ಮಾತಾಗಿದೆ. ಈತ ವೈಜ್ಞಾನಿಕ ಆರೋಹಣಕ್ಕೆ ಜತೆಗೂಡಿದ್ದಾನೆ.

#4

#4

ಹಿಮನದಿ ಕರಗುವ ಧ್ವನಿ ನಿಜಕ್ಕೂ ನನ್ನಲ್ಲಿ ಅದ್ಭುತವನ್ನುಂಟು ಮಾಡುತ್ತಿದೆ ಎಂಬುದು ಈ ಬರಹಗಾರನ ಅಭಿಪ್ರಾಯವಾಗಿದೆ. ಜುಲೈನಲ್ಲಿ ಮೂರನೇ ಭಾಗದಷ್ಟು ಈ ಕುಳಿಯಲ್ಲಿ ಹಿಮ ಮತ್ತು ಮಳೆಯ ನೀರು ತುಂಬಿತ್ತು.

#5

#5

ವಿಶೇಷ ಸೆನ್ಸಾರ್‌ಗಳನ್ನು ಬಳಸಿಕೊಂಡು ವಿಜ್ಞಾನಿಗಳು ಈ ಕುಳಿಯಲ್ಲಿರುವ ನೀರನ್ನು ಪರಿಶೀಲಿಸಿದ್ದಾರೆ. ಆದರೆ ಇದರ ಫಲಿತಾಂಶಗಳು ಭಯವನ್ನು ಹುಟ್ಟುಹಾಕಿಸುವಂತಿದೆ.

#6

#6

ಒಟ್ಟಾರೆ ಹೇಳುವುದಾದರೆ ಈ ಕುಳಿಯ ಇಳಿಯುವಿಕೆ ಬಹಳ ತೀವ್ರವಾಗಿದೆ. ಕುಳಿಯಲ್ಲಿರುವ ಮಣ್ಣು ಹಿಡಿತದಲ್ಲಿ ಇಲ್ಲ ಮತ್ತು ಇದು ಸಡಿಲಗೊಳ್ಳುತ್ತಿದೆ ಎಂಬುದು ವಿಜ್ಞಾನಿ ವ್ಲಾದಿಮಿರ್ ಪುಶ್‌ಕರಿಯೊ ಮಾತಾಗಿದೆ.

#7

#7

ಈ ಹಿಂದಿನ ವರ್ಷದಲ್ಲಿ, ಕುಳಿಯ ಸುತ್ತಲೂ 20 ಮಿನಿ ಸಣ್ಣ ಕುಳಿಗಳು ಪತ್ತೆಯಾಗಿದ್ದು ಸ್ಥಳೀಯರು ಇನ್ನಷ್ಟನ್ನು ಕುಳಿಯ ಸುತ್ತಲೂ ಪತ್ತೆಹಚ್ಚಿದ್ದಾರೆ.

#8

#8

ಇನ್ನಷ್ಟು ಅನ್ವೇಷಣೆಯಿಂದ ಬಹುಶಃ ಇದು ಜಾಗತಿಕ ತಾಪಮಾನದಿಂದ ಉಂಟಾಗಿರುವ ಕುಳಿಯಾಗಿರಬಹುದು ಎಂಬ ಊಹೆಯೂ ಇದೆ.

#9

#9

ಆದರೆ ವಿಜ್ಞಾನಿಗಳು ಈ ಕುಳಿ ಉಂಟಾಗಿರುವುದು ಗ್ಯಾಸ್ ಸ್ಫೋಟದಿಂದಾಗಿರಬಹುದು ಎಂಬ ದಾಖಲೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದಕ್ಕಾಗಿ ಆಯಿಲ್ ಮತ್ತು ಗ್ಯಾಸ್ ರೀಸರ್ಚ್ ವಿದ್ಯಾನಿಲಯಗಳನ್ನು ಸಂಪರ್ಕಿಸಿ ಅಲ್ಲಿ ಕೂಡ ವಿಷದವಾದ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ.

#10

#10

ಜಾಗತಿಕ ತಾಪಮಾನದಿಂದಾಗಿ ಪರ್ಮಾಫ್ರಾಸ್ಟ್ ಕರಗುವಿಕೆಯಿಂದಾಗಿ ಕುಳಿಗಳ ರಚನಾ ಪ್ರಕ್ರಿಯೆ ಉಂಟಾಗುತ್ತಿದೆ.

#11

#11

ಭೂಮಿಯ ಆಳದಲ್ಲಿರುವ ಗ್ಯಾಸ್ ಸ್ಫೋಟದಿಂದಾಗಿ ಮಣ್ಣು ಏರಿಕೆಯಾಗಿ ಪರ್ವತ ಮಾದರಿಯ ರಚನೆ ಉಂಟಾಗುತ್ತಿದೆ ಎಂದಾಗಿದೆ.

#12

#12

ಅಂತೂ ಈ ಕುಳಿಯ ರಚನೆ ಎಲ್ಲರಲ್ಲೂ ಭಯವನ್ನು ಉಂಟುಮಾಡುತ್ತಿದ್ದು ಮಣ್ಣಿನ ಸೋರಿಕೆಯಾಗುತ್ತಿರುವುದು ಇನ್ನಷ್ಟು ದಿಗಿಲನ್ನು ಸ್ಥಳೀಯರಲ್ಲಿ ಉಂಟುಮಾಡುತ್ತಿದೆ.

#13

#13

ರಷ್ಯಾದ ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು ಏರುತ್ತಿರುವ ತಾಪಮಾನ ಪರ್ಮಾಫ್ರಾಸ್ಟ್ ಕರಗುವಿಕೆಯನ್ನು ಹೆಚ್ಚಿಸಲಿದೆ ಮತ್ತು ಭೂಮಿಯ ಅಂತರಾಳದಲ್ಲಿರುವ ದೊಡ್ಡ ಪ್ರಮಾಣದ ಗ್ಯಾಸ್ ಹೈಡ್ರೇಟ್ಸ್ ಸಂಗ್ರಹವಾಗುತ್ತಿದ್ದು, ವಾತಾವರಣದ ಮೇಲೆ ಇದು ಋಣಾತ್ಮಕ ಪ್ರಭಾವವನ್ನು ಬೀರಲಿದೆ.

#14

#14

ಇನ್ನಷ್ಟು ಹಾನಿ ಸಂಭವಿಸುವ ಮುನ್ನವೇ ಈ ರಹಸ್ಯಮಯ ಕುಳಿಯ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ನಡೆಸಬೇಕು ಎಂಬುದಾಗಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

#15

#15

ಈ ಕುಳಿಯ ಆಳ ಪ್ರಾರಂಭದಲ್ಲಿ ಚಿಕ್ಕದಾಗಿದ್ದರೂ ಮಣ್ಣಿನ ಸವಕಳಿ ಉಂಟಾಗುತ್ತಾ ಇದು ಇನ್ನಷ್ಟು ಆಳವನ್ನು ಪಡೆದುಕೊಳ್ಳುತ್ತಿದೆ. ಒಂದು ರೀತಿಯ ಭಯವನ್ನು ಇದು ಸೃಷ್ಟಿ ಮಾಡುತ್ತಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಚ್ಚರಿ: ಈತನ ಕೃತಕ ಕೈಯಲ್ಲಿದೆ ಡ್ರೋನ್, ಫೋನ್ ಬ್ಯಾಟರಿ ಚಾರ್ಜರ್</a><br /><a href=ಕರಾಳ ತಾಣದಲ್ಲಿದೆ ನಿಮ್ಮನ್ನು ತಲ್ಲಣಗೊಳಿಸುವ ಸಂಗತಿಗಳು
ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ" title="ಅಚ್ಚರಿ: ಈತನ ಕೃತಕ ಕೈಯಲ್ಲಿದೆ ಡ್ರೋನ್, ಫೋನ್ ಬ್ಯಾಟರಿ ಚಾರ್ಜರ್
ಕರಾಳ ತಾಣದಲ್ಲಿದೆ ನಿಮ್ಮನ್ನು ತಲ್ಲಣಗೊಳಿಸುವ ಸಂಗತಿಗಳು
ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ" loading="lazy" width="100" height="56" />ಅಚ್ಚರಿ: ಈತನ ಕೃತಕ ಕೈಯಲ್ಲಿದೆ ಡ್ರೋನ್, ಫೋನ್ ಬ್ಯಾಟರಿ ಚಾರ್ಜರ್
ಕರಾಳ ತಾಣದಲ್ಲಿದೆ ನಿಮ್ಮನ್ನು ತಲ್ಲಣಗೊಳಿಸುವ ಸಂಗತಿಗಳು
ಬಾಹ್ಯಾಕಾಶ ನೌಕೆ ಲಾಂಚ್ ಇಸ್ರೋದಿಂದ ಇತಿಹಾಸ ನಿರ್ಮಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
The mysterious hole-turned-lake in Siberia’s Yamal peninsula has expanded to 50 meters in depth, Russian scientists said. Researchers have been puzzled by its origins saying it was likely caused by gas explosions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X