ಫೇಸ್‌ಬುಕ್ ದುರ್ಬಳಕೆ ನಿಮಗೂ ಈ ಸಂಗತಿಗಳು ತಿಳಿದಿರಲಿ!

By Shwetha
|

ಫೇಸ್‌ಬುಕ್ ಜಾಲತಾಣ ಇಂದು ಹೆಚ್ಚು ಜನಪ್ರಿಯಗೊಂಡಿದ್ದು ವ್ಯವಹಾರ, ಸಂಪರ್ಕ, ಸಂವಹನ ಹೀಗೆ ಹತ್ತು ಹಲವು ವಿಧದಲ್ಲಿ ಈ ತಾಣ ಬಳಕೆದಾರರಿಗೆ ಸಹಾಯ ಮಾಡುತ್ತಿದೆ. ಆದರೆ ಈ ತಾಣದಲ್ಲಿ ಕೂಡ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು ಇದನ್ನು ತಡೆಯುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿರುವೆವು.

ಓದಿರಿ: ಶೀಘ್ರದಲ್ಲಿ ಫೇಸ್‌ಬುಕ್‌ ಬಳಕೆದಾರರು ತಮ್ಮ ಪೋಸ್ಟ್‌ನಿಂದ ಹಣ ಗಳಿಸಬಹುದು!!

ಯಾವುದೇ ಮಾಧ್ಯಮ ಜನಪ್ರಿಯಗೊಳ್ಳುತ್ತಿದೆ ಎಂಬ ಸಂದರ್ಭದಲ್ಲಿ ಅದನ್ನು ಬಳಸುವಾಗ ನಾವು ಕೊಂಚ ಎಚ್ಚರಿಕೆಯನ್ನು ಪಾಲಿಸಲೇಬೇಕು. ಈ ಎಚ್ಚರಿಕೆ ಕ್ರಮಗಳು ಹೇಗಿರಬೇಕು ಎಂಬುದನ್ನೇ ಇಂದು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ. ಈ ಎಚ್ಚರಿಕಾ ನಿಯಮಗಳನ್ನು ಪಾಲಿಸಿಕೊಂಡು ಫೇಸ್‌ಬುಕ್ ಅನ್ನು ಸುರಕ್ಷಿತವಾಗಿ ನಿಮಗೆ ಬಳಸಿಕೊಳ್ಳಬಹುದಾಗಿದೆ.

#1

#1

ಫೇಸ್‌ಬುಕ್‌ನಲ್ಲಿ ನೀವು ಅಪ್‌ಲೋಡ್ ಮಾಡುವ ಚಿತ್ರಗಳು ಅಪಾಯಕಾರಿಯಾಗಿರುತ್ತವೆ. ಇವುಗಳನ್ನು ಅಪ್‌ಲೋಡ್ ಮಾಡುವಾಗ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನೀವು ಇತರರಿಗೆ ತೋರಿಸಲು ಇಚ್ಛಿಸದೇ ಇರುವ ಚಿತ್ರಗಳನ್ನು ನಿಮ್ಮ ಸ್ನೇಹಿತರು ಅಪ್‌ಲೋಡ್ ಮಾಡುತ್ತಿದ್ದಾರಾ ಎಂಬುದನ್ನು ಗಮನಿಸಿಕೊಳ್ಳಿ.

#2

#2

ಫೇಸ್‌ಬುಕ್ ಫೇಕ್ ಪ್ರೊಫೈಲ್ ರಚನೆಯನ್ನು ತಡೆಯುವುದಿಲ್ಲ. ಯಾರೇ ಆದರೂ ನಿಮ್ಮ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಫೇಕ್ ಪ್ರೊಫೈಲ್ ಅನ್ನು ಸಿದ್ಧಪಡಿಸಬಹುದು. ನಿಮ್ಮ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹುಡುಕಾಡಿ ನಕಲಿ ಪ್ರೊಫೈಲ್ ಅನ್ನು ನೈಜಗೊಳಿಸಬಹುದು.

#3

#3

ಫೇಸ್‌ಬುಕ್‌ನಲ್ಲಿ ಕೆಲವರು ಸ್ಟಾಕಿಂಗ್ ಮಾಡುತ್ತಾರೆ. ನೀವು ಸ್ನೇಹಿತರ ಕೋರಿಕೆಯನ್ನು ಸ್ವೀಕರಿಸಿದಲ್ಲಿ ಇದನ್ನು ಅವಗಣನೆ ಮಾಡಬಹುದಾಗಿದೆ.

#4

#4

ಫೇಸ್‌ಬುಕ್ ಒಂದು ವೆಬ್‌ಸೈಟ್ ಆಗಿದ್ದು ನಿಜವಾದ ಜೀವನವಲ್ಲ. ನಿಮ್ಮ ಸಂತಸ ಮತ್ತು ದುಃಖದ ಸಮಯಗಳನ್ನು ಇದರಲ್ಲಿ ಹಂಚಿಕೊಳ್ಳುವುದು ಒಳ್ಳೆಯದೇ ಆಗಿದ್ದರೂ ತೀರಾ ವೈಯಕ್ತಿಕ ವಿಚಾರಗಳನ್ನು ತಾಣದಲ್ಲಿ ಹಂಚಿಕೊಳ್ಳದಿರಿ.

#5

#5

ನೀವು ವೈಯಕ್ತಿಕ ಸಂಗತಿಗಳನ್ನು ತಾಣದಲ್ಲಿ ಹಂಚಿಕೊಂಡಂತೆಲ್ಲಾ ನೀವು ತೊಂದರೆಗೆ ಸಿಲುಕುವುದು ಖಂಡಿತ. ನಿಮ್ಮನ್ನು ಮಿಸ್ ಯೂಸ್ ಮಾಡಿಕೊಳ್ಳುವವರೂ ಇದ್ದು ಈ ಬಗ್ಗೆ ಜಾಗರೂಕತೆಯಿಂದ ಇರಿ.

#6

#6

ನಿಮ್ಮನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಾರೆಂಬ ಸಂಗತಿ ಖಾತ್ರಿ ಇದ್ದಲ್ಲಿ ವೈಯಕ್ತಿಕ ಮಾಹಿತಿಗಳನ್ನು ಪೋಸ್ಟ್ ಮಾಡುವುದು ಅಥವಾ ಟ್ಯಾಗ್ ಮಾಡುವುದನ್ನು ಮಾಡದಿರಿ. ನಿಮ್ಮ ಸ್ನೇಹಿತರಿಗೂ ನೀವು ಇರುವ ಫೋಟೋಗಳನ್ನು ಟ್ಯಾಗ್ ಮಾಡದಿರಲು ಹೇಳಿ. ಟ್ಯಾಗ್ ಸೆಟ್ಟಿಂಗ್ ಅನ್ನು ಬದಲಾಯಿಸಲು ಮರೆಯದಿರಿ.

#7

#7

ಫೇಸ್‌ಬುಕ್‌ನಲ್ಲಿ ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಮರೆಯಬೇಡಿ. ನೀವು ಶೇರ್ ಮಾಡಿರುವ ವಿಷಯಗಳನ್ನು ಅಜ್ಞಾತ ವ್ಯಕ್ತಿಗಳೂ ನೋಡುವ ಸಾಧ್ಯತೆ ಇರುವುದರಿಂದ ಇದನ್ನು ಅವರು ಕೆಟ್ಟದ್ದಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

#8

#8

ಫೇಸ್‌ಬುಕ್‌ನ ದುರ್ಬಳಕೆಯಾಗಿದೆ ಸ್ಪ್ಯಾಮಿಂಗ್. ಇದನ್ನು ನೀವು ನಿರ್ಲಕ್ಷಿಸದೇ ಇದ್ದಲ್ಲಿ ಇದನ್ನು ನಿಯಂತ್ರಿಸಲಾಗುವುದಿಲ್ಲ. ನಿಮ್ಮನ್ನು ಸ್ಪ್ಯಾಮ್ ಮಾಡುವವರನ್ನು ಬ್ಲಾಕ್ ಮಾಡಿ ಹಾಗೂ ಸ್ಪ್ಯಾಮ್ ವರದಿ ಸಲ್ಲಿಸಿ.

#9

#9

ಗಂಭೀರ ವಿಷಯಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ತುಂಬಾ ಸುಲಭ. ಇದನ್ನು ನಿಜವೆಂದೇ ನಂಬುವವರು ಹೆಚ್ಚಿನ ಜನರಿರುತ್ತಾರೆ. ಸುದ್ದಿಯ ಮೂಲವನ್ನು ಯಾವಾಗಲೂ ಪರಿಶೀಲಿಸಿ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಈ ಸುದ್ದಿ ಬಂದಿದೆಯೇ ಎಂಬುದನ್ನು ಮನಗಾಣಿ.

#10

#10

ಫೇಸ್‌ಬುಕ್ ಒಂದು ಸುಂದರ ತಾಣವಾಗಿದ್ದು ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದನ್ನು ದುರ್ಬಳಕೆ ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ಈ ಕೂಡಲೇ ನಿಲ್ಲಿಸಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು </a><br /><a href=ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು" title="ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು" />ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಭೇಟಿ ನೀಡಿ

ಭೇಟಿ ನೀಡಿ

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
We will talk about top 10 misuse of Facebook and you can make your profile safer by taking sufficient steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X