ರಾತ್ರೋರಾತ್ರಿ ಇಂಟರ್‌ನೆಟ್‌ನಲ್ಲಿ ಜಗತ್ಪ್ರಸಿದ್ದರಾದವರು ಈ 7 ಜನರು!!

|

ಪ್ರತಿಯೋರ್ವರಿಗೂ ನಾನು ಇಡೀ ವಿಶ್ವದಲ್ಲಿಯೇ ಗುರುತಿಸಿಕೊಳ್ಳುವಂತಹ ಸೆಲೆಬ್ರಿಟಿ ವ್ಯಕ್ತಿ ನಾನಾಗಿರಬೇಕು ಎಂಬ ಆಸೆ ಇರುತ್ತದೆ.! ಆದರೆ, ಈ ಜಗತ್ತು ಸಾಧಕರಿಗೆ ಮಾತ್ರ ಸೆಲೆಬ್ರಿಟಿ ಎಂಬ ಪಟ್ಟವನ್ನು ನೀಡುತ್ತದೆ.! ಅದಾಗ್ಯೂ ಸಹ ವಿಶ್ವದಲ್ಲಿ ಕೆಲವರು ರಾತ್ರೋರಾತ್ರಿ ಜಗತ್ಪ್ರಸಿದ್ದವಾದವರಿದ್ದಾರೆ. ಒಂದೇ ದಿನದಲ್ಲಿ ಎಲ್ಲಾ ಮೀಡಿಯಾಗಳಲ್ಲಿ ಸ್ಥಾನ ಪಡೆದಿದ್ದಾರೆ.!!

ಭಾರತೀಯರ ಮನ ಗೆದ್ದಿರುವ ಯುವತಿ

ಇನ್ನು ಕಳೆದ ಎರಡು ದಿನಗಳಿಂದಲೂ ಕೇರಳದ 'ಪ್ರಿಯ ವಾರಿಯರ್' ಎಂಬ ಯುವತಿಯದ್ದೇ ಸುದ್ದಿ. ಕೇವಲ ಒಂದು ವೀಡಿಯೋದಿಂದ ಇಡೀ ಭಾರತೀಯರ ಮನ ಗೆದ್ದಿರುವ ಯುವತಿ ಇಂದು ನ್ಯಾಶನಲ್ ಕ್ರಷ್ ಆಗಿದ್ದಾರೆ.! ಒಂದೇ ದಿನದಲ್ಲಿ ಪ್ರಿಯ ವಾರಿಯರ್ ಮುಖ ಭಾರತೀಯರಿಗೆಲ್ಲ ಚಿರಪರಿಚಿತವಾದಂತಿದೆ ಎಂದರೆ ಇದಕ್ಕೆ ಇಂಟರ್‌ನೆಟ್ ಅಗಾಧತೆ ಕಾರಣ ಎನ್ನಬಹುದು!

ಪ್ರಿಯ ವಾರಿಯರ್

ಹಾಗಾಗಿ, 'ಪ್ರಿಯ ವಾರಿಯರ್' ಯುವತಿಯಂತೆ ವಿಶ್ವದಲ್ಲಿ ಮತ್ತು ಭಾರತದಲ್ಲಿ ರಾತ್ರೋರಾತ್ರಿ ಜಗತ್ಪ್ರಸಿದ್ದವಾಗಿರುವ ಸೆಲಬ್ರಿಟಿಗಳನ್ನು ನಾವು ಪರಿಚಯಿಸಿಕೊಡುತ್ತೇವೆ.! ಬಹುಬೇಕ ಸೆಲೆಬ್ರಿಟಿ ಪಟ್ಟವನ್ನು ಹೊಂದಿರುವವರು ಯಾರಾರು ಮತ್ತು ಅವರು ಅಷ್ಟು ಬೇಗ ಸೆಲೆಬ್ರಿಟಿಯಾಗಲು ಕಾರಣಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1. ಪ್ರಿಯಾ ವಾರಿಯರ್

1. ಪ್ರಿಯಾ ವಾರಿಯರ್

ತನ್ನ ಮೊದಲ ಮಲಯಾಳಂ ಚಿತ್ರ' ಒರು ಅದಾರ್ ಲವ್' ಸಿನಿಮಾದಲ್ಲಿ ಪ್ರಿಯಾ ವಾರಿಯರ್ ಅವರು ನಟಿಸಿರುವ 30-ಸೆಕೆಂಡ್ ಕ್ಲಿಪ್ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ರಾತ್ರೋರಾತ್ರಿ ಜಗತ್ಪ್ರಸಿದ್ದವಾಗುವಂತೆ ಮಾಡಿದೆ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ 2.5 ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಪಡೆದ ಮೊದಲ ಸೆಲೆಬ್ರಿಟಿ ಈಗ ಪ್ರಿಯಾ ವಾರಿಯರ್!!

2. ಸೈಮಾ ಹುಸೇನ್ ಮಿರ್

2. ಸೈಮಾ ಹುಸೇನ್ ಮಿರ್

ರಯೀಸ್ ಸಿನಿಮಾದ ಪ್ರಮೋಷನ್ ವೇಳೆ ಶಾರೂಕ್ ಖಾನ್ ಅವರು ಒಂದು ಸೆಲ್ಫಿಯನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಿಸಿದ್ದರು. ಶಾರೂಕ್ ತೆಗೆದ ಈ ಸೆಲ್ಫಿ ಚಿತ್ರದಲ್ಲಿ ಕಾಣಿಸಿದ ಹುಡುಗಿಯೋರ್ವಳು ಭಾರೀ ಹೆಸರು ಗಳಿಸಿದಳು. ಶ್ರೀನಗರದ ಎಸ್ಐಡಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ಸೈಮಾ ಹುಸೇನ್ ಮಿರ್ ಒಂದೇ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದಳು.!!

3 ಆರ್ಶಿದ್ ಖಾನ್!!

3 ಆರ್ಶಿದ್ ಖಾನ್!!

ಮನುಷ್ಯನ ಎರಡು ಕಣ್ಣುಗಳು ಜನರನ್ನು ಹೇಗೆ ಸೆಳೆಯಬಲ್ಲವು ಎಂಬುದಕ್ಕೆ ಆರ್ಶಿದ್ ಖಾನ್ ಎಂಬ ಯುವಕ ಉದಾಹರಣೆಯಾದಲು. 'ಹಾಟ್ ಚಾಯ್ ವಾಲ' ಎಂದು ಹೆಸರಾದ ಆರ್ಶಿದ್ ಖಾನ್ ತನ್ನ ನೀಲಿಗಣ್ಣುಗಳಿಂದ ಪಾಕಿಸ್ತಾನದ ಮನೆಮನೆಗೂ ಪರಿಚಯವಾದನು. ಇವನ ಕಣ್ಣುಗಳನ್ನು ನೋಡಿ ಇಡೀ ವಿಶ್ವವೇ ಖುಷಿಪಟ್ಟಿತು ಎನ್ನಬಹುದು.!!

4. ನೇಪಾಳಿ ಹುಡುಗಿ.!!

4. ನೇಪಾಳಿ ಹುಡುಗಿ.!!

ನೇಪಾಳಿ ಛಾಯಾಗ್ರಾಹಕ ರೂಪ್ಚಂದ್ರ ಮಹಾಜನ್ ಅವರು ಕ್ಲಿಕ್ ಮಾಡಿದ ನೇಪಾಳಿ ಹುಡುಗಿ ಫೋಟೊ ಇಡೀ ಏಷ್ಯಾದ ಗಮನ ಸೆಳೆಯಿತು ಎನ್ನಬಹುದು. ತರಕಾರಿ ಬುಟ್ಟಿಯನ್ನು ಫೋನಿನಲ್ಲಿ ಮಾತನಾಡುತ್ತಿದ್ದ ಹುಡುಗಿಯ ಸೌದಂರ್ಯ ಎಲ್ಲರನ್ನು ಸೆಳೆಯದೇ ಇರಲು ಸಾಧ್ಯವಿಲ್ಲ. ಆದರೆ, ಈ ಫೋಟೋದ ಹುಡುಗಿ ಇಲ್ಲಿಯವರೆಗೂ ಯಾರು ಎಂಬುದು ತಿಳಿದಿಲ್ಲ.!!

Here's how the Face ID of the newly launched Oppo A83 works (KANNADA)
5. ಡಾ. ಮೈಕ್

5. ಡಾ. ಮೈಕ್

ದಿ ಹೆಲ್ತಿ ಬಾಡಿ ಅಂಡ್ ಮೈಂಡ್ ಎಂಬ ಅಡಿಬರಹದೊಂದಿಗೆ ಡಾ. ಮೈಕ್ ಎಂಬುವವರು ಹಂಚಿಕೊಂಡ ಚಿತ್ರ ಹೆಂಗಳೆಯರ ಮನಗೆದ್ದಿತು. ಡಾ. ಮೈಕ್ ಅವರ ಮೊದಲ ಚಿತ್ರವೇ 2.6 ದಶಲಕ್ಷ ಫಾಲೋವರ್ಸ್ ಅನ್ನು ಅವರಿಗೆ ನೀಡಿತು ಎಂದರೆ ಈ ಸುರಸುಂದರಾಂಗ ಡಾಕ್ಟರ್ ಎಷ್ಟು ಹುಡುಗಿಯರ ಮನಗೆದ್ದರೋ.!!

6. ಒಮರ್ ಬೊರ್ಕಾನ್ ಅಲ್ ಗಾಲಾ

6. ಒಮರ್ ಬೊರ್ಕಾನ್ ಅಲ್ ಗಾಲಾ

ಅತ್ಯಂತ ಸುಂದರ ಮನುಷ್ಯ ಎಂದು ಕರೆಯಲ್ಪಟ್ಟ ಸೌದಿ ಅರೇಬಿಯಾ 'ಒಮರ್ ಬೊರ್ಕಾನ್ ಅಲ್ ಗಾಲಾ' ಇಡೀ ವಿಶ್ವದ ಗಮನ ಸೆಳೆದರು. ತಮ್ಮ ಒಂದೇ ಒಂದು ಲುಕ್‌ನಿಂದ ಮೊದಲ 48 ಗಂಟೆಗಳಲ್ಲಿ ಫೇಸ್‌ಬುಕ್ ಮೂಲಕ 8,00,000ಕ್ಕೂ ಫಾಲೋವರ್ಸ್ ಅನ್ನು ಸೆಳೆದರು ಎಂದರೆ ಅವರ ಫೋಟೊ ಇನ್ನೆಷ್ಟು ವೈರೆಲ್ ಆಗಿರಬಹುದು ಎಂಬುದನ್ನು ನೋಡಬಹುದು.!!

7. ಮಧುರಾ ಹನಿ

7. ಮಧುರಾ ಹನಿ

ಲಂಡನ್ ಒಲಿಂಪಿಕ್ಸ್ ಉದ್ಘಾಟನಾ ಮೆರವಣಿಗೆಯಲ್ಲಿ ಭಾರತೀಯ ಕ್ರೀಡಾಪಟುಗಳೊಂದಿಗೆ ಪರೇಡ್‌ನಲ್ಲಿ ಹೆಜ್ಜೆಹಾಕಿದ ಕೆಂಪು ಮತ್ತು ನೀಲಿ ಬಣ್ಣದ ಡ್ರೆಸ್ ಯುವತಿ ಕ್ಷಣಾರ್ಧದಲ್ಲಿ ಮೀಡಿಯಾಗಳಲ್ಲಿ ಜಾಗ ಪಡೆದರು. ಯಾವುದೇ ಅನುಮತಿಯಿಲ್ಲದೆ ಕ್ರೀಡಾಪಟುಗಳೊಂದಿಗೆ ಹೆಜ್ಜೆ ಹಾಕಿದ ಮಧುರಾ ಹನಿ ಕುರಿತು ವಿಚಾರಣೆ ಕೂಡ ಶುರುವಾಯಿತು.!!

Best Mobiles in India

English summary
From Priya Varrier - who is making India skip a collective heartbeat - to the hot chaiwallah from Islamabad.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X