ಫೇಸ್‌ಬುಕ್‌ ಮಾಡಿರುವ ಎಡವಟ್ಟಿಗೆ ಕಂಗಾಲಾದ ಹುಡಗಿಯರು..!!

|

ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ 'ಫೇಸ್‌ಬುಕ್‌' ತನ್ನ ಬಳಕೆದಾರರ ಖಾತೆಗಳ ಸುರಕ್ಷತೆ ಹೆಚ್ಚು ಗಮನ ನೀಡಿ ನಿರಂತರ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರಿಗೆ ಖುಷಿ ನೀಡುತ್ತಾ ಬಂದಿದೆ. ಆದರೆ ಇದೀಗ ಮತ್ತೆ ಹೊಸದೊಂದು ಬದಲಾವಣೆಯನ್ನು ಪರಿಚಯಿಸಿದ್ದು, ಬಳಕೆದಾರರು ಶಾಕ್‌ ಆಗಿದ್ದಾರೆ. ಫೇಸ್‌ಬುಕ್‌ನ ಈ ಹೊಸ ಬದಲಾವಣೆಯ ಆಯ್ಕೆ ಹುಡುಗಿಯರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ.

ಫೇಸ್‌ಬುಕ್‌ ಮಾಡಿರುವ ಎಡವಟ್ಟಿಗೆ ಕಂಗಾಲಾದ ಹುಡಗಿಯರು..!!

ಹೌದು, ಫೇಸ್‌ಬುಕ್‌ನಲ್ಲಿ ಮೊಬೈಲ್ ನಂಬರ ಅನ್ನು ಮರೆಮಾಡುವ ಆಯ್ಕೆಯನ್ನು ತೆಗೆದು ಹಾಕಿದೆ. ಹೀಗಾಗಿ ಇನ್ಮುಂದೆ ನಿಮ್ಮ ಮೊಬೈಲ್ ನಂಬರ ಎಲ್ಲರಿಗೂ ಕಾಣಿಸಿಕೊಳ್ಳಲಿದೆ. ಫೇಸ್‌ಬುಕ್ ಪ್ರೈವೇಸಿ ಸೆಟ್ಟಿಂಗ್‌ನಲ್ಲಿರುವ "who can look you up using the phone number you provided", ಎಂಬ ಆಯ್ಕೆಯಲ್ಲಿ 'ನನಗೆ ಮಾತ್ರ'(only me) ಎಂಬ ಆಯ್ಕೆ ಇನ್ಮುಂದೆ ದೊರೆಯುವುದಿಲ್ಲ. ಹೀಗಾಗಿ ನಿಮ್ಮ ಮೊಬೈಲ್ ನಂಬರ ಅನ್ನು ಫೇಸ್‌ಬುಕ್‌ನಲ್ಲಿ ಪೂರ್ಣ ಮರೆಮಾಡಲು ಯಾವುದೇ ದಾರಿಯಿಲ್ಲ.

ಫೇಸ್‌ಬುಕ್‌ ಮಾಡಿರುವ ಎಡವಟ್ಟಿಗೆ ಕಂಗಾಲಾದ ಹುಡಗಿಯರು..!!

ಫೇಸ್‌ಬುಕ್‌ನಲ್ಲಿ ಇದೀಗ ಹೊಸದಾಗಿ 'ಎಲ್ಲರಿಗೂ', 'ಸ್ನೇಹಿತರಿಗೆ' ಮತ್ತು 'ಸ್ನೇಹಿತರ-ಸ್ನೇಹಿತರಿಗೆ' (Everyone, Friends, Friends of Friends) ಎಂಬ ಮೂರು ಆಯ್ಕೆಗಳು ಮಾತ್ರ ದೊರೆಯಲಿದೆ. ಇವುಗಳಲ್ಲಿ ಯಾವುದಾದರು ಒಂದು ಆಯ್ಕೆಯನ್ನು ಬಳಕೆದಾರರು ಸೆಲೆಕ್ಟ್ ಮಾಡಿಕೊಳ್ಳಬೇಕು ಒಂದು ವೇಳೆ ಬದಲಾವಣೆ ಮಾಡಿಕೊಳ್ಳದಿದ್ದರೇ ಆಟೋಮ್ಯಾಟಿಕ್ ಆಗಿ 'ಎಲ್ಲರಿಗೂ' (Everyone) ಆಯ್ಕೆಗೆ ಬದಲಾಗುತ್ತದೆ.

ಫೇಸ್‌ಬುಕ್‌ ಮಾಡಿರುವ ಎಡವಟ್ಟಿಗೆ ಕಂಗಾಲಾದ ಹುಡಗಿಯರು..!!

ಫೇಸ್‌ಬುಕ್ ಈ ಮೊದಲು "who can look you up using the phone number you provided", ಎಂಬ ಆಯ್ಕೆಯಲ್ಲಿ, ಎಲ್ಲರಿಗೂ, ಸ್ನೇಹಿತರಿಗೆ, ಸ್ನೇಹಿತರ-ಸ್ನೇಹಿತರಿಗೆ ಮತ್ತು ನನಗೆ ಮಾತ್ರ ಎಂಬ ಆಯ್ಕೆಗಳು ಲಭ್ಯವಿದ್ದವು. ಬಹುತೇಕ ಬಳಕೆದಾರರು ಸುರಕ್ಷತೆಯ ದೃಷ್ಟಿಯಿಂದ 'ನನಗೆ ಮಾತ್ರ' ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು, ಆ ಮೂಲಕ ತಮ್ಮ ನಂಬರಗಳನ್ನು ಯಾರಿಗೂ ಕಾಣದಂತೆ ಹೈಡ್‌ ಮಾಡುತ್ತಿದ್ದರು.

ಫೇಸ್‌ಬುಕ್‌ ಮಾಡಿರುವ ಎಡವಟ್ಟಿಗೆ ಕಂಗಾಲಾದ ಹುಡಗಿಯರು..!!

ಫೇಸ್‌ಬುಕ್‌ನಲ್ಲಿ ಮೊಬೈಲ್ ನಂಬರ ಎಲ್ಲರಿಗೂ ಕಾಣುವ ಆಯ್ಕೆ ಮಾಡಿಕೊಂಡರೇ ಜಾಹಿರಾತು ಕಂಪನಿಗಳು, ಜಾಹಿರಾತುಗಳನ್ನು ಕಳುಹಿಸಲು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಅಲ್ಲದೇ ಅಪರಿಚಿತರು ನಂಬರನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಮೊಬೈಲ್ ನಂಬರ ಎಲ್ಲರಿಗೂ ಕಾಣಿಸಲು ಇಚ್ಛಿಸದ ಬಳಕೆದಾರರು ಪ್ರೈವೇಸಿ ಸೆಟ್ಟಿಂಗಗನಲ್ಲಿ 'ಸ್ನೇಹಿತರು' ಎಂಬ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಬಹುದು.

Best Mobiles in India

English summary
Facebook is using phone number entered during two-factor authentication to target ads and allowing anyone to look up user profiles.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X