ಇಂಟರ್ನೆಟ್‌ ಸಂಪರ್ಕವಿಲ್ಲದೇ ಫೇಸ್‌ಬುಕ್‌ ಬಳಸಿ

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಈಗ ತನ್ನ ಸೇವೆಯಲ್ಲಿ ಸ್ವಲ್ಪ ಬದಲಾವಣೆ ತರಲು ಮುಂದಾಗುತ್ತಿದ್ದು. ಆಫ್‌ಲೈನ್‌ ಸೇವೆಯನ್ನು ನೀಡಲಿದೆಯಂತೆ. ಈ ಸೇವೆಯಿಂದ ಫೇಸ್‌ಬುಕ್‌ ಬಳಕೆದಾರರು ಇಂಟರ್ನೆಟ್‌ ಸಂಪರ್ಕ ವಿಲ್ಲದೆಯೂ ನ್ಯೂಸ್‌ ಫೀಡ್‌ ಪಡೆಯಬಹುದಂತೆ. ಈ ಬಗ್ಗೆ ಗಿಜ್‌ಬಾಟ್‌ ಲೇಖನದಿಂದ ಫೇಸ್‌ಬುಕ್‌ ಅನ್ನು ಆಫ್‌ಲೈನ್‌ನಲ್ಲೂ ಹೇಗೆ ಬಳಸಬಹುದು ಹಾಗೂ ಅನುಕೂಲಗಳು ಏನು ಎಂಬುದನ್ನು ತಿಳಿಯಿರಿ.

ಓದಿರಿ : ಎಚ್ಚರ: ಫೇಸ್‌ಬುಕ್‌ನಲ್ಲೂ ಡ್ರಗ್ಸ್ ಮಾರಾಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಆಫ್‌ಲೈನ್‌ನಲ್ಲೂ ವರ್ಕ್‌

ಫೇಸ್‌ಬುಕ್‌ ಆಫ್‌ಲೈನ್‌ನಲ್ಲೂ ವರ್ಕ್‌

'ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್‌ಬುಕ್‌ ಈಗ ತನ್ನ ಹೊಸ ಫೀಚರ್‌ ಅನ್ನು ಪರೀಕ್ಷೆ ನಡೆಸುತ್ತಿದೆ. ಇದರ ಹೊಸ ಫೀಚರ್‌ನಿಂದ ಬಳಕೆದಾರರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ಡೇಟ್‌ ನ್ಯೂಸ್‌, ಪೋಸ್ಟ್‌ ಕಮೆಂಟ್‌ಗಳನ್ನು ಇಂಟರ್ನೆಟ್‌ ಸಂಪರ್ಕವಿಲ್ಲದೆಯೂ ಸಹ ನೋಡಬಹುದಾಗಿದೆ' ಎಂದು ಫೇಸ್‌ಬುಕ್‌ ಹೇಳಿದೆ.

 ಹೊಸ ಫೀಚರ್‌ ಉಪಯೋಗ

ಹೊಸ ಫೀಚರ್‌ ಉಪಯೋಗ

ಫೇಸ್‌ಬುಕ್‌ ಸಂಪೂರ್ಣ ಆಫ್‌ಲೈನ್‌ ಮೋಡ್‌ ಪಡೆಯಲಿದೆ. ಇದರಿಂದ ಇಂಟರ್ನೆಟ್‌ ಸಂಪರ್ಕ ಕಡಿಮೆಯಾಗಿದ್ದರು ಸಹ ನೀವು ನ್ಯೂಸ್ ಫೀಡ್‌ ಪಡೆಯಬಹುದು ಹಾಗೂ ನೀವು ಆಫ್‌ಲೈನ್‌ ಇದ್ದರೂ ಸಹ ಪೋಸ್ಟ್‌ಗಳಿಗೆ ಕಮೆಂಟ್ಸ್ ನೀಡಬಹುದಾಗಿದೆ.

 ನೀವು ಪಡೆಯುವ ನ್ಯೂಸ್‌

ನೀವು ಪಡೆಯುವ ನ್ಯೂಸ್‌

ಫೇಸ್‌ಬುಕ್‌ ನ್ಯೂಸ್‌ ಫೀಡ್‌ ಎಂಬುದು ಸಾಮಾಜಿಕ ಜಾಲತಾಣ ವೆಬ್‌ಸೈಟ್‌ನ ಮುಖ್ಯ ಹೋಮ್‌ ಪೇಜ್‌ ಆಗಿದೆ. ಇದು ಎಲ್ಲಾ ಸ್ಟೇಟಸ್‌, ಫೋಟೋಗಳು, ಲಿಂಕ್‌ಗಳು, ಜನರ ಲೈಕ್‌ಗಳು, ಅಥವಾ ನೀವು ಫಾಲೋ ಮಾಡುತ್ತಿರುವ ಸೇವೆಗಳು ಇರುತ್ತವೆ.

ಈ ಮೊದಲು ಫೇಸ್‌ಬುಕ್‌

ಈ ಮೊದಲು ಫೇಸ್‌ಬುಕ್‌

ನೀವು ನ್ಯೂಸ್ ಪಡೆಯಲು ಇಂಟರ್ನೆಟ್‌ ಸಂಪರ್ಕ ಕಡಿಮೆ ಇದ್ದಾಗ ಕಾಯಬೇಕಾಗಿತ್ತು. ಈ ಪ್ರಕ್ರಿಯೆಯನ್ನೇ ಫೇಸ್‌ಬುಕ್‌ ಶೀಘ್ರದಲ್ಲಿ ಬದಲಿಸಲು ಹೊರಟಿರುವುದು.

ಕೇವಲ ಹೊಸ ನ್ಯೂಸ್ ಫೀಡ್‌ಗಳನ್ನು ಮಾತ್ರ ನೋಡಿ

ಕೇವಲ ಹೊಸ ನ್ಯೂಸ್ ಫೀಡ್‌ಗಳನ್ನು ಮಾತ್ರ ನೋಡಿ

ನೀವು ಇಂಟರ್ನೆಟ್‌ ಸಂಪರ್ಕದಲ್ಲಿದ್ದಾಗ ಡೌನ್‌ಲೋಡ್‌ ಆದ ಸ್ಟೋರಿಗಳನ್ನು ಹೊರತು ಪಡಿಸಿ ನಿಮಗೆ ಹೊಸ ಸ್ಟೋರಿಗಳನ್ನು ಮಾತ್ರ ನೋಡಲು ಅವಕಾಶ ನೀಡುವಂತ ಫೀಚರ್ ಅನ್ನು ಅಪ್‌ಡೇಟ್‌ ಮಾಡುತ್ತಿದೆ.

 ಹೊಸ ಫೀಚರ್‌

ಹೊಸ ಫೀಚರ್‌

ಫೇಸ್‌ಬುಕ್‌ನ ಹೊಸ ಫೀಚರ್ ತನ್ನ ಸರ್ವರ್‌ನಿಂದ ಹೊಸ ನ್ಯೂಸ್ ಪಡೆದ ತಕ್ಷಣ ನೀವು ಮುನಃ ಆನ್‌ಲೈನ್‌ಗೆ ಬಂದಾಗ ಹೊಸ ನ್ಯೂಸ್‌ಗಳನ್ನೇ ನೀಡುತ್ತದೆ.

 ಕೇವಲ 2.7 ಜನರು ಮಾತ್ರ ಆನ್‌ಲೈನ್‌

ಕೇವಲ 2.7 ಜನರು ಮಾತ್ರ ಆನ್‌ಲೈನ್‌

ಪ್ರಪಂಚದಾದ್ಯಂತ ಕೇವಲ 2.7 ನೆಟಿಜನ್‌ ಇರುವುದಾಗಿ ಫೇಸ್‌ಬುಕ್‌ ಹೇಳಿದೆ.

ಇಂಟರ್ನೆಟ್‌ ಸಂಪರ್ಕಕ್ಕಾಗಿ ಡ್ರೋನ್‌ ಮತ್ತು ಬಲೂನ್‌

ಇಂಟರ್ನೆಟ್‌ ಸಂಪರ್ಕಕ್ಕಾಗಿ ಡ್ರೋನ್‌ ಮತ್ತು ಬಲೂನ್‌

ಫೇಸ್‌ಬುಕ್‌, ಗೂಗಲ್‌ ಮತ್ತು ಇತರ ಟೆಕ್‌ ಸಂಸ್ಥೆಗಳು ನೆಟ್‌ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲು ಡ್ರೋನ್‌ ಮತ್ತು ಗೂಗಲ್‌ ಬಲೂನ್‌ ಗಳು ಇಂಟರ್ನೆಟ್‌ ಆಕ್ಸೆಸ್‌ ನೀಡಲು ಯೋಜನೆಯನ್ನು ರೂಪಿಸಿವೆ. ಇದರಿಂದ ಹೆಚ್ಚು ಜನರು ವೆಬ್‌ಗೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Social media giant Facebook is testing a new feature that will allow users to view an updated News Feed and also possibly post comments on Facebook posts even while they have no internet connectivity.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot