ಗೂಗಲ್, ಫೇಸ್‌ಬುಕ್‌, ಟ್ವಿಟರ್ ಒಟ್ಟಿಗೆ ಸೇರಿ 'ದಿ ಟ್ರಸ್ಟ್ ಪ್ರಾಜೆಕ್ಟ್' ಆರಂಭಿಸಿವೆ!!..ಏಕೆ ಗೊತ್ತಾ?

ಇನ್ಮುಂದೆ ಆನ್‌ಲೈನ್‌ನಲ್ಲಿ ಸಿಗುವ ಎಲ್ಲಾ ಸುದ್ದಿಗಳು ‘ಟ್ರಸ್ಟ್‌ ಇಂಡಿಕೇಟರ್’ ಸೂಚನೆ ಹೊಂದಿರಲಿದೆ ಎಂದು 'ಟೆಕ್‌ ಕ್ರಂಚ್' ಎಂಬ ಸುದ್ದಿತಾಣ ವರದಿ ಮಾಡಿದೆ.!!

|

ಆನ್‌ಲೈನ್‌ ಮೂಲಕ ಸಿಗುವ ಸುದ್ದಿಗಳ ಮೇಲೆ ಜನರು ಹೆಚ್ಚು ವಿಶ್ವಾಸಾರ್ಹತೆ ಇಡುವಂತೆ ಹಾಗೂ ಸುಳ್ಳು ಸುದ್ದಿಗಳನ್ನು ತಡೆಯಲು ಗೂಗಲ್, ಫೇಸ್‌ಬುಕ್‌, ಟ್ವಿಟರ್ ಮತ್ತು ಬಿಂಗ್ ಕಂಪೆನಿಗಳು ಒಟ್ಟಿಗೆ ಸೇರಿ 'ದಿ ಟ್ರಸ್ಟ್ ಪ್ರಾಜೆಕ್ಟ್' ಎಂಬ ನೂತನ ಯೋಜನೆಯನ್ನು ಹಾಕಿಕೊಂಡಿರುವುದಾಗಿ ವರದಿಯಾಗಿದೆ.!!

ಹೌದು, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಮತ್ತು ಅವುಗಳನ್ನು ತಡೆಗಟ್ಟುವ ಸಲುವಾಗಿ ಗೂಗಲ್, ಫೇಸ್‌ಬುಕ್‌, ಟ್ವಿಟರ್ ಮತ್ತು ಬಿಂಗ್ ಕಂಪೆನಿಗಳು ಮುಂದಾಗಿದ್ದು, ಇನ್ಮುಂದೆ ಆನ್‌ಲೈನ್‌ನಲ್ಲಿ ಸಿಗುವ ಎಲ್ಲಾ ಸುದ್ದಿಗಳು 'ಟ್ರಸ್ಟ್‌ ಇಂಡಿಕೇಟರ್' ಸೂಚನೆ ಹೊಂದಿರಲಿದೆ ಎಂದು 'ಟೆಕ್‌ ಕ್ರಂಚ್' ಎಂಬ ಸುದ್ದಿತಾಣ ವರದಿ ಮಾಡಿದೆ.!!

ಗೂಗಲ್, ಫೇಸ್‌ಬುಕ್‌ ಒಟ್ಟಿಗೆ ಸೇರಿ 'ದಿ ಟ್ರಸ್ಟ್ ಪ್ರಾಜೆಕ್ಟ್' ಆರಂಭಿಸಿವೆ!!

ನಿಖರ ಮಾಹಿತಿ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಉತ್ತೇಜಿಸುವ ಗುರಿ ಹೊತ್ತು 'ದಿ ಟ್ರಸ್ಟ್ ಪ್ರಾಜೆಕ್ಟ್' ಶುರುವಾಗಿದ್ದು, ಪ್ರಕಟಿಸುವ ಸುದ್ದಿಯ ಜತೆಗೆ 'ಟ್ರಸ್ಟ್‌ ಇಂಡಿಕೇಟರ್' (ನಂಬಿಕೆಯ ಚಿಹ್ನೆ) ಬಳಸಲು 75ಕ್ಕೂ ಹೆಚ್ಚು ಸುದ್ದಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.!!

ಗೂಗಲ್, ಫೇಸ್‌ಬುಕ್‌ ಒಟ್ಟಿಗೆ ಸೇರಿ 'ದಿ ಟ್ರಸ್ಟ್ ಪ್ರಾಜೆಕ್ಟ್' ಆರಂಭಿಸಿವೆ!!

ಸುದ್ದಿಗಳಲ್ಲಿ ಆ ಸುದ್ದಿಯ ಮೂಲ, ಲೇಖಕರ ಮಾಹಿತಿ, ಸುದ್ದಿ ಸಂಸ್ಥೆಯ ಮಾಹಿತಿ ಹಾಗೂ ನಿರ್ದಿಷ್ಟ ಸುದ್ದಿಗೆ ಸಂಬಂಧಿಸಿದ ಲಿಂಕ್‌ಗಳು ಸುದ್ದಿಯ ಜತೆಗೆ ಇರಲಿವೆ ಎಂದು ವರದಿಯಲ್ಲಿ ಹೇಳಲಾಗಿದ್ದು, ವಿಶ್ವಾಸಾರ್ಹ ಸುದ್ದಿಗಳ ಜತೆಗೆ 'ಟ್ರಸ್ಟ್‌ ಇಂಡಿಕೇಟರ್' ಹೇಗೆ ಕಾಣಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಗೂಗಲ್ ಮತ್ತು ಫೇಸ್‌ಬುಕ್ ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.!!

ಓದಿರಿ: ರಾಜ್ಯಕ್ಕೂ ಬಂತು ವಿಶ್ವದ ವೇಗದ ಸಾರಿಗೆ ಹೈಪರ್‌ಲೂಪ್!..30 ನಿಮಿಷದಲ್ಲಿ ಬೆಂಗಳೂರು ಟು ಹುಬ್ಬಳ್ಳಿ!!

Best Mobiles in India

English summary
Trust Project. an effort to increase transparency around online news. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X