ಮಕ್ಕಳ ಸುರಕ್ಷಿತ ಬಳಕೆಗಾಗಿ ಫೇಸ್‌ಬುಕ್‌'ನಿಂದ 'ಪೇರೆಂಟ್ಸ್ ಪೋರ್ಟಲ್'' ಲಾಂಚ್‌: ಏನಿದು?

Written By:

ಮಕ್ಕಳ ಸುರಕ್ಷಿತ ಫೇಸ್‌ಬುಕ್‌ ನಾವಿಗೇಟ್‌ಗಾಗಿ, ಪೋಷಕರಿಗೆ ಅಧಿಕಾರ ನೀಡಿ ಸಹಾಯ ಮಾಡಲು, ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್, ಮಂಗಳವಾರ(ಡಿಸೆಂಬರ್ 13)ರಂದು ಪೇರೆಂಟ್ಸ್ ಪೋರ್ಟಲ್ ಅನ್ನು ಲಾಂಚ್‌ ಮಾಡಿದೆ. ಪೇರೆಂಟ್ಸ್‌ ಪೋರ್ಟಲ್‌ ಅನ್ನು ಪೋಷಕರು, ಹದಿಹರೆಯದವರು ಮತ್ತು ಜಗತ್ತಿನಾದ್ಯಂತ ಇರುವ ಸುರಕ್ಷತಾ ಪರಿಣಿತರ ಸಹಯೋಗದೊಂದಿಗೆ ಲಾಂಚ್‌ ಮಾಡಿದೆ.

ಮಕ್ಕಳ ಸುರಕ್ಷಿತ ಬಳಕೆಗಾಗಿ ಫೇಸ್‌ಬುಕ್‌'ನಿಂದ 'ಪೇರೆಂಟ್ಸ್ ಪೋರ್ಟಲ್'': ಏನಿದು?

ಫೇಸ್‌ಬುಕ್‌ ಇತ್ತೀಚೆಗೆ ಸುರಕ್ಷತೆ ಕೇಂದ್ರ, ಬೆದರಿಕೆ ತಡೆಗಟ್ಟುವಿಕೆ ಕೇಂದ್ರ ಅಪ್‌ಡೇಟ್‌ ಮಾಡಿರುವುದಲ್ಲದೇ, ಈಗ ಪೇರೆಂಟ್ಸ್‌ ಪೋರ್ಟಲ್‌ ಅನ್ನು ಪರಿಚಯಿಸಿದೆ. ಈ ಫೀಚರ್ ಪೋಷಕ ನಿರ್ಧಿಷ್ಟ ಸಲಹೆಯನ್ನು, ಸುರಕ್ಷಿತ ಕೇಂದ್ರದ ಆಧಾರದಲ್ಲಿ ಒದಗಿಸುತ್ತದೆ.

ಫೇಸ್‌ಬುಕ್ ನ್ಯೂಸ್‌ ಫೀಡ್‌ ಕಸ್ಟಮೈಜ್‌ಗಾಗಿ ಈ 5 ಸ್ಟೆಪ್‌ಗಳನ್ನು ಫಾಲೋ ಮಾಡಿ

ಮಕ್ಕಳ ಸುರಕ್ಷಿತ ಬಳಕೆಗಾಗಿ ಫೇಸ್‌ಬುಕ್‌'ನಿಂದ 'ಪೇರೆಂಟ್ಸ್ ಪೋರ್ಟಲ್'': ಏನಿದು?

ಪೇರೆಂಟ್ಸ್ ಪೋರ್ಟಲ್, ಫೇಸ್‌ಬುಕ್‌ ಹೇಗೆ ವರ್ಕ್‌ ಆಗುತ್ತದೆ ಎಂಬ ಮಾರ್ಗದರ್ಶನ ಅಂಶಗಳನ್ನು ಪೋಷಕರಿಗಾಗಿ ಹೊಂದಿದೆ. ಅಲ್ಲದೇ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವಂತೆ ಮಕ್ಕಳಿಗೆ ಹೇಳಲು ಟಿಪ್ಸ್‌ಗಳನ್ನು ಹೊಂದಿದೆ. ಈ ಟಿಪ್ಸ್‌ಗಳು ಪ್ರಪಂಚದ ಪರಿಣಿತರು ನೀಡಿರುವ ಮೂಲಗಳಿಂದ ಬಂದವುಗಳಾಗಿವೆ. ಈ ಸಲಹೆಗಳು 55 ಭಾಷೆಗಳಲ್ಲಿ ಇದ್ದು, ಭಾರತೀಯ 11 ಭಾಷೆಗಳಲ್ಲಿಯೂ ಇವೆ. ಟಿಪ್ಸ್‌ಗಳು ಮೊಬೈಲ್ ಬಳಕೆದಾರರ ಸ್ನೇಹಿ ಆಗಿದ್ದು, ಹಂತ ಹಂತವಾದ ವೀಡಿಯೊಗಳನ್ನು ಹೊಂದಿವೆ.

ಮಕ್ಕಳ ಸುರಕ್ಷಿತ ಬಳಕೆಗಾಗಿ ಫೇಸ್‌ಬುಕ್‌'ನಿಂದ 'ಪೇರೆಂಟ್ಸ್ ಪೋರ್ಟಲ್'': ಏನಿದು?

" ಫೇಸ್‌ಬುಕ್ ಪೇರೆಂಟ್ಸ್ ಪೋರ್ಟಲ್, ಪೋಷಕರಿಕೆ ಪ್ರಖ್ಯಾತ ಮಾಹಿತಿ ಮೂಲವಾಗಿದೆ. ಯಾವ ಪೋಷಕರು ಹೆಚ್ಚು ಕಲಿಯಲು ಮತ್ತು ಮಕ್ಕಳೊಂದಿಗೆ ಆನ್‌ಲೈನ್‌ ಸುರಕ್ಷತೆಗಾಗಿ ವರ್ಕ್‌ ಮಾಡಲು ಸಿದ್ಧರಿರುತ್ತಾರೋ ಅವರಿಗೆ ಉತ್ತಮ ವೇದಿಕೆ ಆಗಿದೆ. ಫೇಸ್‌ಬುಕ್‌ನೊಂದಿಗೆ ಈ ರೀತಿಯ ಮಾಹಿತಿ ಮೂಲಗಳನ್ನು ನೀಡಲು ಉತ್ಸುಕರಾಗಿದ್ದು, ಪೋಷಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಹಾಯ ಮಾಡುತ್ತೇವೆ" ಎಂದು ಭಾರತ ಸಾಮಾಜಿಕ ಸಂಶೋಧನಾ ಕೇಂದ್ರದ ಡಾ|| ರಂಜನಾ ಕುಮಾರಿ ಹೇಳಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Facebook Launches Parent's Portal For Kids' Safe Usage Of The Website. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot