ನಿಮ್ಮ ಫೇಸ್‌ಬುಕ್ ಖಾತೆ ಸುರಕ್ಷತೆಗೆ ಪಾಸ್‌ವರ್ಡ್‌ ಬದಲಿಸಿ.!!

|

ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಬಳಕೆದಾರರ ಖಾತೆಗಳ ಸುರಕ್ಷತೆಗೆ ಹಲವು ಹೊಸ ಫೀಚರ್ಸ್‌ಗಳನ್ನು ಒದಗಿಸುತ್ತಾ ಬಂದಿದೆ. ಆದರೆ ಇದೀಗ ಫೇಸ್‌ಬುಕ್ ಆಪಾದನೆಗೆ ಒಳಗಾಗಿದ್ದು, ಬಳಕೆದಾರರ ಫೇಸ್‌ಬುಕ್ ಖಾತೆಯ ಪಾಸ್‌ವರ್ಡ್‌ ಪ್ಲೇನ್‌ ಟೆಕ್ಸ್ಟ್ ಮಾದರಿಯಲ್ಲಿ ಸ್ಟೋರ್‌ ಆಗಿದ್ದು, ಬಳಕೆದಾರರ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸುವಲ್ಲಿ ಫೇಸ್‌ಬುಕ್ ವಿಫಲ್ ಆಗಿರುವುದಾಗಿ ಹೇಳಲಾಗುತ್ತಿದೆ.

ನಿಮ್ಮ ಫೇಸ್‌ಬುಕ್ ಖಾತೆ ಸುರಕ್ಷತೆಗೆ ಪಾಸ್‌ವರ್ಡ್‌ ಬದಲಿಸಿ.!!

ಪ್ಲೇನ್ ಟೆಕ್ಟ್ಸ್ ಮಾದರಿಯ ಪಾಸ್‌ವರ್ಡ್‌ ಹೊಂದಿದ್ದ ಫೇಸ್‌ಬುಕ್‌ ಬಳಕೆದಾರರ ಖಾತೆಯನ್ನು ಫೇಸ್‌ಬುಕ್ ಉದ್ಯೋಗಿಗಳು ಆಕ್ಸ್‌ಸ್ ಮಾಡಿರಬಹುದು ಎನ್ನಲಾಗುತ್ತಿದ್ದು, ಹೀಗಾಗಿ ಬಳಕೆದಾರರ ಪಾಸ್‌ವರ್ಡ್‌ಗಳ ಸುರಕ್ಷತೆ ಕಾಯುವಲ್ಲಿ ಫೇಸ್‌ಬುಕ್‌ ಎಡವಿದೆ ಎಂದು ಹೇಳಲಾಗುತ್ತಿದೆ. ಸುರಕ್ಷತೆಯ ದೃಷ್ಠಿಯಿಂದ ಫೇಸ್‌ಬುಕ್‌ ಬಳಕೆದಾರರು ತಮ್ಮ ಫೇಸ್‌ಬುಕ್ ಪಾಸ್‌ವರ್ಡ್‌ ಅನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಹಾಗಾದರೇ ಫೇಸ್‌ಬುಕ್‌ ಪಾಸ್‌ವರ್ಡ್‌ ಬದಲಾಯಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

ಸರಳ ಪಾಸ್‌ವರ್ಡ್‌ ಬೇಡ

ಸರಳ ಪಾಸ್‌ವರ್ಡ್‌ ಬೇಡ

ಫೇಸ್‌ಬುಕ್‌ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣ ಖಾತೆಗಳಿಗೆ ಪಾಸ್‌ವರ್ಡ್‌ ಇಡುವಾಗ ಸರಳ ಮಾದರಿ ಪಾಸ್‌ವರ್ಡ್‌ ಇಡಬೇಡಿ. ಉದಾಹರಣೆಗೆ: ಮೊಬೈಲ್‌ ನಂಬರ್‌ ಅಥವಾ ಹೆಸರು. ನೀವಿಡುವ ಪಾಸ್‌ವರ್ಡ್‌ನಲ್ಲಿ ಇಂಗ್ಲೀಷ ಕ್ಯಾಪಿಟಲ್ ಅಕ್ಷರ ಮತ್ತು ನಂಬರ್‌ ಸಹ ಸೇರಿರಲಿ ಹೀಗೆ ಮಾಡಬುದುರಿಂದ ನಿಮ್ಮ ಪಾಸ್‌ವರ್ಡ್‌ ಕಠಿಣವಾಗಿರುತ್ತದೆ.

ಒಂದೇ ಪಾಸ್‌ವರ್ಡ್‌ ಬೇಡ

ಒಂದೇ ಪಾಸ್‌ವರ್ಡ್‌ ಬೇಡ

ಫೇಸ್‌ಬುಕ್‌, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಹೆಲ್ಲೊ, ಸೇರಿದಂತೆ, ಹಲವು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುತ್ತಿರಿ ಮತ್ತು ಅವುಗಳಲ್ಲಿ ವೈಯಕ್ತಿಕ ಖಾತೆಯನ್ನು ಸಹ ಹೊಂದಿರುತ್ತಿರಿ. ಆದರೆ ನೀವು ಬಳಸುವ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಇಡಬೇಡಿರಿ. ನಿಮ್ಮ ಖಾತೆಗಳ ಸುರಕ್ಷತೆಗಾಗಿ ಪ್ರತ್ಯಕ ಪಾಸ್‌ವರ್ಡ್‌ ಬಳಸುವುದು ಉತ್ತಮ.

ಪಾಸ್‌ವರ್ಡ್‌ ಬದಲಿಸಿ

ಪಾಸ್‌ವರ್ಡ್‌ ಬದಲಿಸಿ

* ಫೇಸ್‌ಬುಕ್‌ ಬಲ ಬದಿಯಲ್ಲಿ ಕಾಣಿಸುವ ಮೆನು ತೆರೆಯಿರಿ.
* ನಂತರ ಸೆಟ್ಟಿಂಗ್ಸ್‍ ಆಯ್ಕೆಯನ್ನು ಒತ್ತಿರಿ.
* ಎಡಗಡೆ ಕಾಣಿಸುವ 'ಸೆಕ್ಯುರಿಟಿ ಮತ್ತು ಲಾಗ್‌ಇನ್‌' ಆಯ್ಕೆ ತೆರೆಯಿರಿ
* ಪಾಸ್‌ವರ್ಡ್‌ ಬದಲಾಯಿಸುವ ಆಯ್ಕೆ ಕಾಣಿಸುತ್ತದೆ
* ಹೊಸ ಪಾಸ್‌ವರ್ಡ್ ಬರೆದು ಸೇವ್‌ ಮಾಡಿರಿ.

Best Mobiles in India

English summary
Worried about Facebook employees knowing your passwords after the recent controversy? Here's a detailed guide on how to change your Facebook account’s password immediately.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X