ಫೇಸ್‌ಬುಕ್‌'ನ ಉಚಿತ 'ಎಕ್ಸ್‌ಪ್ರೆಸ್ ವೈಫೈ' ಪರೀಕ್ಷೆ ಭಾರತದಲ್ಲಿ ಲೈವ್‌

By Suneel
|

ಫೇಸ್‌ಬುಕ್‌, ಉಚಿತ ಬೇಸಿಕ್ 'ನೆಟ್‌ ನ್ಯೂಟ್ರಾಲಿಟಿ' ಉಲ್ಲಂಘನೆಗೆ ಸಂಬಂಧಿಸಿದಂತೆ ಹಲವಾರು ಟೀಕೆಗಳನ್ನು ಪಡೆದ ಹಲವು ದಿನಗಳ ನಂತರ ಈಗ ಹೊಸ ಮಾಡೆಲ್‌ನ ಸಾರ್ವಜನಿಕ ವೈಫೈ ಅನ್ನು ಭಾರತದಲ್ಲಿ ಪರೀಕ್ಷೆ ನಡೆಸುತ್ತಿದೆ. ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಅಂತೂ ಈಗ ಗ್ರಾಮೀಣ ಭಾಗಗಳಲ್ಲಿ ಉತ್ತಮ ಗುಣಮಟ್ಟದ ಇಂಟರ್ನೆಟ್ ಸಂಪರ್ಕ ನೀಡಲು ಈ ಯೋಜನೆ ಆರಂಭಿಸಿದೆ.

ಫೇಸ್‌ಬುಕ್‌'ನ ಉಚಿತ 'ಎಕ್ಸ್‌ಪ್ರೆಸ್ ವೈಫೈ' ಪರೀಕ್ಷೆ ಭಾರತದಲ್ಲಿ ಲೈವ್‌

ಫೇಸ್‌ಬಕ್‌ನ Internet.org ಪೇಜ್‌ನ ಪ್ರಕಾರ, ಕಂಪನಿಯ 'ಎಕ್ಸ್‌ಪ್ರೆಸ್ ವೈಫೈ' ಭಾರತದಲ್ಲಿ ಈಗ ಲೈವ್‌ ಆಗಿದ್ದು, " ತೀರ ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸಂಪರ್ಕ ನೀಡಲು ಜಗತ್ತಿನಾದ್ಯಂತದ ಉದ್ಯಮಿಗಳು, ಇಂಟರ್ನೆಟ್ ಕ್ಯಾರಿಯರ್ಸ್, ಇಂಟರ್ನೆಟ್ ಸರ್ವೀಸ್ ಒದಗಿಸುವವರು ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ತಿಳಿಯಲಾಗಿದೆ. ಶೀಘ್ರದಲ್ಲಿ ಇನ್ನೂ ಹಲವು ಪ್ರದೇಶಗಳಿಗೆ ಫೇಸ್‌ಬುಕ್ 'ಎಕ್ಸ್‌ಪ್ರೆಸ್ ವೈಫೈ' ಅನ್ನು ವಿಸ್ತರಿಸುವ ಬಗ್ಗೆ ಹೇಳಲಾಗಿದೆ.

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಫೇಸ್‌ಬುಕ್‌ನ, 'ಎಕ್ಸ್‌ಪ್ರೆಸ್ ವೈಫೈ'ನಲ್ಲಿ ತನ್ನ ಫ್ರೀ ಬೇಸಿಕ್ ರೀತಿಯಲ್ಲಿ ಕೆಲವು ವೆಬ್‌ಸೈಟ್‌ಗಳಿಗೆ ಮಾತ್ರ ಪರಿಮಿತ ಇಂಟರ್ನೆಟ್ ಆಕ್ಸೆಸ್ ನೀಡುತ್ತದೆಯೋ ಅಥವಾ ಸಂಪೂರ್ಣ ಆಕ್ಸೆಸ್ ನೀಡುತ್ತದೆಯೊ ಎಂಬುದನ್ನು ಖಚಿತಪಡಿಸಿಲ್ಲ.

ಫೇಸ್‌ಬುಕ್‌'ನ ಉಚಿತ 'ಎಕ್ಸ್‌ಪ್ರೆಸ್ ವೈಫೈ' ಪರೀಕ್ಷೆ ಭಾರತದಲ್ಲಿ ಲೈವ್‌

'ಎಕ್ಸ್‌ಪ್ರೆಸ್ ವೈಫೈ' ಸ್ಥಳೀಯ ಉದ್ಯಮಿಗಳು ಗುಣಮಟ್ಟದ ವೈಫೈ ಒದಗಿಸಲು ಅಧಿಕಾರ ನೀಡಿದ್ದು, ಸ್ಥಿರ ಲಾಭಗಳಿಸಲು ಅವಕಾಶ ಒದಗಿಸಿದೆ. ಸ್ಥಳೀಯ ಇಂಟರ್ನೆಟ್ ಸೇವೆ ನೀಡುವವರು ಅಥವಾ ಮೊಬೈಲ್ ಆಪರೇಟರ್‌ಗಳು ಫೇಸ್‌ಬುಕ್‌ನೊಂದಿಗೆ ಕಾರ್ಯನಿರ್ವಹಿಸುವುದರಿಂದ ಕಂಪನಿಯ ಸಾಫ್ಟ್‌ವೇರ್‌ ಅನ್ನು ಬಳಸಿ ಸಂಪರ್ಕ ಕಲ್ಪಿಸಬಹುದು ಎಂದು ಫೇಸ್‌ಬುಕ್‌ ತಿಳಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್‌ಬುಕ್‌'ನ ಉಚಿತ 'ಎಕ್ಸ್‌ಪ್ರೆಸ್ ವೈಫೈ' ಪರೀಕ್ಷೆ ಭಾರತದಲ್ಲಿ ಲೈವ್‌

ಫೇಸ್‌ಬುಕ್(Facebook) ಪ್ರಪಂಚದಾದ್ಯಂತ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಲೇಸರ್ ಡ್ರೋನ್‌ಗಳನ್ನು ಬಳಸುತ್ತಿದೆ. ಈ ಬಗ್ಗೆ ಫೇಸ್‌ಬುಕ್‌ ವಕ್ತಾರರು ಸಾರ್ವಜನಿಕ ವೈಫೈ ಸಂಪರ್ಕ ಬಳಸುವವರಿಗೆ ಇಂಟರ್ನೆಟ್ ಸಂಪರ್ಕ ನೀಡಲು, ಪ್ರಸ್ತುತದಲ್ಲಿ ಇಂಟರ್ನೆಟ್ ಸೇವೆ ಒದಗಿಸುವವರೊಂದಿಗೆ 'ಎಕ್ಸ್‌ಪ್ರೆಸ್ ವೈಫೈ' ಪರೀಕ್ಷೆ ನಡೆಸುತ್ತಿರುವುದಾಗಿ ಖಚಿತಪಡಿಸಿದ್ದಾರೆ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ಅಂದಹಾಗೆ ಈ ಸರ್ವೀಸ್ ಕಾಲಾನಂತರ 'ಫ್ರೀ ಬೇಸಿಕ' ಸರ್ವೀಸ್ ಆಗಿ ರೀಬ್ರ್ಯಾಂಡ್ ಆಗಲಿದೆ. ಟೆಲಿಕಾಂ ಆಪರೇಟರ್‌ಗಳ ಪಾಲುದಾರಿಕೆಯೊಂದಿಗೆ ಜನರಿಗೆ ಬೇಸಿಕ್ ಇಂಟರ್ನೆಟ್ ಆಕ್ಸೆಸ್‌ ಅನ್ನು ನೀಡುವ ಗುರಿಯನ್ನು ಫೇಸ್‌ಬುಕ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Facebook Tests 'Express Wifi' In India. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X