ಫೇಸ್‌ಬುಕ್‌ನಲ್ಲಿ ಇನ್ಮುಂದೆ ಕಾಣಲ್ಲ ಲೈಕ್‌ ಕೌಂಟ್ಸ್‌..!

By Gizbot Bureau
|

ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಅದರಂತೆ, ಪೋಸ್ಟ್‌ ಲೈಕ್‌ಗಳನ್ನು ಮರೆಮಾಚಲು ಮುಂದಾಗಿದೆ. ಪ್ರತಿಕ್ರಿಯೆಗಳು, ವೀಕ್ಷಣೆಗಳು ಮತ್ತು ಲೈಕ್‌ಗಳ ಸಂಖ್ಯೆ ಇನ್ಮುಂದೆ ಪೋಸ್ಟ್‌ನ ಲೇಖಕರಿಗೆ ಮಾತ್ರ ಗೋಚರಿಸುತ್ತದೆ. ಪ್ರಾಯೋಗಿಕವಾಗಿ ಮೊದಲು ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮ ದೈತ್ಯ ದೃಢಪಡಿಸಿದ್ದು, ಜಾಹೀರಾತುಗಳನ್ನು ಒಳಗೊಂಡಿರಲಿದೆ.

ಸೀಮಿತ ಪರೀಕ್ಷೆ

ಸೀಮಿತ ಪರೀಕ್ಷೆ

ಸದ್ಯ ಸೀಮಿತ ಪರೀಕ್ಷೆಯನ್ನು ನಡೆಸುತ್ತಿದ್ದೇವೆ, ಅಲ್ಲಿ ಪ್ರತಿಕ್ರಿಯೆ, ವಿಡಿಯೋ ವೀಕ್ಷಣೆಯನ್ನು ಫೇಸ್‌ಬುಕ್‌ನಾದ್ಯಂತ ಖಾಸಗಿಯಾಗಿ ಎಣಿಕೆ ಮಾಡಲಾಗುತ್ತದೆ ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ. ಈ ಬದಲಾವಣೆಯಿಂದ ಬಳಕೆದಾರರ ಅನುಭವ ಸುಧಾರಣೆಯಾಗುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುತ್ತದೆ.

ಇನ್‌ಸ್ಟಾಗ್ರಾಂನಲ್ಲಿ ಪ್ರಯೋಗ

ಇನ್‌ಸ್ಟಾಗ್ರಾಂನಲ್ಲಿ ಪ್ರಯೋಗ

ಫೇಸ್‌ಬುಕ್ ತನ್ನ ಒಡೆತನದ ಇನ್‌ಸ್ಟಾಗ್ರಾಂನಲ್ಲಿ ಈ ವಿಧಾನವನ್ನು ಮೊದಲು ಪರೀಕ್ಷಿಸಿತ್ತು. ನಂತರ ಈ ಪ್ರಯತ್ನವನ್ನು ಫೇಸ್‌ಬುಕ್‌ನಲ್ಲಿಯೂ ಮುಂದುವರೆಸಿ ಲೈಕ್‌ಗಳನ್ನು ಮರೆಮಾಚಬಹುದು ಎಂ‌ಬ ನಿರ್ಧಾರಕ್ಕೆ ಮಾರ್ಕ್‌ ಜುಕರ್‌ಬರ್ಗ್‌ ನೇತೃತ್ವದ ಕಂಪನಿ ಬಂದಿದೆ.

ರಿಸಲ್ಟ್‌ ಮೇಲೆ ಎಫ್‌ಬಿ ಉತ್ಸುಕ

ರಿಸಲ್ಟ್‌ ಮೇಲೆ ಎಫ್‌ಬಿ ಉತ್ಸುಕ

ಇನ್‌ಸ್ಟಾಗ್ರಾಂ ಮೇಲೆ ಮಾಡಿದ ಪ್ರಯೋಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಎಷ್ಟು ಲೈಕ್‌ ಪಡೆಯುತ್ತದೆ ಎಂಬ ಒತ್ತಡವನ್ನು ತೆಗೆದುಹಾಕುತ್ತದೆ ಎಂದು ಫೇಸ್‌ಬುಕ್‌ ಹೇಳಿದ್ದು, ಆರಂಭಿಕ ಪರೀಕ್ಷಾ ಫಲಿತಾಂಶಗಳಿಗಾಗಿ ಉತ್ಸುಕವಾಗಿದ್ದೇವೆ ಎಂದಿದೆ.

7 ದೇಶಗಳಲ್ಲಿ ಲೈಕ್‌ ಹಿಡನ್‌

7 ದೇಶಗಳಲ್ಲಿ ಲೈಕ್‌ ಹಿಡನ್‌

ಜುಲೈನಿಂದ ಇದುವರೆಗೂ ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್, ನ್ಯೂಜಿಲೆಂಡ್, ಐರ್ಲೆಂಡ್, ಇಟಲಿ ಮತ್ತು ಜಪಾನ್‌ನಲ್ಲಿ ಇನ್‌ಸ್ಟಾಗ್ರಾಮ್‌ನ ಲೈಕ್‌ ಕೌಂಟ್‌ಗಳನ್ನು ಮರೆಮಾಡಲಾಗಿದೆ.

Best Mobiles in India

English summary
Facebook Will Hide Number Of Likes and Reactions On Private Posts From Today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X