ಎಚ್ಚರ.!! ವಾಟ್ಸ್ಆಪ್ ನಲ್ಲಿ GST ಕುರಿತಂತೆ ತಪ್ಪು ಸಂದೇಶ: ಅಪ್ಪಿ-ತಪ್ಪಿಯೂ ಶೇರ್ ಮಾಡಬೇಡಿ..!!

Written By:

ಸದ್ಯ ದೇಶದಲ್ಲಿ ಹೊಸದಾಗಿ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (GST) ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಕೆಲವು ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿದೆ ಸೇರಿದಂತೆ ಹಲವು ವಿಷಯಗಳ ಮೇಲೆ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಎಚ್ಚರ.!! ವಾಟ್ಸ್ಆಪ್ ನಲ್ಲಿ GST ಕುರಿತಂತೆ ತಪ್ಪು ಸಂದೇಶ

ಓದಿರಿ: ಆಧಾರ್ ಲೀಕ್‌ : ತಕ್ಷಣವೇ ಜಿಯೋ ಗ್ರಾಹಕರು ಮಾಡಬೇಕಾದೇನು...?

ಇದೇ ಸಂದರ್ಭದಲ್ಲಿ ಕೆಲವರು ಸೋಶಿಯಲ್ ಮೆಸೆಂಜಿಂಗ್ ಆಪ್ ವಾಟ್ಸ್ಆಪ್ ನಲ್ಲಿ GST ಕುರಿತಂತೆ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದ್ದು, ಹಲವರನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹಾಗಾಗಿ ಜನರು ಎಚ್ಚರಿಕೆಯನ್ನು ವಹಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೊಡ್ಡ ಬಿಲ್ ಮೇಲೆ ದೊಡ್ಡ ತೆರಿಗೆ ಇಲ್ಲ:

ದೊಡ್ಡ ಬಿಲ್ ಮೇಲೆ ದೊಡ್ಡ ತೆರಿಗೆ ಇಲ್ಲ:

ನೀವು ಜಾಸ್ತಿ ಪ್ರಮಾಣದ ವಸ್ತುಗಳನ್ನು ಕೊಂಡರೆ ನಿಮಗೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಾರೆ ಎಂಬ ಮೇಸೆಜ್ ಹರಿದಾಡುತ್ತಿದೆ. ಇದು ಸುಳ್ಳು. ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು ಸುಳ್ಳು ಸುದ್ದಿಯಾಗಿದೆ.

GST ಬಗ್ಗೆ ತಿಳಿಯಿರಿ:

GST ಬಗ್ಗೆ ತಿಳಿಯಿರಿ:

GSTಯಲ್ಲಿ ಕೇವಲ ಶೂನ್ಯ ತೆರಿಗೆ, ಶೇ.5 ತೆರಿಗೆ, ಶೇ.12 ತೆರಿಗೆ, ಶೇ.18 ತೆರಿಗೆ, ಶೇ.28 ತೆರಿಗೆ ಮಾತ್ರವೇ ಇದ್ದು, ಇದಕ್ಕಿಂತ ಹೆಚ್ಚಿನ ತೆರಿಗೆಯನ್ನು ವಿಧಿಸುವಂತೆ ಇಲ್ಲ.

ಮಾಲ್ ಗಳಲ್ಲಿ ಹೆಚ್ಚಿನ ತೆರಿಗೆ ಇಲ್ಲ:

ಮಾಲ್ ಗಳಲ್ಲಿ ಹೆಚ್ಚಿನ ತೆರಿಗೆ ಇಲ್ಲ:

ನೀವು ಮಾಲ್ ನಲ್ಲಿ ಖರೀದಿ ಮಾಡಿದ ವಸ್ತುಗಳಿಗೆ ಮಾತ್ರ ತೆರಿಗೆ ಬೀಳಲಿದೆ. GST ತೆರಿಗೆ ಸೇರಿ ಉತ್ಪನ್ನದ ಎಂಆರ್‍ಪಿ ನಿಗದಿಯಾಗುತ್ತದೆ. ಹೀಗಾಗಿ ಬಿಲಿನಲ್ಲಿ ಮತ್ತೊಮ್ಮೆ GST ತೆರಿಗೆ ಹಾಕುವುದಿಲ್ಲ.

ನೀವು ಯಾರಿಗೂ ಕಳುಹಿಸ ಬೇಡಿ:

ನೀವು ಯಾರಿಗೂ ಕಳುಹಿಸ ಬೇಡಿ:

ಯಾರಾದರೂ ನಿಮಗೆ ಈ ರೀತಿಯ ಮೆಸೇಜ್ ಕಳುಹಿಸಿದದರೆ ಅದನ್ನು ನಿರ್ಲಕ್ಷಿಸಿ. ಈ ರೀತಿ ಬಿಲ್ ಮೇಲೆ ತೆರಿಗೆ ಹಾಕಲು ಸಾಧ್ಯವಿಲ್ಲ ಎಂದು ಅವರಿಗೂ ತಿಳಿಸಿ. ಅಲ್ಲದೇ ನೀವು ಇದನ್ನು ಬೇರೆಯವರಿಗೆ ಶೇರ್ ಮಾಡಬೇಡಿ.

ಶೇರ್ ಮಾಡಬೇಡಿ:

ಶೇರ್ ಮಾಡಬೇಡಿ:

ಈ ರೀತಿ ವಾಟ್ಸ್ಆಪ್ ನಲ್ಲಿ ಸುಳ್ಳು ಸುದ್ದಿಯನ್ನು ಬೇರೆಯವರಿಗೆ ಕಳುಹಿಸುವುದನ್ನು ಮಾಡಬೇಡಿ. ಇರಿಂದ ನೀವು ತೊಂದರೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತಿದೆ. ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯೂ ಇದೆ. ಇದರಿಂದ ಎಚ್ಚರವಾಗಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A fake message disseminated through Whatsapp about GST, to know more visit kannada.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot