TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮುಗಿಯಲಿದೆ ''ಗೂಗಲ್ ಪ್ಲಸ್'' ಅಧ್ಯಾಯ.! ಹೇಳಿ ಬಿಡಿ ವಿದಾಯ.!
ನೀವು 'ಗೂಗಲ್ ಪ್ಲಸ್' ಬಳಕೆದಾರರೇ? ನಿಮ್ಮ ಗೂಗಲ್ ಪ್ಲಸ್ ಖಾತೆಯಲ್ಲಿ ಮುಖ್ಯವಾದ ಫೋಟೊ ಮತ್ತು ವಿಡಿಯೋಗಳನ್ನು ಇಟ್ಟಿದ್ದಿರಾ? ಹಾಗಿದ್ದರೇ ಈ ಕೂಡಲೇ ನಿಮ್ಮ ಫೋಟೋ ಮತ್ತು ಪ್ರಮುಖ ದತ್ತಾಂಶ ಡೌನಲೋಡ್ ಮಾಡಿಕೊಳ್ಳಿ. ಏಕೆಂದರೇ ಗೂಗಲ್ ನಿಮಗೊಂದು ಶಾಕಿಂಗ್ ನ್ಯೂಸ್ ನೀಡಿದೆ.? ಹೌದು, ಶೀಘ್ರದಲ್ಲಿಯೇ ಗೂಗಲ್ ಸಾಮಾಜಿಕ ತಾಣ 'ಗೂಗಲ್ ಪ್ಲಸ್' ತನ್ನ ಅಧ್ಯಾಯ ಮುಗಿಸಲಿದೆ.!
ಗೂಗಲ್‌ನ ಸಾಮಾಜಿಕ ತಾಣದ ತಳಹದಿಯಾಗಿದ್ದ 'ಗೂಗಲ್ ಪ್ಲಸ್' ತಾಣವನ್ನು ಗೂಗಲ್ ಕಂಪನಿ ಇದೀಗ ಬಂದಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಹೀಗಾಗಿ ಗೂಗಲ್ ಪ್ಲಸ್‌ನಲ್ಲಿಯ ಎಲ್ಲ ಖಾತೆಗಳು ಡೀಲಿಟ್ ಆಗಲಿವೆ. ಹಾಗಾಗಿ ಗೂಗಲ್ ಪ್ಲಸ್‌ನಲ್ಲಿ ಖಾತೆ ಹೊಂದಿರುವ ಬಳಕೆದಾರರು ತಮ್ಮ ಪ್ರಮುಖ ದತ್ತಾಂಶಗಳು ಮತ್ತು ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಗೂಗಲ್ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಗೂಗಲ್ ಕಂಪನಿಯು ತನ್ನ ಗೂಗಲ್ ಪ್ಲಸ್ ಸಾಮಾಜಿಕ ತಾಣವನ್ನು ನಿಷ್ಕ್ರೀಯಮಾಡುವುದಾಗಿ ಹೇಳಿತ್ತು. ಇದೀಗ ಗೂಗಲ್ ಪ್ಲಸ್‌ನ ಅಧ್ಯಾಯ ಮುಗಿಸಲು ದಿನಾಂಕ ಫಿಕ್ಸ್ ಮಾಡಿದ್ದು, ಇದೇ ಎಪ್ರಿಲ್ 2 ರಂದು ಗೂಗಲ್ ಪ್ಲಸ್‌ನ ಕೊನೆಯ ದಿನವಾಗಲಿದೆ. ತಾಂತ್ರಿಕ ಮತ್ತು ಭದ್ರತೆಯ ನಿರ್ವಹಣೆಯ ಕಾರಣದಿಂದಾಗಿ ಗೂಗಲ್ ಪ್ಲಸ್ ತಾಣವನ್ನು ಮುಚ್ಚುವುದಾಗಿ ಗೂಗಲ್ ಹೇಳಿದೆ.
ಗೂಗಲ್ ಸಂಸ್ಥೆಯು ತನ್ನ ಗೂಗಲ್ ಪ್ಲಸ್ ತಾಣವನ್ನು 2011 ರ ಜೂನ್‌ನಲ್ಲಿ ಪರಿಚಯಿಸಿತ್ತು. ಇನ್ನು ಕೆಲವೇ ದಿನಗಳಲ್ಲಿ ಜನಪ್ರಿಯ ಸಾಮಾಜಿಕ ತಾಣ ಗೂಗಲ್ ಪ್ಲಸ್ ಅಧ್ಯಾಯ ಕೊನೆಯಾಗಲಿದ್ದು, ಬಳಕೆದಾರರು ತಮ್ಮ ಖಾತೆಗಳಲ್ಲಿ ಏನಾದರೂ ಪ್ರಮುಖ ದತ್ತಾಂಶಗಳಿದ್ದರೆ ಅಥವಾ ಮುಖ್ಯವಾದ ಫೋಟೋಗಳಿದ್ದರೇ ಅವುಗಳನ್ನು ಇದೇ ಏಪ್ರಿಲ್ 2 ರ ಒಳಗಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.