Subscribe to Gizbot

ಜಿಫ್ ಫೇಸ್‌ಬುಕ್ ಪ್ರೊಫೈಲ್ ಪಿಚ್ಚರ್ ಆಡ್‌ ಮಾಡುವುದು ಹೇಗೆ?

Written By:

ಫೇಸ್‌ಬುಕ್‌ ಇತ್ತೀಚೆಗೆ ಹಲವಾರು ಹೊಸ ಫೀಚರ್‌ಗಳನ್ನು ತನ್ನ ಬಳಕೆದಾರರಿಗಾಗಿ ತಂದಿದೆ. ಈ ಫೀಚರ್‌ಗಳು ಮೆಸೇಂಜರ್‌ಗಾಗಿ ಆಗಿರಬಹುದು ಅಥವಾ ಫೇಸ್‌ಬುಕ್ ನ್ಯೂಸ್‌ ಫೀಡ್‌ಗಾಗಿ ಆಗಿರಬಹುದು. ಆದರೆ ಎಲ್ಲವೂ ಹೊಸ ಫೀಚರ್‌ಗಳು.

ಫೇಕ್ ಫೇಸ್‌ಬುಕ್‌ ಖಾತೆ ಕಂಡುಹಿಡಿಯುವುದು ಹೇಗೆ? 5 ಸೂಚನೆಗಳು!

ಅಂದಹಾಗೆ ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತಂದಿರುವ ಹೊಸ ಫೀಚರ್ ಪ್ರೊಫೈಲ್‌ ಪಿಚ್ಚರ್ ಸೆಟಪ್‌ಗಾಗಿ. ಹೌದು, ಫೇಸ್‌ಬುಕ್‌(Facebook) ಬಳಕೆದಾರರು ತಮ್ಮ ಸ್ಥಿರವಾದ ಮತ್ತು ಡಲ್‌ ಆದ ಪ್ರೊಫೈಲ್‌ ಪಿಕ್ ಪಿಚ್ಚರ್‌ ಅನ್ನು ತೆಗೆದುಹಾಕಿ, ಹೊಸದಾಗಿ ಅತ್ಯಾಕರ್ಷಕ ಆನಿಮೇಟೆಡ್ ಜಿಫ್‌ ಪಿಚ್ಚರ್‌ ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ಗಳಲ್ಲಿ ಕ್ರಿಯೇಟ್‌ ಮಾಡಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಯ್ಕೆ ಮಾಡಿದ ಪ್ರೊಫೈಲ್ ವೀಡಿಯೊ ಆಪ್ಶನ್ ಕ್ಲಿಕ್ ಮಾಡಿ

ಆಯ್ಕೆ ಮಾಡಿದ ಪ್ರೊಫೈಲ್ ವೀಡಿಯೊ ಆಪ್ಶನ್ ಕ್ಲಿಕ್ ಮಾಡಿ

ಫೇಸ್‌ಬುಕ್ ಲಾಗಿನ್‌ ಆಗಿ, ನಿಮ್ಮ ಪ್ರೊಫೈಲ್ ಸ್ಕ್ರೀನ್‌ಗೆ ಹೋಗಿ. ನಂತರ ಪ್ರೊಫೈಲ್‌ ಪಿಕ್ ಮೇಲೆ ಟ್ಯಾಪ್‌ ಮಾಡಿ, ನಂತರ 'Profile Video Option' ಕ್ಲಿಕ್‌ ಮಾಡಿ ಅಥವಾ ಹೊಸ ಪ್ರೊಫೈಲ್‌ ವೀಡಿಯೊ ತೆಗೆದುಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೀಡಿಯೊ ಸೆಲೆಕ್ಟ್‌ ಮಾಡಲು ನಿಯಮಗಳು

ವೀಡಿಯೊ ಸೆಲೆಕ್ಟ್‌ ಮಾಡಲು ನಿಯಮಗಳು

ವೀಡಿಯೊ ಫೈಲ್ ಸೆಲೆಕ್ಟ್ ಮಾಡಿ ಅಪ್‌ಲೋಡ್‌ ಮಾಡಿ. ಬಳಕೆದಾರರು 7 ಸೆಕೆಂಡ್ ವೀಡಿಯೊ ಅಪ್‌ಲೋಡ್‌ ಮಾಡಬೇಕು. ಬಳಕೆದಾರರ ಪ್ರೊಫೈಲ್ ವೀಡಿಯೊ 7 ಸೆಕೆಂಡ್‌ಗಿಂತ ಹೆಚ್ಚಿದಲ್ಲಿ, ಅದನ್ನು ಟ್ರಿಮ್ ಮಾಡಲು ಆಪ್ಶನ್‌ಗಳು ಇರುತ್ತವೆ.

 ಪ್ರೊಫೈಲ್‌ ಪಿಚ್ಚರ್‌ ಅನ್ನು ಖಾಯಂ ಆಗಿ ಸೆಟ್‌ ಮಾಡಿ

ಪ್ರೊಫೈಲ್‌ ಪಿಚ್ಚರ್‌ ಅನ್ನು ಖಾಯಂ ಆಗಿ ಸೆಟ್‌ ಮಾಡಿ

ವೀಡಿಯೊ ಸೆಲೆಕ್ಟ್ ಮಾಡಿದ ನಂತರ, ಬಳಕೆದಾರರು 'Thumbnail' ಅನ್ನು ವೀಡಿಯೊದಿಂದ ಸೆಲೆಕ್ಟ್ ಮಾಡಬೇಕು. ವೀಡಿಯೊ ವರ್ಕ್‌ ಆಗದಿದ್ದಾಗ 'Thumbnail' ಪ್ರೊಫೈಲ್‌ ಪಿಚ್ಚರ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ 'USE' ಐಕಾನ್ ಟ್ಯಾಪ್‌ ಮಾಡಿ ಸೆಟ್‌ ಮಾಡಿ.

ಪ್ರೊಫೈಲ್ ವೀಡಿಯೊ ಅಪ್‌ಲೋಡ್‌ ಮಾಡುವ ಮುನ್ನ ತಿಳಿಯಬೇಕಾದ ಸಲಹೆಗಳು

ಪ್ರೊಫೈಲ್ ವೀಡಿಯೊ ಅಪ್‌ಲೋಡ್‌ ಮಾಡುವ ಮುನ್ನ ತಿಳಿಯಬೇಕಾದ ಸಲಹೆಗಳು

#1 ಅಪ್‌ಲೋಡ್‌ ಮಾಡುವ ಮುನ್ನ ವೀಡಿಯೊ ಸೌಂಡ್‌ ಅನ್ನು ಸ್ವಿಚ್‌ ಆಫ್‌ ಮಾಡಿ
#2 ಉತ್ತಮ ರಿಸಲ್ಟ್‌ಗಾಗಿ ವೀಡಿಯೊವನ್ನು ಕೇವಲ 7 ಸೆಕೆಂಡ್‌ ಇರುವಂತೆ ಟ್ರಿಮ್ ಮಾಡಿ
#3 ಉತ್ತಮ ವೀಡಿಯೊಗಾಗಿ ಹೆಚ್ಚುವರಿ ಮತ್ತು ಅನಗತ್ಯ ಭಾಗವನ್ನು ಕ್ರಾಪ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Add GIF Facebook Profile Pic. Follow these simple steps. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot