ಇಂಟರ್‌ನೆಟ್‌ ಬಗ್ಗೆ ನಿಮಗೆಷ್ಟು ಗೊತ್ತು? ಯಾಕೆ ಈ ಲೇಖನವನ್ನು ನೀವು ಓದಲೇಬೇಕು?!!

Written By:

ಇಂಟರ್‌ನೆಟ್‌ ಅಂದರೆ ಒಂದು ರೀತಿಯ ಪ್ರಪಂಚ, ಆಧುನಿಕತೆಯ ಹರಿಕಾರ ಎಂದು ಬಿಂಬಿಸಲ್ಪಟ್ಟಿದ್ದ ಇಂಟರ್‌ನೆಟ್ ಇಂದು ಸುಳ್ಳಿನ ಪ್ರಪಂಚದಲ್ಲಿ ಮುಚ್ಚಿಹೊಗಿದೆ ಎಂಬ ನಿಜಾಂಶ ಹೊರಬಿದ್ದಿದೆ.! ಹೌದು, ಎಲ್ಲರೂ ಆಧುನಿಕ ಇಂಟರ್‌ನೆಟ್‌ ಜಗತ್ತಿನಲ್ಲಿ ನಿರ್ದಿಷ್ಟ ಪಕ್ಷ ಅಥವಾ ಸಿದ್ಧಾಂತ ಅನುಸರಿಸುವವರು ಅಥವಾ ಅವಲಂಬಿತರು ನೀತಿಗಳ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಜೊತೆಗೆ ನಿಜಾಂಶವನ್ನೂ ಮರೆ ಮಾಚುತ್ತಾರೆ' ಎಂದು ಅಧ್ಯಯನ ಒಂದರಲ್ಲಿ ತಿಳಿದುಬಂದಿದೆ.!!

ಕೇಂದ್ರದ ಡಿಜಿ-ಧನ್ ಲಕ್ಕಿ ಗ್ರಾಹಕನೆಂದು ತಿಳಿಯುವುದು ಹೇಗೆ?

ತಾನು ತಿಳಿದಿರುವುದೇ ಸತ್ಯ. ನನ್ನದೆಲ್ಲವೂ ಸರಿಯಾಗಿದೆ ಎಂಬ ಭಾವನೆ ಇಂಟರ್‌ನೆಟ್ ಬಳಕೆದಾರರ ಹೆಚ್ಚು ಜನರಲ್ಲಿದೆ ಎಂದು ಈ ಸಮೀಕ್ಷೇ ಹೇಳಿದೆ. ಇನ್ನು ಕೆಲವರಿಗೆ ಇದು ತಪ್ಪು ಎಂದು ತಿಳಿದಿದ್ದರೂ ಕೂಡ ಅದನ್ನು ಮರೆಮಾಚಿ ತಮ್ಮದೇ ಸರಿ ಎಂದು ಮುಂದುವರೆಸುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಹಾಗಾದರೆ, ಇಂಟರ್‌ನೆಟ್ ಪ್ರಪಂಚದ ಈ ಬಗ್ಗೆ ಅಧ್ಯಯನ ಮಾಡಿರುವ ಇತರ ಅಂಶಗಳು ಯಾವುವು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್‌ನೆಟ್ ಸುಳ್ಳಿನ ಪ್ರಪಂಚ!?

ಇಂಟರ್‌ನೆಟ್ ಸುಳ್ಳಿನ ಪ್ರಪಂಚ!?

ಆನ್‌ಲೈನ್‌ ಪ್ರಪಂಚದ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹೇಗೆ ಹರಿದಾಡುತ್ತವೆ ಎಂಬುದರ ಅಧ್ಯಯನ ಮಾಡಿ ಇಂಟರ್‌ನೆಟ್ ಸುಳ್ಳಿನ ಪ್ರಪಂಚ ಎಂಬುದಕ್ಕೆ ಕಾರಣಗಳು ನೀಡಲಾಗಿದೆ. ಆನ್‌ಲೈನ್‌ನಲ್ಲಿರುವ ಬಹುತೇಕ ಎಲ್ಲ ವಿಷಯಗಳು ಸತ್ಯದ ವಿರುದ್ಧವಾಗಿಯೇ ಇದೆ ಎಂದು ಈ ಸಮೀಕ್ಷೆ ತಿಳಿಸಿದ್ದು, ಆನ್‌ಲೈನ್‌ನಲ್ಲಿ ಓದಿದ ಸುದ್ದಿಗಳನ್ನು ಮಾಹಿತಿಯನ್ನು ಇತರರಿಗೆ ಹಂಚಿಕೊಳ್ಳುವಾಗ ಜನರು ವಿವೇಚನೆಯನ್ನು ಬಳಸದೇ. ಜನರು ತಮ್ಮಲ್ಲಿರುವ ಪೂರ್ವಗ್ರಹ ಕಲ್ಪನೆಯಂತೆ ಮತ್ತು ಪಕ್ಷಪಾತಿಯಂತೆ ವರ್ತಿಸುತ್ತಾರೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದಿದೆ.

ತಮ್ಮ ಸಿದ್ಧಾಂತದ ಅಪ್ಪುಗೆ!

ತಮ್ಮ ಸಿದ್ಧಾಂತದ ಅಪ್ಪುಗೆ!

ಎಲ್ಲರೂ ತಮ್ಮ ಯೋಚನೆ ಮತ್ತು ತಮ್ಮ ಸಿದ್ಧಾಂತಗಳಿಗೆ ಯಾವ ಮಾಹಿತಿ ಸರಿ ಹೊಂದುತ್ತದೋ ಅವುಗಳನ್ನೇ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ.ಉದಾಹರಣೆಗೆ, ಫೇಸ್‌ಬುಕ್‌, ಟ್ವಿಟರ್, ಸುದ್ದಿ ಮಾಧ್ಯಮಗಳಲ್ಲಿ ಜನರು ತಮಗೆ ಇಷ್ಟಕ್ಕೆ ವಿರುದ್ಧವಾದ ಸಂಗತಿಗಳನ್ನು ಓದಲು ಇಷ್ಟಪಡುವುದಿಲ್ಲ. ತಮಗೆ ಯಾವುದು ಇಷ್ಟವೂ ಅದನ್ನೇ ಹಂಚಿಕೊಳ್ಳುತ್ತಾರೆ. ಮೋದಿ ಬೆಂಬಲಿಗರು ಮೋದಿಯ ಪರ ಮತ್ತು ರಾಹುಲ್ ಗಾಂಧಿ ಬೆಂಬಲಿಗರು ರಾಹುಲ್ ಗಾಂಧಿಯ ಪರ ಸಿದ್ಧಾಂತದ ಅಪ್ಪುಗೆ ಹೊಂದಿರುವುದನ್ನು ನೀವು ನೋಡಬಹುದು.

ಸುಳ್ಳು ಸುದ್ದಿಗಳನ್ನೇ ಪ್ರಕಟಿಸುವ ಜಾಲತಾಣಗಳಿವೆ!

ಸುಳ್ಳು ಸುದ್ದಿಗಳನ್ನೇ ಪ್ರಕಟಿಸುವ ಜಾಲತಾಣಗಳಿವೆ!

ಸುಳ್ಳನ್ನೇ ಸೃಷ್ಟಿಸುವ, ಸುಳ್ಳು ಸುದ್ದಿಗಳನ್ನೇ ಪ್ರಕಟಿಸುವ ಹಲವು ಜಾಲತಾಣಗಳು ಇಂಟರ್‌ನೆಟ್‌ನಲ್ಲಿ ಇವೆ ಎಂದು ಸಂಶೋಧನೆ ಮೂಲಕ ತಿಳಿದುಬಂದಿದೆ. ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದೂ ಈಗ ಉದ್ಯಮವಾಗಿ ಬದಲಾಗಿದೆ. ಫೇಸ್‌ಬುಕ್‌ನಲ್ಲಿನ ರಾಜಕೀಯ ಪುಟಗಳ ಬಗ್ಗೆ ಇತ್ತೀಚೆಗೆ ನಡೆಸಿರುವ ಅಧ್ಯಯನಗಳು ಇವುಗಳನ್ನು ಧೃಡಪಡಿಸಿವೆ.

ದಾರಿತಪ್ಪಿಸುವ ಮಾಹಿತಿಗಳು.

ದಾರಿತಪ್ಪಿಸುವ ಮಾಹಿತಿಗಳು.

ಎಲ್ಲರೂ ತಮ್ಮ ತಮ್ಮ ಅಭಿರುಚಿಗಳಿಗೆ ತಕ್ಕಂತ ದಾರಿತಪ್ಪಿಸುವ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ. ಈ ಮಾಹಿತಿಗಳು ಸರಿಯೋ ಅಥವಾ ತಪ್ಪೋ ಎನ್ನುವ ತಿಳಿಯದ ಜನರು ಇವುಗಳಿಗೆ ದಾಸರಾಗಿದ್ದಾರೆ.! ಇಲ್ಲಸಲ್ಲದ ಸುಳ್ಳಿನ ಮಾಹಿತಿಗಳನ್ನು ನೀಡಿ ಕೋಮು ಸಂಘರ್ಷಗಳಿಗೂ ಕಾರಣವಾಗಿರುವ ಉದಾಹರಣೆಗಳು ಸಿಕ್ಕಿವೆ!..ಹಾಗಾಗಿ, ಈ ಮಾಹಿತಿಯನ್ನು ನೀವು ಸಹ ಶೇರ್ ಮಾಡಿ ಸ್ವಸ್ಥಸಮಾಜದ ಎಲ್ಲರಲ್ಲಿಯೂ ಜಾಗೃತಿ ಮೂಡಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Internet of Things (IoT) may be a phrase suffering from over Use.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot