Subscribe to Gizbot

ನಕಲಿ ಹಿಂಬಾಲಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ ರಾಹುಲ್‌ಗಾಂಧಿ..!

Written By:

ಜಾಗತಿಕವಾಗಿ ಖ್ಯಾತಿಯನ್ನು ಪಡೆದುಕೊಂಡಿರುವ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ವಿಶ್ವದ ಕೆಲ ಪ್ರಮುಖ ನಾಯಕರು ದೊಡ್ಡ ಸಂಖ್ಯೆಯ ನಕಲಿ ಹಿಂಬಾಲಕರನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ವರದಿಯೊಂದು ಬಹಿರಂಗಗೊಳಿಸಿದೆ. ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಹಾವಳಿಯೂ ಹೆಚ್ಚಾಗುತ್ತಿದೆ ಎನ್ನುವ ಸತ್ಯಕ್ಕೆ ಈ ವರದಿಯೂ ಫುಷ್ಠಿ ಕೊಡುವಂತೆ ಇದೆ.

ನಕಲಿ ಹಿಂಬಾಲಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ ರಾಹುಲ್‌ಗಾಂಧಿ..!

ಅಮೆರಿಕಾದ ಅಧ್ಯಕ್ಷ, ಭಾರತದ ಪ್ರಧಾನಿ, ಪೋಪ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಟ್ವಿಟರ್ ಖಾತೆಗಳಲ್ಲಿ ಅರ್ಧಕ್ಕೂ ಹೆಚ್ಚು ನಕಲಿ ಖಾತೆಗಳಾಗಿವೆ ಎನ್ನುವ ವರದಿಯನ್ನು ಜಿರೋ ಮಿಡಿಯಾ ಎನ್ನುವ ತಾಣವು ಪ್ರಕಟಿಸಿದ್ದು, ಸದ್ಯ ಇದು ಹೊಸ ಚರ್ಚೆಯನ್ನು ಹುಟ್ಟಿ ಹಾಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿರೋ ಮಿಡಿಯಾ ವರದಿ:

ಜಿರೋ ಮಿಡಿಯಾ ವರದಿ:

ಜಿರೋ ಮಿಡಿಯಾ ಅತಿ ಹೆಚ್ಚು ಫಾಲೋವರ್ ಗಳಿರುವ ವಿಶ್ವದ ಕೆಲ ನಾಯಕರ ಟ್ವಿಟ್ಟರ್ ಖಾತೆಗಳನ್ನು ಅಧ್ಯಯನ ನಡೆಸಿ ನಕಲಿ ಖಾತೆಗಳ ವರದಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ನಕಲಿ ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮೊದಲನೇ ಮೊದಲು, ಪ್ರಧಾನಿ ಮೋದಿಗೆ ನಂತರ ಸ್ಥಾನದಲ್ಲಿದ್ದಾರೆ.

ವರದಿ ಹೇಗೆ..?

ವರದಿ ಹೇಗೆ..?

ಟ್ವಿಟ್ಟರ್ ಆಡಿಟ್ ಅಲ್ಗೋರಿದಂ ಮೂಲಕ ಎಷ್ಟು ಮಂದಿ ಫಾಲೋವರ್ಸ್ ಗಳಿದ್ದಾರೆ? ಹಿಂಬಾಲಕರು ಕೊನೆಯ ಬಾರಿ ಟ್ವೀಟ್ ಮಾಡಿದ್ದು ಎಂದು? ಎಷ್ಟು ಟ್ವೀಟ್ ಮಾಡಿದ್ದಾರೆ ಈ ವಿಚಾರಗಳನ್ನು ಲೆಕ್ಕ ಹಾಕಿ ಈ ಅಧ್ಯಯನ ನಡೆಸಲಾಗಿದೆ ಎನ್ನುಲಾಗಿದೆ.

ರಾಹುಲ್‌ಗೂ ಜಾಸ್ತಿ:

ರಾಹುಲ್‌ಗೂ ಜಾಸ್ತಿ:

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಒಟ್ಟು 6.16 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದು, ಇದರಲ್ಲಿ ಶೇ.69 ಮಂದಿ ನಕಲಿ ಫಾಲೋವರ್ಸ್ ಎಂದು ವರದಿ ಹೇಳಿದೆ.

ಮೋದಿಗೆ ನಕಲಿ ಹಿಂಬಾಲಕರು:

ಮೋದಿಗೆ ನಕಲಿ ಹಿಂಬಾಲಕರು:

ನಮ್ಮ ಪ್ರಧಾನಿ ನರೇಂದ್ರ ಮೋದಿ ಅತೀ ಹೆಚ್ಚು ಮಂದಿ ಟ್ವಿಟರ್ ಹಿಂಬಾಲಕರನ್ನು ಹೊಂದಿದ್ದಾರೆ. ಒಟ್ಟು 40.6 ಮಿಲಿಯನ್ ಹಿಂಬಾಲಕರಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯಲ್ಲಿ ಶೇ. 60%ರಷ್ಟು ಮಂದಿ ಹಿಂಬಾಲಕರು ನಕಲಿ ಎಂದು ತಿಳಿಸಿದೆ.

ಪೋಪ್ ಗೂ ನಕಲಿ ಹಿಂಬಾಲಕರು

ಪೋಪ್ ಗೂ ನಕಲಿ ಹಿಂಬಾಲಕರು

ಪೋಪ್ ಫ್ರಾನ್ಸಿಸ್ ಅವರು ಸಹ ನಕಲಿ ಹಿಂಬಾಲಕರನ್ನು ಹೊಂದಿದ್ದಾರೆ. ಅವರನ್ನು 16.7 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದು, ಇದರಲ್ಲಿ 59% ಮಂದಿ ನಕಲಿ ಎಂದು ಅಧ್ಯಯನ ತಿಳಿಸಿದೆ.

ಟ್ರಂಪ್ ಹಿಂಬಾಲಕರು ನಕಲಿ:

ಟ್ರಂಪ್ ಹಿಂಬಾಲಕರು ನಕಲಿ:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 47.9 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದು ಇದರಲ್ಲಿ 37% ನಕಲಿ ಹಿಂಬಾಲಕರು ಇದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Twitter Shortcut ಕೀಗಳನ್ನು ಬಳಸುವುದು ಟ್ವಿಟ್ಟಿಗರ ಮೂಲ ಲಕ್ಷಣಗಳಲ್ಲೊಂದು!!

ಓದಿರಿ; ಟಾಪ್‌ಎಂಡ್ ಫೋನ್‌ ನಾಚಿಸುವಂತಿದೆ ನೂತನ ರೆಡ್‌ಮಿ 5 ಸ್ಮಾರ್ಟ್‌ಫೋನ್: ಬೆಲೆ ಎಷ್ಟು..?

English summary
Narendra Modi and Rahul has over 50% fake Twitter followers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot