ಒಂದೇ ದಿನ ಲಕ್ಷ ಲಕ್ಷ ಟ್ವಿಟ್ಟರ್ ಹಿಂಬಾಲಕರನ್ನು ಕಳೆದುಕೊಂಡರು ಮೋದಿ, ಒಬಾಮ!!

|

ಕೆಲವು ವರ್ಷಗಳಿಂದಲೂ ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಹಾವಳಿ ಜಾಸ್ತಿಯಾಗಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ 'ಟ್ವಿಟ್ಟರ್' ಕಳೆದ ಎರಡು ದಿನಗಳಿಂದ ಕೋಟ್ಯಂತರ ಖಾತೆಗಳನ್ನು ರದ್ದು ಗೊಳಿಸುತ್ತಿದೆ. ಹಾಗಾಗಿ, ಜಗತ್ತಿನಾದ್ಯಂತ ಹಲವು ಗಣ್ಯರ ಟ್ವಿಟ್ಟರ್ ಖಾತೆಯಲ್ಲಿನ ಫಾಲೋವರ್‌ಗಳ ಸಂಖ್ಯೆಯಲ್ಲಿ ದಿನ ಬೆಳಗಾಗುವುದರೊಳಗೆ ಭಾರಿ ಇಳಿಕೆ ಕಂಡುಬಂದಿದೆ.

ಹೌದು, ನಕಲಿ ಖಾತೆಗಳನ್ನು ನಿಯಂತ್ರಿಸಲು ಟ್ವಿಟರ್ ಮುಂದಾಗಿರುವುದರಿಂದ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ ಕಡಿಮೆಯಾಗಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಹಿಂಬಾಲಕರ ಸಂಖ್ಯೆ 30 ಲಕ್ಷ ಕಡಿಮೆಯಾಗಿದ್ದರೆ, ಪ್ರಧಾನಿ ಮೋದಿಯವರು 2.85 ಲಕ್ಷ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.

ಒಂದೇ ದಿನ ಲಕ್ಷ ಲಕ್ಷ ಟ್ವಿಟ್ಟರ್ ಹಿಂಬಾಲಕರನ್ನು ಕಳೆದುಕೊಂಡರು ಮೋದಿ, ಒಬಾಮ!!

ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರ ಪೈಕಿ ಮೂರನೇ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫಾಲೋವರ್‌ಗಳ ಸಂಖ್ಯೆ ಈಗ 4,33,83,525ಗಳಿಂದ 4,30,98,779ಕ್ಕೆ ಇಳಿದಿದೆ. ಇನ್ನು ಟ್ವಿಟ್ಟರ್ ಸಿಇಒ ಆಗಿರುವ ಜಾಕ್ ಡೋರ್ಸಿಯವರ ಹೊಂಬಾಲಕರ ಸಂಖ್ಯೆಯೂ 2.30 ಲಕ್ಷದಷ್ಟು ಇಳಿಕೆಯಾಗಿರುವುದು ಆಶ್ಚರ್ಯಕರವಾಗಿದೆ.

ನಕಲಿ ಖಾತೆಗಳು ಎಂಬ ದೂರು ಬಂದಾಗ, ರೋಬೋಟ್‌ಗಳನ್ನು ಬಳಸಿ ಖಾತೆ ತೆರೆದಾಗ, ಸುಳ್ಳು ಸುದ್ದಿಗಳನ್ನು ಹರಡುವ ಪ್ರೊಫೈಲ್‌ಗ‌ಳು, ಟ್ವಿಟರ್‌ನಲ್ಲಿ ಸ್ಪ್ಯಾಮ್‌ ಮಾಡುತ್ತಿದ್ದರೆ ಮತ್ತು ಇತರರನ್ನು ಬೈಯುವುದು ಹಾಗೂ ದ್ವೇಷಕಾರಿ ಹೇಳಿಕೆ ನೀಡುವ ಟ್ವಿಟರ್‌ನ ಖಾತೆಗಳನ್ನು ನಕಲಿ ಎಂದು ಗುರುತಿಸಿ, ಅವುಗಳನ್ನು ಅಳಿಸಲಾಗುತ್ತದೆ ಎಂದು ಟ್ವಿಟ್ಟರ್ ತಿಳಿಸಿದೆ.

ಒಂದೇ ದಿನ ಲಕ್ಷ ಲಕ್ಷ ಟ್ವಿಟ್ಟರ್ ಹಿಂಬಾಲಕರನ್ನು ಕಳೆದುಕೊಂಡರು ಮೋದಿ, ಒಬಾಮ!!

ಮತ್ತೊಂದು ವಿಷಯವೆಂದರೆ, ಳೆದ ಕೆಲವು ತಿಂಗಳುಗಳಿಂದಲೇ ಅನುಮಾನಾಸ್ಪದ ಖಾತೆಗಳನ್ನು ಸ್ಥಗಿತಗೊಳಿಸಿದೆ. ಆದರೆ, ಖಾತೆಗಳನ್ನು ಅಳಿಸಿರಲಿಲ್ಲ. ಅಂದರೆ, ಸ್ಥಗಿತ ಖಾತೆಗಳಿಂದ ಲೈಕ್‌, ರಿಟ್ವೀಟ್‌ ಮಾಡಲು ಸಾಧ್ಯವರಲಿಲ್ಲ. ಆದರೆ, ಆ ಖಾತೆಗಳು ಯಾರನ್ನು ಫಾಲೋ ಮಾಡಿದರೂ ಅದು ಫಾಲೋವರ್‌ಗಳ ಪಟ್ಟಿಯಲ್ಲಿ ಕಾಣಿಸುತ್ತಿತ್ತು ಅಷ್ಟೆ ಎಂದು ಹೇಳಲಾಗಿದೆ.

ಓದಿರಿ: ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!!

Best Mobiles in India

English summary
The micro-blogging platform was yet to come up with an official statement on this.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X