ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಹಾಕುವ ಮುನ್ನ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳು!

By Suneel
|

ವೈಫೈ ಸೌಲಭ್ಯ ಉಚಿತವಾಗಿ ಸಿಗುತ್ತಿದ್ದಂತೆಯೇ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಇಂದು ಆನ್‌ಲೈನ್‌ ಬಳಕೆದಾರರೆಲ್ಲಾ ಹಲವು ವಿಷಯಗಳಲ್ಲಿ ಎಚ್ಚೆತ್ತು ಕೊಳ್ಳಬೇಕಾದ ಸಮಯ.

ಆನ್‌ಲೈನ್‌, ಸಾಮಾಜಿಕ ಜಾಲತಾಣಗಳನ್ನು ಬಳಸುವವರೆಲ್ಲಾ ದಿನನಿತ್ಯ ಯಾವುದಾದರೂ ಒಂದು ವಿಷಯಕ್ಕೆ ವೆಬ್‌ಸೈಟ್‌ಗಳಲ್ಲಿ ನಿಮ್ಮ ಅಭಿಪ್ರಾಯಗಳು, ವಿಮರ್ಶೆಗಳನ್ನು (commens) ಒಮ್ಮೆ ಯಾದರೂ ನೀಡಿರುತ್ತೀರಿ. ವೆಬ್‌ಸೈಟ್‌ಗಳಲ್ಲಿ ಕಾಮೆಂಟ್ ವಿಭಾಗ ಒಂದು ವಿಷಯದ ಬಗ್ಗೆ ಹೆಚ್ಚು ಮಾಹಿತಿ ತಿಳಿಸುತ್ತದೆ. ಆದರೆ ನೀವು ಕಾಮೆಂಟ್‌ ವಿಭಾಗದಲ್ಲಿ ಏನಾದರೂ ಬರೆಯುವ ಮೊದಲು ಆ ವಿಷಯಕ್ಕೆ ಸಂಬಂಧ ಪಟ್ಟಂತೆ ಸಂಪೂರ್ಣ ಮಾಹಿತಿ ತಿಳಿದಿರಬೇಕು.

ಐಫೋನ್‌ನಲ್ಲಿ ಡಿಲೀಟ್‌ ಫೋಟೋ ರಿಕವರಿ ಹೇಗೆ ?

ಅಲ್ಲದೇ ಏನು ಬರೆದರೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂದು ಮೊದಲು ಚಿಂತಿಸಬೇಕಿದೆ. ಕಾಮೆಂಟ್‌ಗಳನ್ನು ಸಹಜವಾಗಿ ಆನ್‌ಲೈನ್‌ ಬಳಕೆದಾರರು ಎಲ್ಲರೂ ಸಹ ನ್ಯೂಸ್‌ ವೆಬ್‌ಸೈಟ್‌, ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ ತಾಣಗಳಲ್ಲಿ ಟೈಪಿಸುತ್ತೀರಿ. ಆದರೆ ಇಂದು ನೀವು ಕಾಮೆಂಟ್‌ ವಿಭಾಗಗಳಲ್ಲಿ ಕಾಮೆಂಟ್‌ ನೀಡುವ ಮೊದಲು ನಿಮಗೆ ನೀವೇ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳಿವೆ. ಈ ಪ್ರಶ್ನೆಗಳು ನಿಮ್ಮ ರಕ್ಷಣೆಗಾಗಿ. ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳಿಗೆ ಕಾಮೆಂಟ್‌ ಹಾಕುವ ಮುನ್ನ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳು ಯಾವುವು ಎಂದು ತಿಳಿಯಲು ಸ್ಲೈಡರ್‌ ಓದಿರಿ.

ನನ್ನ ಕಾಮೆಂಟ್‌ ನಿಜವಾಗಿಯೂ ಉಪಯೋಗವಾಗಬಲ್ಲದೇ ?

ನನ್ನ ಕಾಮೆಂಟ್‌ ನಿಜವಾಗಿಯೂ ಉಪಯೋಗವಾಗಬಲ್ಲದೇ ?

ನಿಮ್ಮ ಅಭಿಪ್ರಾಯಗಳು ಕೆಲವೊಮ್ಮೆ ಉಪಯೋಗವಾಗದಿರಬಹುದು. ಒಂದು ವಿಷಯಕ್ಕೆ ಅಭಿಪ್ರಾಯ ತಿಳಿಸುವ ಮುನ್ನ ಈ ಮೊದಲು ಏನೇನು ಕಾಮೆಂಟ್ಸ್‌ ಬಂದಿದೆ ಎಂದು ನೋಡಿ. ಹಾಗೂ ಆ ವಿಷಯದ ಬಗ್ಗೆ ನೀವು ಕಾಮೆಂಟ್‌ ಮಾಡಲು ಮಾಹಿತಿಹೊಂದಿದ್ದೀರ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಿ. ತಪ್ಪು ಕಾಮೆಂಟ್‌ ನೀಡುವುದರಿಂದ ನಿಮಗೆ ಹಾಗೂ ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಬೀಳಬಹುದು.

ಓದಿದ ಮಾಹಿತಿ ಹಾಸ್ಯವೇ ?

ಓದಿದ ಮಾಹಿತಿ ಹಾಸ್ಯವೇ ?

ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಓದಿದ ಮಾಹಿತಿ ಹಾಸ್ಯವಾಗಿರಬಹುದು. ಆದರೆ ಅದು ನಿಜವೇ ಅಥವಾ ಹಾಸ್ಯಕ್ಕಾಗಿ ಮಾಡಿದ ಬರಹವೇ ಎಂದು ಕಾಮೆಂಟ್‌ ಹಾಕುವ ಮೊದಲು ದೃಡಪಡಿಸಿಕೊಳ್ಳಿ. ಕೆಲವೊಮ್ಮೆ ನಿಜಾಂಶ ತಿಳಿಯದೇ ಹಾಕುವ ಕಾಮೆಂಟ್‌ಗಳು ಅಪರಾಧವಾಗುತ್ತವೆ.

ನನ್ನ ಕಾಮೆಂಟ್‌ ಅಪರಾಧವೇ ?

ನನ್ನ ಕಾಮೆಂಟ್‌ ಅಪರಾಧವೇ ?

ಕಾಮೆಂಟ್‌ ಮಾಡುವ ಎಲ್ಲರೂ ತಿಳಿಯಲೇ ಬೇಕಾದ ಇನ್ನೊಂದು ವಿಷಯ ಅಂದ್ರೆ ಕೆಲವೊಮ್ಮೆ ಕಾಮೆಂಟ್‌ಗಳು ಕ್ಷಣಾರ್ಧದಲ್ಲಿ ಅಪರಾಧವಾಗಿಬಿಡುತ್ತವೆ. ಇನ್ನೊಬ್ಬರ ಮನಸ್ಸಿಗೆ ಬೇಸರವಾಗುವ ವಿಷಯಗಳು, ರೇಗಿಸುವ ವಿಷಯಗಳು ಸಹ ಅಪರಾಧವಾಗುತ್ತವೆ. ಆದ್ದರಿಂದ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ ಮಾಡುವ ಮೊದಲು ಅಪರಾಧವಾಗುವಂತ ಮಾಹಿತಿಗಳ ಬಗ್ಗೆ ಎಚ್ಚರವಹಿಸಿ.

ಇತರರು ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆಯೇ ?

ಇತರರು ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆಯೇ ?

ಕೆಲವೊಮ್ಮೆ ಮುಖ್ಯವಿಷಯಗಳಿಗೆ ಸಂಬಂಧಿಸಿದಂತೆ ನೀವು ಟೈಪಿಸಲು ಹೊರಟಿರುವ ಅಭಿಪ್ರಾಯವನ್ನು ಇತರರು ಈಗಾಗಲೇ ಯಾರಾದರೂ ಟೈಪಿಸಿದ್ದಾರೆಯೇ ಎಂಬುದನ್ನು ಕಾಮೆಂಟ್‌ ವಿಭಾಗದಲ್ಲಿ ನೋಡಿ ತಿಳಿಯಿರಿ

ಕೆಲವರು ನಿಮ್ಮ ಅಭಿಪ್ರಾಯಕ್ಕೆ ಒಪ್ಪದಿದ್ದರೇ ?

ಕೆಲವರು ನಿಮ್ಮ ಅಭಿಪ್ರಾಯಕ್ಕೆ ಒಪ್ಪದಿದ್ದರೇ ?

ನೀವು ನೀಡುವ ನಿರ್ಧಿಷ್ಟ ಅಭಿಪ್ರಾಯಕ್ಕೆ ಕೆಲವರು ಒಪ್ಪದಿರಬಹುದು ಅಂತಹ ಸಮಯದಲ್ಲಿ ಬೇಸರ ಮಾಡಿಕೊಳ್ಳದೇ ವಾದಕ್ಕೆ ಇಳಿದು ಸಮಸ್ಯೆ ತಂದುಕೊಳ್ಳುವ ಬದಲು ಇಂಟರ್ನೆಟ್‌ ಸಂಪರ್ಕದಿಂದ ಹೊರಬನ್ನಿ.

Best Mobiles in India

Read more about:
English summary
Top 5 Questions To ask Yourself before you Comment on Social Media. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X