ಟ್ವಿಟರ್ ಹುಟ್ಟಿನ ನಂತರ ಇದೇ ಮೊದಲ ಬಾರಿಗೆ ತನ್ನ ಚಹರೆ ಬದಲಿಸಿದೆ..!

Written By:

ಮೈಕ್ರೋ ಬ್ಲಾಗಿಂಗ್ ಟ್ವಿಟರ್ ಹೊಸದೊಂದು ಮಹತ್ವದ ಬದಲಾವಣೆಯನ್ನು ಕಂಡಿದೆ ಎನ್ನಲಾಗಿದೆ. ಇಷ್ಟು ದಿನ ಕೇವಲ 140 ಅಕ್ಷರಗಳನ್ನು ಮಾತ್ರವೇ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಸದ್ಯ ತನ್ನ ಬಳಕೆದಾರರಿಗೆ ಅಕ್ಷರಮಿತಿಯನ್ನು 280ಕ್ಕೆ ಹೆಚ್ಚಿಸಿದೆ. ಈ ಮೂಲಕ ಹೆಚ್ಚಿನ ಅಕ್ಷರಗಳನ್ನು ಬರೆಯುವ ಅವಕಾಶ ಮಾಡಿಕೊಡಲಾಗಿದೆ.

ಟ್ವಿಟರ್ ಹುಟ್ಟಿನ ನಂತರ ಇದೇ ಮೊದಲ ಬಾರಿಗೆ ತನ್ನ ಚಹರೆ ಬದಲಿಸಿದೆ..!

ಓದಿರಿ: ಫೇಸ್‌ಬುಕ್ ಬಳಕೆ ಇನ್ನು ಮುಂದೆ ಟೈಮ್ ವೆಸ್ಟ್ ಅಲ್ಲವೇ ಅಲ್ಲ..!

ಈ ಹಿಂದಿನಿಂದಲೂ ಟ್ವಿಟ್ಟರ್ ಅಕ್ಷರಗಳ ಮಿತಿಯನ್ನು ಏರಿಕೆ ಮಾಡಬೇಕು ಎನ್ನುವ ಬೇಡಿಕೆ ಬಳಕೆದಾರರಿಂದ ವ್ಯಕ್ತವಾಗಿತ್ತು. ಬಳಕೆದಾರರ ಬೇಡಿಕೆ ಸ್ಪಂದಿಸಿರುವ ಟ್ವಿಟರ್ 140ರಿಂದ 280ಕ್ಕೆ ಅಕ್ಷರಗಳ ಮಿತಿಯನ್ನು ಹೆಚ್ಚಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದೇ ಮೊದಲ ಬಾರಿಗೆ ಈ ಕ್ರಮ:

ಇದೇ ಮೊದಲ ಬಾರಿಗೆ ಈ ಕ್ರಮ:

ಇದೇ 11 ವರ್ಷದ ಹಿಂದೆ ಅಂದರೆ 2006ರಲ್ಲಿ ಕಾರ್ಯಚರಣೆಯನ್ನು ಆರಂಭಿಸಿದ ಟ್ವಿಟರ್, ಇದೇ ಮೊದಲ ಬಾರಿ ಅಕ್ಷರ ಮಿತಿಯನ್ನು ವಿಸ್ತರಿಸಿದೆ ಎನ್ನಲಾಗಿದ್ದು, ಇದು ಬಳಕೆದಾರರಿಗೆ ಹೊಸ ಅನುಭವ ಮತ್ತು ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಸುದ್ದಿ ಹರಡುವ ಪ್ರಮುಖ ತಾಣ:

ಸುದ್ದಿ ಹರಡುವ ಪ್ರಮುಖ ತಾಣ:

ಈಗಾಗಲೇ ಸುದ್ದಿಯನ್ನು ಹರಡಲು ಮತ್ತು ಮಾಹಿತಿಯನ್ನು ಶೀಘ್ರವೇ ಜನರಿಗೆ ತಲುಪಿಸುವ ಕಾರ್ಯವನ್ನು ಟ್ವಿಟರ್ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಟ್ವಿಟರ್ ಬಳಕೆದಾರರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ.

330 ದಶಲಕ್ಷ ಬಳಕೆದಾರರು:

330 ದಶಲಕ್ಷ ಬಳಕೆದಾರರು:

ಇಡೀ ವಿಶ್ವದಲ್ಲಿ 330 ದಶಲಕ್ಷ ಸಕ್ರಿಯ ಟ್ವಿಟರ್‌ ಬಳಕೆದಾರರಿದ್ದಾರೆ ಎನ್ನಲಾಗಿದ್ದು, ಬೇರೆಲ್ಲಾ ಸಾಮಾಜಿಕ ಜಾಲತಾಣಗಳಿಗಿಂತ ವಿಭಿನ್ನವಾಗಿರುವ ಟ್ವಿಟರ್ ಅಕ್ಷರಗಳಿಂದಲೇ ಜನರನ್ನು ತಲುಪುವ ಕಾರ್ಯವನ್ನು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Twitter to double tweet limit to 280 characters. to kmow more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot