ನೇರ ಮೆಸೇಜ್ ಬಟನ್ನನ್ನು ಪರೀಕ್ಷಿಸುತ್ತಿರುವ ಟ್ವಿಟರ್.

|

ಮೈಕ್ರೋ ಬ್ಲಾಗಿಂಗ್ ಅಂತರ್ಜಾಲ ಪುಟವಾದ ಟ್ವಿಟರ್, ಗ್ರಾಹಕರು ಉದ್ದಿಮೆದಾರರೊಂದಿಗೆ ನೇರ ಮೆಸೇಜು ಕಳುಹಿಸುವ ಮೂಲಕ ಸಂವಹಿಸಲು ಸಾಧ್ಯವಾಗಿಸುವಂತೆ ನೇರ ಮೆಸೇಜ್ ಬಟನ್ನನ್ನು ಪರೀಕ್ಷಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ನೇರ ಮೆಸೇಜ್ ಬಟನ್ನನ್ನು ಪರೀಕ್ಷಿಸುತ್ತಿರುವ ಟ್ವಿಟರ್.

ಅನೇಕ ಉದ್ಯಮಗಳು ತನ್ನ ಗ್ರಾಹಕರೊಡನೆ ಸಂವಹನ ನಡೆಸಲು ಮತ್ತವರಿಗೆ ಸಹಾಯ ನೀಡಲು ಟ್ವಿಟರ್ ಉಪಯೋಗಿಸುತ್ತಿವೆ.

ಓದಿರಿ: ಎಲ್.ಇ.ಡಿ ಟಿವಿ ಬಿಡುಗಡೆಗೆ ಅಮೆಜಾನ್ ಜೊತೆ ಕೈಜೋಡಿಸಿದ ಫಿಲಿಪ್ಸ್.

ಆದರೆ ಬಹಳಷ್ಟು ಬಾರಿ ತಮ್ಮ ಖಾತೆಗೆ ಬಂದಿರುವ ಕೋಪೋದ್ರಿಕ್ತ ಟ್ವೀಟುಗಳಿಗೆ ಪ್ರತಿಕ್ರಿಯೆ ನೀಡಬೇಕಾಗಿ ಬಂದು, ನಂತರ ಗ್ರಾಹಕರಿಗೆ ಖಾಸಗಿ ಮೆಸೇಜು ಕಳುಹಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿ ಬರುತ್ತಿತ್ತು ಎಂದು ತಾಂತ್ರಿಕ ವೆಬ್ ಪುಟ ಟೆಕ್ ಕ್ರನ್ಚ್.ಕಾಮ್ ವರದಿ ಮಾಡಿದೆ.

ಈಗ, ಮೊಬೈಲಿನಲ್ಲಿ ಪ್ರೊಫೈಲುಗಳು ಪರದೆಯ ಮೇಲೆ ಮೂಡುವ ರೀತಿಯಲ್ಲಿ ಟ್ವಿಟರ್ ಚಿಕ್ಕ ಬದಲಾವಣೆ ಮಾಡಿದೆ; ಸಾರ್ವಜನಿಕ ಟ್ವೀಟುಗಳ ಬದಲಾಗಿ ನೇರ ಮೆಸೇಜು ಕಳುಹಿಸುವುದಕ್ಕೆ ತನ್ನ ಬಳಕೆದಾರರನ್ನು ಪ್ರೋತ್ಸಾಹಿಸುತ್ತದೆ.

ಈ ಮುಂಚೆ ಅಕ್ಕಪಕ್ಕದಲ್ಲಿದ್ದ “ಟ್ವೀಟ್ ಮಾಡಿ” ಮತ್ತು “ಮೆಸೇಜ್” ಬಟನ್ನಿನ ಪೂರ್ತಿ ಜಾಗವನ್ನು ಹೊಸ ಬಟನ್ ಆಕ್ರಮಿಸಿಕೊಂಡಿದೆ.

ನೇರ ಮೆಸೇಜ್ ಬಟನ್ನನ್ನು ಪರೀಕ್ಷಿಸುತ್ತಿರುವ ಟ್ವಿಟರ್.

ಬಳಕೆದಾರರ ಗಮನ “ಟ್ವೀಟ್ ಮಾಡಿ” ಎಂಬ ಬಟನ್ನಿನ ಬದಲಿಗೆ ಈ ದೊಡ್ಡ ಬಟನ್ನಿನ ಕಡೆಗೆ ಹರಿಯುತ್ತದೆ. ಈ ಹೊಸ ವೈಶಿಷ್ಟತೆಯಿಂದಾಗಿ, ಬಳಕೆದಾರರು ತಮ್ಮ ಪ್ರಶ್ನೆಗಳನ್ನು ಖಾಸಗಿ ಮಾತುಕತೆಯಲ್ಲಿ ಕೇಳುವ ಸಾಧ್ಯತೆಗಳು ಜಾಸ್ತಿಯಾಗುತ್ತದೆ ಎನ್ನುವುದನ್ನು ವರದಿ ಗಮನಿಸಿದೆ.

ಓದಿರಿ: ಐಫೋನ್ ಛಾಯಾಗ್ರಹಣದಲ್ಲಿ ಮಾಡುವ ಹತ್ತು ಸಾಮಾನ್ಯ ತಪ್ಪುಗಳು.. ಅದನ್ನು ತಪ್ಪಿಸುವುದೇಗೆ
ಈ ಹೊಸ ವೈಶಿಷ್ಟತೆಯು ಗ್ರಾಹಕರೊಂದಿಗೆ ಮಾತುಕತೆ ನಡೆಸಲು ಉದ್ದಿಮೆದಾರರಿಗೂ ಅನುಕೂಲಕರವಾಗಿದೆ.

ಈ ವಿಶಿಷ್ಟತೆಯನ್ನು ಕೆಲವು ಖಾತೆಗಳು ಈಗಾಗಲೇ ಉಪಯೋಗಿಸಿಕೊಳ್ಳಲಾರಂಭಿಸಿವೆ, ಪ್ರಮುಖವಾಗಿ ಆ್ಯಪಲ್ (@AppleSupport), ಉಬರ್ (@Uber_Support), ಬೀಟ್ಸ್ (@BeatsSupport), ಎಟಿವಿಐ (@ATVIAssist(Activation Support) ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲಾರಂಭಿಸಿದೆ ಎಂದು ವರದಿ ತಿಳಿಸಿದೆ.

ಮೂಲ: ಐ.ಎ.ಎನ್.ಎಸ್

Best Mobiles in India

English summary
Micro-blogging website Twitter is testing a new feature for brands that puts its "Messaging" button front-and-centre, thereby encouraging customers to start their conversations with the business via DM (direct message) instead of in public view, a media report said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X