Subscribe to Gizbot

ಕಂಪ್ಯೂಟರ್‌ಗೆ ವಾಟ್ಸಾಪ್‌ ಅಪ್ಲಿಕೇಶನ್‌ ಅಂತೂ ಬಂತು

Written By:

ಮೊಬೈಲ್‌ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಈಗ ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಬಳಕೆದಾರರಿಗೆ ಇಬ್ಬರಿಗೂ ಒಂದು ಸಂತೋಷದಾಯಕ ಅಚ್ಚರಿ ಫೀಚರ್‌ ಅನ್ನು ಶೀಘ್ರವಾಗಿ ನೀಡಲಿದೆ. ಕಂಪ್ಯೂಟರ್‌ ಮುಂದೆ ಕುಳಿತು ಕೊಳ್ಳುವವರು ಅಂತು ಇಂತು ಪದೇ ಪದೇ ಸ್ಮಾರ್ಟ್‌ಫೋನ್‌‌ ತೆಗೆದು ವಾಟ್ಸಾಪ್‌ ಚೆಕ್‌ ಮಾಡುವ ಬದಲು ನೇರವಾಗಿ ಕಂಪ್ಯೂಟರ್‌ನಲ್ಲೇ ವಾಟ್ಸಾಪ್‌ ಬಳಸಬಹುದು. ಪ್ರಸ್ತುತದಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಬಳಕೆದಾರು ವಾಟ್ಸಾಪ್‌ನಿಂದ ಯಾವ ಯಾವ ಫೀಚರ್‌ ಅನ್ನು ಪಡೆದಿದ್ದಾರೋ ಆ ಎಲ್ಲಾ ಫೀಚರ್‌ಗಳನ್ನು 'ವಾಟ್ಸಾಪ್‌ ಅನ್ನು ಕಂಪ್ಯೂಟರ್‌ಗೆ ಇನ್‌ಸ್ಟಾಲ್‌ ಮಾಡಿ' ನಿರ್ವಹಿಸಬಹುದಾಗಿದೆ.

ಕಂಪ್ಯೂಟರ್‌ಗೆ ವಾಟ್ಸಾಪ್‌ ಅಪ್ಲಿಕೇಶನ್‌ ಅಂತೂ ಬಂತು

ವಾಟ್ಸಾಪ್‌ 1 ಶತಕೋಟಿ ಬಳಕೆದಾರರನ್ನು ಹೊಂದಿರುವ ಪ್ರಖ್ಯಾತ ಮೊಬೈಲ್‌ ಮೆಸೇಜಿಂಗ್ ಆಪ್‌. ಪ್ರಸ್ತುತದಲ್ಲಿ ವಾಟ್ಸಾಪ್‌ ಅನ್ನು ಮೊಬೈಲ್‌ನಿಂದ ಬ್ರೌಸರ್‌ ಮೂಲಕ ಕಂಪ್ಯೂಟರ್‌ನಲ್ಲಿ ಕನೆಕ್ಟ್‌ ಮಾಡಿಕೊಳ್ಳಬಹುದಾಗಿದೆ ಆದರೂ ಸಹ ಕೇವಲ ಕೆಲವು ಫೀಚರ್‌ಗಳು ಮಾತ್ರ ಲಭ್ಯ. ಆದರೆ ವಾಟ್ಸಾಪ್ ಅನ್ನು ಶೀಘ್ರದಲ್ಲಿ ಕಂಪ್ಯೂಟರ್‌ ಬಳಕೆದಾರರಿಗೆ ಹೆಚ್ಚು ಅನುಕೂಲವಾಗುವಂತೆ ಅಭಿವೃದ್ದಿ ಪಡಿಸುತ್ತಿದ್ದು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ.

ಅಂದಹಾಗೆ ಈ ಮಾಹಿತಿ ಈಗ ಅನಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಮೆಸೇಜಿಂಗ್‌ ದೈತ್ಯ ಆಪ್‌ ಬದಲಾವಣೆ ಪಡೆಯುತ್ತಿರುವ ಇಮೇಜ್‌ ಮತ್ತು ಮಾಹಿತಿ ಬಹುಸಂಖ್ಯಾತರಿಗೆ ತಿಳಿದಿದೆ. ವಾಟ್ಸಾಪ್‌ 'ಡೆಸ್ಕ್‌ಟಾಪ್‌ ವರ್ಸನ್'‌ಗೆ ಈಗ ಸಂಪೂರ್ಣ ನಮ್ಯತೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿಲ್ಲವಾದರೂ ಸಹ, ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ನಲ್ಲಿ ಉತ್ತಮ ಅನುಭವ ನೀಡಲಿದೆಯಂತೆ.

ಕಂಪ್ಯೂಟರ್‌ಗೆ ವಾಟ್ಸಾಪ್‌ ಅಪ್ಲಿಕೇಶನ್‌ ಅಂತೂ ಬಂತು

ವಾಟ್ಸಾಪ್‌ ಅಪ್ಲಿಕೇಶನ್‌ ಕಂಪ್ಯೂಟರ್‌ನಲ್ಲಿ
ವಾಟ್ಸಾಪ್‌ ಅಪ್ಲಿಕೇಶನ್‌ ಕಂಪ್ಯೂಟರ್‌ಗೆ ಇನ್‌ಸ್ಟಾಲ್ ಮಾಡುವುದರಿಂದ ಡಾಕುಮೆಂಟ್‌ಗಳನ್ನು ಸೆಂಡ್‌ ಮಾಡಬಹುದು, ವಾಯ್ಸ್‌ ಕರೆಗಳನ್ನು ಮಾಡಬಹುದು, ಆದರೆ ಮೊಬೈಲ್‌ ಅನ್ನು ಕಂಪ್ಯೂಟರ್‌ಗೆ ಕನೆಕ್ಟ್ ಮಾಡುವ ಅಗತ್ಯವಿಲ್ಲ. ಕಂಪ್ಯೂಟರ್‌ ಮುಂದೆ ಕುಳಿತು ಕೊಳ್ಳುವವರು ಅಂತು ಇಂತು ಪದೇ ಪದೇ ಸ್ಮಾರ್ಟ್‌ಫೋನ್‌‌ ತೆಗೆದು ವಾಟ್ಸಾಪ್‌ ಚೆಕ್‌ ಮಾಡುವ ಬದಲು ನೇರವಾಗಿ ಕಂಪ್ಯೂಟರ್‌ನಲ್ಲೇ ವಾಟ್ಸಾಪ್‌ ಬಳಸಬಹುದು.

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ ಎಂದು ಸ್ಲೈಡರ್‌ ಓದಿ ತಿಳಿಯಿರಿ

 

English summary
You Can Soon Install WhatsApp On Your Computer. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot