ಸಿಮ್ ಕಾರ್ಡ್ ಇಲ್ಲದೆ, ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಬಳಸುವುದು ಹೇಗೆ?

Written By:

ವಾಟ್ಸಾಪ್ ಹ್ಯಾಕ್ ಮಾಡಿ, ಸ್ನೇಹಿತರ ಮೆಸೇಜ್‌ಗಳು, ಫೋಟೋ, ವೀಡಿಯೊಗಳ ಆಕ್ಸೆಸ್ ಪಡೆಯುವುದು ಹೇಗೆ ಎಂದು ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು. ಅಂದಹಾಗೆ ಇಂದಿನ ಲೇಖನದಲ್ಲಿ ಸಿಮ್‌ ಕಾರ್ಡ್‌ ಇಲ್ಲದೆಯೇ ವಾಟ್ಸಾಪ್‌ ಅನ್ನು ಆಂಡ್ರಾಯ್ಡ್‌ನಲ್ಲಿ ಬಳಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅಲ್ಲದೇ ವಾಟ್ಸಾಪ್‌ ಚಾಟಿಂಗ್‌ ಮಾಡುತ್ತ ಇತರರ ವಾಟ್ಸಾಪ್‌ ಬಗ್ಗೆ ಗೂಢಚರ್ಯೆ ನಡೆಸುವುದು ಹೇಗೆ ಎಂದು ಸಹ ತಿಳಿಯಬಹುದು.

ವಾಟ್ಸಾಪ್ ಹ್ಯಾಕ್ ಮಾಡಿ, ಸ್ನೇಹಿತರ ಮೆಸೇಜ್, ಫೋಟೋ, ವೀಡಿಯೊ ಆಕ್ಸೆಸ್ ಹೇಗೆ?

ಸಿಮ್‌ ಕಾರ್ಡ್‌ ಇಲ್ಲದೆಯೇ ವಾಟ್ಸಾಪ್ ಖಾತೆಯನ್ನು ಟ್ಯಾಬ್ಲೆಟ್‌ನಲ್ಲಿ ಕ್ರಿಯೇಟ್ ಮಾಡುವುದು ಹೇಗೆ? ಎಂಬ ಪ್ರಶ್ನೆ ಎಲ್ಲರನ್ನು ಕಾಡಬಹುದು. ಹೌದು, ಸುಲಭ ಟ್ರಿಕ್‌ಗಳಿಂದ ಇದು ಸಾಧ್ಯ. ಟ್ಯಾಬ್ಲೆಟ್ ಬಳಕೆದಾರರು ಸಿಮ್‌ ಕಾರ್ಡ್‌ ಇಲ್ಲದೇ ವಾಟ್ಸಾಪ್ ಖಾತೆಯನ್ನು ಕ್ರಿಯೇಟ್ ಮಾಡಿ ವಾಟ್ಸಾಪ್(WhatsApp) ಬಳಸಬಹುದು. ಸಿಮ್ ಕಾರ್ಡ್‌ ಇಲ್ಲದೇ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್

ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್

ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ತಮ್ಮ ಟ್ಯಾಬ್ಲೆಟ್‌ಗೆ ವಾಟ್ಸಾಪ್ ಇನ್‌ಸ್ಟಾಲ್ ಮಾಡಿ. ಇನ್‌ಸ್ಟಾಲ್‌ ಆದ ನಂತರ ಜಸ್ಟ್‌ ಆಪ್‌ ಲಾಂಚ್‌ ಮಾಡಿ, ಟ್ಯಾಬ್ಲೆಟ್‌ನಲ್ಲಿ ಸಿಮ್‌ ಕಾರ್ಡ್‌ ಇಲ್ಲದೇ ಓಪನ್ ಮಾಡಿ.

ವಾಟ್ಸಾಪ್ ಖಾತೆ ಆಕ್ಟಿವೇಟ್‌ ಮಾಡಲು ನಿಮ್ಮ ಮೊಬೈಲ್‌ ನಂಬರ್ ಎಂಟರ್ ಮಾಡಿ

ವಾಟ್ಸಾಪ್ ಖಾತೆ ಆಕ್ಟಿವೇಟ್‌ ಮಾಡಲು ನಿಮ್ಮ ಮೊಬೈಲ್‌ ನಂಬರ್ ಎಂಟರ್ ಮಾಡಿ

ವಾಟ್ಸಾಪ್ ಆಪ್ ಓಪನ್ ಮಾಡಿದ ನಂತರ, ವಾಟ್ಸಾಪ್ ಖಾತೆ ತೆರೆಯಲು ಬಯಸುವ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ. ನಂತರ ವಾಟ್ಸಾಪ್ "We have sent an SMS to your number, We will automatically detect that and let you know when we are done" ಎಂಬ ನೋಟಿಫಿಕೇಶನ್ ಪ್ರದರ್ಶನ ನೀಡುತ್ತದೆ.

ವೆರಿಫಿಕೇಶನ್‌ ಕೋಡ್ ಎಂಟರ್ ಮಾಡಿ

ವೆರಿಫಿಕೇಶನ್‌ ಕೋಡ್ ಎಂಟರ್ ಮಾಡಿ

ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಖಾತೆ ಕ್ರಿಯೇಟ್ ಮಾಡುತ್ತಿರುವ ಮೊಬೈಲ್‌ ನಂಬರ್ ಇತರೆ ಯಾವುದೇ ಡಿವೈಸ್‌ನಲ್ಲಿ ಆಕ್ಟಿವೇಟ್ ಆಗಿದ್ದರು ಪರವಾಗಿಲ್ಲ. ವೆರಿಫಿಕೇಶನ್‌ ಕೋಡ್‌ ಅನ್ನು ಮೆಸೇಜ್‌ ಮೂಲಕ ಪಡೆಯುತ್ತೀರಿ. ಇತರೆ ಡಿವೈಸ್‌ನಲ್ಲಿ ಬಂದ ವೆರಿಫಿಕೇಶನ್ ಕೋಡ್‌ ಅನ್ನು ಚೆಕ್ ಮಾಡಿ ಟ್ಯಾಬ್ಲೆಟ್‌ನಲ್ಲಿ ಇನ್‌ಸ್ಟಾಲ್‌ ಆದ ವಾಟ್ಸಾಪ್ ಆಪ್‌ನಲ್ಲಿ ಎಂಟರ್‌ ಮಾಡಿ.

ಯಾವುದೇ ಸಮಸ್ಯೆ ಇಲ್ಲದೇ ವಾಟ್ಸಾಪ್ ಅನ್ನು ಟ್ಯಾಬ್ಲೆಟ್‌ನಲ್ಲಿ ಬಳಸಿ

ಯಾವುದೇ ಸಮಸ್ಯೆ ಇಲ್ಲದೇ ವಾಟ್ಸಾಪ್ ಅನ್ನು ಟ್ಯಾಬ್ಲೆಟ್‌ನಲ್ಲಿ ಬಳಸಿ

ವೆರಿಫಿಕೇಶನ್ ಕೋಡ್ ಎಂಟರ್ ಮಾಡಿದ ನಂತರ, ಇನ್‌ಸ್ಟಾಲಿಂಗ್ ಪ್ರೊಸೆಸ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಂತರ ನಿಮ್ಮ ಯೂಸರ್‌ನೇಮ್‌ ನೀಡಿ ವಾಟ್ಸಾಪ್‌ ಬಳಸಲು ಆರಂಭಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You Can Use WhatsApp Without SIM Card on Your Tablet. To know more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot