Subscribe to Gizbot

ಈ ಆಪ್‌ನಿಂದ ನಿಮ್ಮವರನ್ನು ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಮಾಡಬಹುದು!!

Written By:

ಎಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಕಂಪೆನಿ ಅಮೆರಿಕದ ಡಿಜಿಟಲ್ ಆಪ್ ಕಂಪೆನಿಯ ಸಹಯೋಗದಲ್ಲಿ ಪ್ರಯಾಣಿಕರು ಮತ್ತು ಚಾಲಕರ ರಕ್ಷಣೆಯ ಆಪ್ ಅಭಿವೃದ್ಧಿಪಡಿಸಿದೆ. ಈ ಆಪ್ ಮೂಲಕ ನಿಮ್ಮವರು ಯಾವುದೇ ಅಪಾಯದಲ್ಲಿ ಸಿಲುಕಿದರೂ ತಕ್ಷಣವೇ ಅವರನ್ನು ಕಾಪಾಡಬಹುದಾದ ಫೀಚರ್ಸ್ ಅನ್ನು ಈ ಆಪ್ ಹೊಂದಿದೆ.

ತೊಂದರೆಯಲ್ಲಿರುವವರ ಮಾಹಿತಿಯು ಕುಟುಂಬದವರು ಹಾಗೂ ಸಂಬಂಧಿಕರಿಗೆ ತಿಳಿಸುವಂತಹ ಈ ನೂತನ ಆಪ್‌ಗೆ 'ಯುಆರ್ ಸೇಫ್‌' (URSAFE) ಎಂದು ಹೆಸರಿಡಲಾಗಿದೆ.ಈ ಆಪ್ ನಲ್ಲಿ ಕುಟುಂಬದವರು ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಆಪತ್ತಿನಲ್ಲಿ ಇರುವವರನ್ನು ಕೆಲವೇ ಕ್ಷಣಗಳಲ್ಲಿ ರಕ್ಷಣೆ ಮಾಡಬಹುದಾಗಿದೆ.

ಈ ಆಪ್‌ನಿಂದ ನಿಮ್ಮವರನ್ನು ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಮಾಡಬಹುದು!!

ಬಳಕೆದಾರರು ಈ ಆಪ್ ಅನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರಬೇಕು. ನಂತರ ಈ ಆಪ್ ನಲ್ಲಿ ಕುಟುಂಬದವರು ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರಬೇಕು. ಒಮ್ಮೆ ಈ ಆಪ್‌ನಲ್ಲಿ ನಿಮ್ಮೆಲ್ಲಾ ವಿವರ ದಾಖಲಿಸಿದರೆ ಪ್ರಯಾಣಿಸುವಾಗ ಏನಾದರೂ ತೊಂದರೆಯಾದರೆ ಮೊಬೈಲ್‌ನಲ್ಲಿರುವ 'ಯುವರ್ ಸೇಫ್‌' ಗುಂಡಿ ಒತ್ತಬೇಕು.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

'ಯುವರ್ ಸೇಫ್‌' ಗುಂಡಿ ಒತ್ತಿದರೆ ತೊಂದರೆಯಲ್ಲಿರುವವರ ಮಾಹಿತಿಯು ಕುಟುಂಬದವರು ಹಾಗೂ ಸಂಬಂಧಿಕರಿಗೆ ತಿಳಿಯುತ್ತದೆ. ಅವರು ಗೂಗಲ್ ಮ್ಯಾಪ್ ಮೂಲಕ ತೊಂದರೆಯಲ್ಲಿರುವವರ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇನ್ನು ನಿಮ್ಮವರು ಅಪಾಯದಲ್ಲಿರುವ ಆ ಸ್ಥಳದಲ್ಲಿರುವ ಪೊಲೀಸ್ ಠಾಣೆಗಳ ಮಾಹಿತಿಯನ್ನು ಪಡೆಯಬಹುದು.

ಈ ಆಪ್‌ನಿಂದ ನಿಮ್ಮವರನ್ನು ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಮಾಡಬಹುದು!!

'ಯುಆರ್ ಸೇಫ್‌' (URSAFE) ಆಪ್ ಮೂಲಕ ಆಪತ್ತಿನಲ್ಲಿ ಇರುವವರನ್ನು ಕೆಲವೇ ಕ್ಷಣಗಳಲ್ಲಿ ರಕ್ಷಣೆ ಮಾಡಬಹುದು. ಇದರಲ್ಲಿ ಗೂಗಲ್ ಮ್ಯಾಪ್ ಮೂಲಕ ವೂ ಟ್ರ್ಯಾಕ್ ಮಾಡಬಹುದಾದ ಸೇವೆ ಇರುವುದರಿಂದ ಪ್ರಯಾಣಿಸುವವರಿಗೆ ಈ ಆಪ್ ಹೆಚ್ಚಿನ ರಕ್ಷಣೆಯನ್ನು ಸಹ ನೀಡುತ್ತದೆ ಎಂದು ಆಪ್ ವಿನ್ಯಾಸಕರಾದ ಕೃಷ್ಣನ್ ಹೇಳುತ್ತಾರೆ.

ಓದಿರಿ: ಇನ್ಮುಂದೆ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ 'ಮೆಸೇಂಜರ್' ಬಳಸಬಹುದಂತೆ!?

ಓದಿರಿ: 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ವೇಗ ಮತ್ತು ಸಾಮರ್ಥ್ಯದ ಬಗ್ಗೆ 'ಒನ್‌ಪ್ಲಸ್' ಕಂಪೆನಿ ಹೇಳಿದ್ದೀಗೆ!?

English summary
Digital technology services company UST Global has partnered with Bosch to offer its in-car passenger safety app – UrSafe. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot