ಡ್ಯುಯಲ್‌ ಸಿಮ್ ಫೋನ್‌ನಲ್ಲಿ 2 ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?

By Suneel
|

ಇಂದಿನ ಸ್ಮಾರ್ಟ್‌ಫೋನ್‌ಗಳು 2, 3 ಸಿಮ್‌ಗಳನ್ನು ಸಪೋರ್ಟ್‌ ಮಾಡುತ್ತವೆ. ಈ ಮಾಹಿತಿ ನಿಮಗೆಲ್ಲಾ ತಿಳಿದಿರುವ ವಿಷಯ. ಎರಡು ಸಿಮ್‌ಗಳನ್ನು ಸಪೋರ್ಟ್‌ ಮಾಡುವ ಫೋನ್‌ಗಳಲ್ಲಿ ಎರಡು ವಾಟ್ಸಾಪ್‌ಗಳನ್ನು, ಎರಡು ಫೇಸ್‌ಬುಕ್‌ ಖಾತೆಗಳನ್ನು, ಎರಡು ಟ್ವಿಟರ್ ಖಾತೆಗಳನ್ನು ನಿರ್ವಹಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಹಲವರು ಖಂಡಿತ ಆಗೋಲ್ಲ ಎಂದೇ ಹೇಳುತ್ತಾರೆ. ಆದರೆ ಅದು ಸುಳ್ಳು. ಒಂದೇ ಮೊಬೈಲ್‌ನಲ್ಲಿ ಪ್ರತ್ಯೇಕವಾಗಿ ಎಲ್ಲಾ ತಾಣಗಳ ಎರಡು ಖಾತೆಗಳನ್ನು ನಿರ್ವಹಿಸಬಹುದು.

ಡ್ಯುಯಲ್‌ ಸಿಮ್ ಫೋನ್‌ನಲ್ಲಿ 2 ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?

ಕೆಲವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎರಡು ಸಿಮ್‌ ಬಳಸುತ್ತಾರೆ. ಎರಡು ಸಿಮ್‌ಗಳಲ್ಲು ಹೆಚ್ಚಿನ ಕಾಂಟ್ಯಾಕ್ಟ್‌ಗಳು ಸಹ ಇರುತ್ತವೆ. ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿ ಲಾಗಿನ್‌ ಆಗುವಾಗ ಒಂದೇ ಮೊಬೈಲ್ ನಂಬರ್‌ ನೀಡಿ ಲಾಗಿನ್‌ ಆಗಬೇಕಾಗುತ್ತದೆ. ವಾಟ್ಸಾಪ್ ಬಳಸುವಾಗ ಹೆಸರು ಸಹಿತ ಪ್ರದರ್ಶನವಾಗುವ ಕಾಂಟ್ಯಾಕ್ಟ್‌ಗಳೆಂದರೆ, ವಾಟ್ಸಾಪ್‌ ಖಾತೆ ತೆರೆಯುವಾಗ ನೀಡಿದ್ದ ಮೊಬೈಲ್‌ ನಂಬರ್‌ನ ಸಿಮ್‌ನಲ್ಲಿರುವ ಕಾಂಟ್ಯಾಕ್ಟ್‌ಗಳು ಮಾತ್ರ. ಆದರೆ ಇನ್ನೊಂದು ಸಿಮ್‌ನಲ್ಲಿ ಸೇವ್‌ ಆಗಿರುವ ಯಾವುದೇ ಕಾಂಟ್ಯಾಕ್ಟ್‌ಗಳು ಹೆಸರು ಸಹಿತ ವಾಟ್ಸಾಪ್‌ನಲ್ಲಿ ಪ್ರದರ್ಶನವು ಆಗುವುದಿಲ್ಲ ಹಾಗೂ ವಾಟ್ಸಾಪ್ ಕಾಂಟ್ಯಾಕ್ಟ್‌ನಲ್ಲೂ ಸಿಗುವುದಿಲ್ಲ.

ಆದ್ದರಿಂದ ವಾಟ್ಸಾಪ್ ಪ್ರಿಯರಿಗೆ ಕಾಡುತ್ತಿರುವ ಪ್ರಶ್ನೆ ಎಂದರೆ " ಡ್ಯುಯಲ್‌ ಸಿಮ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಎರಡು ವಾಟ್ಸಾಪ್‌ ಖಾತೆಗಳನ್ನು ನಿರ್ವಹಿಸಬಹುದೇ?" ಎಂಬುದು. ಖಂಡಿತ ಸಾಧ್ಯ. ಅದು ಹೇಗೆ ಎಂದು ಕೆಳಗಿನ ಮಾಹಿತಿ ಓದಿರಿ.

ಡ್ಯುಯಲ್‌ ಸಿಮ್ ಫೋನ್‌ನಲ್ಲಿ 2 ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?

2 ನಿಮಿಷಗಳಲ್ಲಿ ಎರಡನೇ ವಾಟ್ಸಾಪ್‌ ಅನ್ನು ಇನ್‌ಸ್ಟಾಲ್ ಮಾಡಿ. ಮೊದಲಿಗೆ 'Parallel Space Multi Accounts' ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿರಿ. ನಂತರ ಇನ್‌ಸ್ಟಾಲ್‌ ಆದ ಆಪ್‌ ಓಪನ್‌ ಮಾಡಿ '+' ಐಕಾನ್‌ ಅನ್ನು ಟ್ಯಾಪ್‌ ಮಾಡಿ, ಲೀಸ್ಟ್‌ನಿಂದ ವಾಟ್ಸಾಪ್‌ ಅನ್ನು ಆಯ್ಕೆ ಮಾಡಿ.

ವಾಟ್ಸಾಪ್ ಆಡ್‌ ಆದ ನಂತರ ಮೊಬೈಲ್‌ ನಂಬರ್‌ ನೀಡಿ ಖಾತೆಯನ್ನು ಪರಿಶೀಲಿಸಿ. ಈ ರೀತಿಯಲ್ಲಿ ಒಂದೇ ಆಂಡ್ರಾಯ್ಡ್ ಫೋನ್‌ನಲ್ಲಿ ಎರಡು ವಾಟ್ಸಾಪ್‌ ಖಾತೆಗಳನ್ನು ಹೊಂದಬಹುದು. ಕೆಳಗಿನ ವೀಡಿಯೋ ನೋಡಿ ಸಹ ಎರಡು ವಾಟ್ಸಾಪ್‌ ಖಾತೆಗಳನ್ನು ಒಂದೇ ಮೊಬೈಲ್‌ನಲ್ಲಿ ಹೊಂದುವುದು ಹೇಗೆ ಎಂದು ತಿಳಿಯಿರಿ.

Best Mobiles in India

Read more about:
English summary
Can I run two WhatsApp accounts on a dual SIM Android device? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X