ಅಪ್ ಡೇಟೆಡ್ ಗೂಗಲ್ ಅಲ್ಲೋದಲ್ಲಿ ಸ್ಮಾರ್ಟ್ ಸ್ಟಿಕರ್ಸ್ ಮತ್ತು ಹೊಸ ಚಾಟ್ ಥೀಮ್ಸ್. (ಎಪಿಕೆ ಡೌನ್ ಲೋಡ್)

Written By:

ಗೂಗಲ್ ತನ್ನ ಅಲ್ಲೋ ಆ್ಯಪ್ ಗೆ ಹೊಸ ಅಪ್ ಡೇಟ್ ನೀಡಲಾರಂಭಿಸಿದೆ. ಸ್ಮಾರ್ಟ್ ಸ್ಟಿಕರ್ಸ್, ಹೊಸ ಥೀಮ್ಸ್ ಮತ್ತು ಇವತ್ತು ಬಿಡುಗಡೆಯಾಗುತ್ತಿರುವ ಹಾಲಿವುಡ್ ಚಿತ್ರ 'ಫಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈಂಡ್ ದೆಮ್'ನ ಎಕ್ಸ್ ಕ್ಲೂಸಿವ್ ಸ್ಟಿಕರ್ ಪ್ಯಾಕ್ ಈ ಹೊಸ ಅಪ್ ಡೇಟ್ ನಲ್ಲಿ ಲಭ್ಯವಿದೆ.

ಅಪ್ ಡೇಟೆಡ್ ಗೂಗಲ್ ಅಲ್ಲೋದಲ್ಲಿ ಸ್ಮಾರ್ಟ್ ಸ್ಟಿಕರ್ಸ್ ಮತ್ತು ಹೊಸ ಚಾಟ್ ಥೀಮ್ಸ್.

ಈ ಹೊಸ ಅಪ್ ಡೇಟ್ ನಲ್ಲಿರುವ ವಿಶೇಷತೆಗಳ ಬಗ್ಗೆ ತಿಳಿಸುವುದಾದರೆ, ಇದರಲ್ಲಿ ಚಾಟ್ ಪರದೆಯಲ್ಲಿ ಹೊಸ 'ಸ್ಮಾರ್ಟ್ ಸ್ಟಿಕರ್ಸ್'ಗಳು ಲಭ್ಯವಿದೆ. ಈ ಸ್ಮಾರ್ಟ್ ಸ್ಟಿಕರ್ ಗಳು ನೀವು ಏನನ್ನು ಟೈಪಿಸುತ್ತಿರುವಿರೋ ಆ ವಿಷಯಕ್ಕೆ ಸಂಬಂಧಿಸಿದ ಸ್ಟಿಕರ್ ಗಳನ್ನು ತೋರಿಸುತ್ತದೆ.

ಓದಿರಿ: ಈ ಆಪ್‌ನಿಂದ 2000 ನೋಟು ಸ್ಕ್ಯಾನ್‌ ಮಾಡಿ ಮೋದಿ ಭಾಷಣ ಕೇಳಿ, ಇಂಟರ್ನೆಟ್ ಬೇಕಿಲ್ಲ!

ಉದಾಹರಣೆಗೆ ನೀವು 'ಬರ್ಗರ್' ಎಂಬ ಪದವನ್ನು ಟೈಪಿಸಿ, ಸ್ಮಾರ್ಟ್ ಸ್ಟಿಕರ್ ಅನ್ನು ಕ್ಲಿಕ್ಕಿಸಿದರೆ ಬರ್ಗರ್ ಚಿತ್ರ ಮೂಡುತ್ತದೆ. ಇದು ಉತ್ತಮ ವಿಶೇಷತೆಯೇ ಹೌದು.

ಅಪ್ ಡೇಟೆಡ್ ಗೂಗಲ್ ಅಲ್ಲೋದಲ್ಲಿ ಸ್ಮಾರ್ಟ್ ಸ್ಟಿಕರ್ಸ್ ಮತ್ತು ಹೊಸ ಚಾಟ್ ಥೀಮ್ಸ್.

ಈ ಅಪ್ ಡೇಟ್ ನಲ್ಲಿ ಹಲವು ಹೊಸ ಥೀಮ್ ಗಳು ಕೂಡ ಇದೆ. ಅವೆಲ್ಲವೂ ನೋಡುವುದಕ್ಕೆ ಚೆನ್ನಾಗಿದೆ. ಜೊತೆಗೆ, ಈ ಅಪ್ ಡೇಟ್ ನಲ್ಲಿ ನಿಮ್ಮ ಸ್ನೇಹಿತರು ನಿಮಗೊಂದು ಸ್ಟಿಕರ್ ಕಳಿಸಿದಾಗ, ಆ ಸ್ಟಿಕರ್ ಪ್ಯಾಕ್ ನಿಮ್ಮಲ್ಲಿ ಇಲ್ಲದೇ ಹೋದರೆ ಚಾಟ್ ಪರದೆಯಲ್ಲೇ ಕ್ಲಿಕ್ಕಿಸುವುದರ ಮೂಲಕ ಸ್ಟಿಕರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಓದಿರಿ: 2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಜೊತೆಗೆ, ಇವತ್ತು ಬಿಡುಗಡೆಯಾಗುತ್ತಿರುವ ಹಾಲಿವುಡ್ ಚಿತ್ರ 'ಫಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈಂಡ್ ದೆಮ್'ನ ಎಕ್ಸ್ ಕ್ಲೂಸಿವ್ ಸ್ಟಿಕರ್ ಪ್ಯಾಕ್ ಕೂಡ ಈ ಹೊಸ ಅಪ್ ಡೇಟ್ ನಲ್ಲಿ ಲಭ್ಯವಿರಲಿದೆ.

ಓದಿರಿ: ವಾಟ್ಸಪ್ ಬಳಕೆದಾರರ ಸುರಕ್ಷತಾ ಮಟ್ಟ ಹೆಚ್ಚಿಸಲು ಏನು ಯೋಜನೆ ರೂಪಿಸಲಾಗುತ್ತಿದೆ

ಗೂಗಲ್ ತನ್ನ ಅಲ್ಲೋ ಆ್ಯಪ್ ಅನ್ನು ಕೆಲವು ತಿಂಗಳ ಹಿಂದೆ ಬಿಡುಗಡೆಗೊಳಿಸಿತು. ಈ ತಂತ್ರಾಂಶಕ್ಕೆ ಪ್ರಪಂಚಾದ್ಯಂತ ಉತ್ತಮ ಸ್ವಾಗತವೇ ದೊರಕಿತು. ಭಾರತದಲ್ಲೇ ಈ ಹೊಸ ಚ್ಯಾಟ್ ತಂತ್ರಾಂಶವನ್ನು ಉಪಯೋಗಿಸುತ್ತಿರುವವರ ಸಂಖೈ 160 ಮಿಲಿಯನ್ನಿಗಿಂತಲೂ ಅಧಿಕ. ಇದು ಸಾಧನೆಯೇ ಹೌದು.

ಗೂಗಲ್ ಅಲ್ಲೋ ನಿಧಾನಕ್ಕೆ ವಾಟ್ಸಪ್ ಗೆ ಸ್ಪರ್ಧೆ ನೀಡುತ್ತಿರುವುದು ಸುಳ್ಳಲ್ಲ.

ಸ್ಮಾರ್ಟ್ ಸ್ಟಿಕರ್ ಗಳು ಸದ್ಯ ಇಂಗ್ಲೀಷ್ ಮತ್ತು ಹಿಂಗ್ಲೀಷ್ ಭಾಷೆಗಳಲ್ಲಿ ಲಭ್ಯವಿದೆ, ಮುಂದಿನ ದಿನಗಳಲ್ಲಿ ಉಳಿದ ಭಾಷೆಗಳಲ್ಲೂ ಲಭ್ಯವಾಗಲಿದೆ. ಈ ಅಪ್ ಡೇಟ್ ಹಂತಹಂತವಾಗಿ ನಡೆಯುತ್ತಿದೆ ಮತ್ತು ನಿಮ್ಮ ಫೋನನ್ನು ತಲುಪಲು ಇನ್ನೊಂದಷ್ಟು ದಿನಗಳು ಬೇಕಾಗಬಹುದು.

ಈ ಅಪ್ ಡೇಟೆಡ್ ತಂತ್ರಾಂಶವನ್ನು ನೀವು apkmirror.com ಅಥವಾ apkpolice.comನಂತಹ ವೆಬ್ ಪುಟಗಳಿಂದ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು. ಸದ್ಯಕ್ಕಿದು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ, ಐಒಎಸ್ ಗೂಗಲ್ ಅಲ್ಲೋ ಆ್ಯಪ್ ಗೂ ಈ ಅಪ್ ಡೇಟ್ ದೊರೆಯಲಿದೆ ಎಂದು ಗೂಗಲ್ ತಿಳಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Google Allo has been updated with new features such as the 'Smart Stickers', new chat themes. Read on...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot