ವಾಟ್ಸಾಪ್ ಅಪ್ಲಿಕೇಶನ್ ತೆರೆಯದೆಯೇ ಚಾಟ್ ಮಾಡುವುದು ಹೇಗೆ?
ವಾಟ್ಸಾಪ್ ಕುರಿತಂತೆ ಹಲವಾರು ಸಲಹೆಗಳನ್ನು ನಾವು ಈ ಹಿಂದಿನ ಲೇಖನದಲ್ಲಿ ನಿಮಗೆ ನೀಡಿದ್ದೇವೆ. ಅದೇ ರೀತಿಯಲ್ಲಿ ಇಂದಿನ ಲೇಖನದಲ್ಲಿ ಕೂಡ ಅಪ್ಲಿಕೇಶನ್ ತೆರೆಯದೆಯೇ ಚಾಟ್ ಮಾಡುವುದು ಹೇಗೆ ಎಂಬುದರ ಕುರಿತಾದ ಸಲಹೆಯನ್ನು ನಾವು ನೀಡುತ್ತಿದ್ದೇವೆ. ನೀವು ಚಾಲನೆಯಲ್ಲಿದ್ದಾಗ ಮತ್ತು ನಿಮ್ಮ ಎರಡೂ ಕೈಗಳು ಏನಾದರೂ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಈ ಸಲಹೆಗಳನ್ನು ಪಾಲಿಸಿಕೊಂಡು ಅಪ್ಲಿಕೇಶನ್ ತೆರೆಯದೆಯೇ ಚಾಟ್ ಮಾಡಬಹುದಾಗಿದೆ.
ಓದಿರಿ: ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

ಇದಕ್ಕಾಗಿ ನೀವು ಕೆಲವೊಂದು ಹಂತಗಳನ್ನು ಪಾಲಿಸಿದರೆ ಆಯಿತು ಹೆಚ್ಚು ಸರಳವಾಗಿರುವ ಈ ಹಂತಗಳು ಖಂಡಿತವಾಗಿ ಕೂಡ ನಿಮಗೆ ಅಪ್ಲಿಕೇಶನ್ ತೆರೆಯದೆಯೇ ಚಾಟ್ ಮಾಡುವ ಸೌಲಭ್ಯವನ್ನು ಒದಗಿಸಿಕೊಡಲಿದೆ.

ಓದಿರಿ: ಬಿಎಸ್ಎನ್‌ಎಲ್ 'ಸ್ಟೂಡೆಂಟ್ ಪ್ಲಾನ್'ನಲ್ಲಿದೆ ವಿಶೇಷ ಆಫರ್
ಹಂತ:1
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ಗೂಗಲ್ ಅಪ್ಲಿಕೇಶನ್ ಅನ್ನು ತೆರೆಯೇಬೇಕೇ ಹೊರತು ಕ್ರೋಮ್ ಅನ್ನಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಹಂತ: 2
ನಂತರ ಓಕೆ ಗೂಗಲ್ ಎಂಬುದಾಗಿ ಹೇಳಿ, ವಾಟ್ಸಾಪ್ ಸಂದೇಶವನ್ನು ನಿಮ್ಮ ಸ್ನೇಹಿತರ ಹೆಸರಿಗೆ ಕಳುಹಿಸಿ.
ಹಂತ: 3
ನೀವು ನಮೂದಿಸಿರುವ ಅಪ್ಲಿಕೇಶನ್ ಅನ್ನು ಗೂಗಲ್ ಪತ್ತೆಹಚ್ಚುತ್ತದೆ. ನೀವು ಕಳುಹಿಸಬೇಕೆಂದಿರುವ ಸಂದೇಶವನ್ನು ಡಿಕ್ಟೇಟ್ ಮಾಡುವಂತೆ ಅದು ನಿಮ್ಮನ್ನು ಕೇಳಬಹುದು. ಸಂದೇಶವನ್ನು ಮಾತಾಡಿ. ನಿಮ್ಮ ಕೆಲಸ ಮುಗಿದಂತೆಯೇ. ನಿಮ್ಮ ಸ್ನೇಹಿತರಿಗೆ ಗೂಗಲ್ ರೆಕಾರ್ಡ್ ಮಾಡಿದ ಸಂದೇಶವನ್ನು ಕಳುಹಿಸುತ್ತದೆ.
ಹಂತ:4
ಒಂದೇ ಹಂತವನ್ನು ಅನುಸರಿಸುವುದರ ಮೂಲಕ ಇದನ್ನು ನಿಮಗೆ ಮಾಡಬಹುದಾಗಿದೆ. ಗೂಗಲ್ ಸ್ಯಾಮ್‌ಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸು: ಹೇಗಿದ್ದೀಯಾ? ಎಂಬ ಸಂದೇಶ ಇದಾಗಿದೆ.


Click it and Unblock the Notifications








