ವಾಟ್ಸಪ್ಪಿನಲ್ಲಿ ಯಾರಿಗೆಷ್ಟು ಮೆಸೇಜುಗಳನ್ನು ನೀವು ಕಳುಹಿಸಿದ್ದೀರಿ ಎಂದು ತಿಳಿಯುವುದು ಹೇಗೆ?

|

ವಾಟ್ಸಪ್ ನಲ್ಲಿ ನಿಮ್ಮ ಸಂಪರ್ಕದಲ್ಲಿರುವವರು ನಿಮಗೆ ಕಳುಹಿಸಿದ ಮೆಸೇಜುಗಳ ಸಂಖೈಯನ್ನು ಅಥವಾ ನೀವು ಅವರಿಗೆ ಕಳುಹಿಸಿದ ಸಂದೇಶಗಳ ಸಂಖೈಯನ್ನು ತಿಳಿಯಬಹುದೆಂದು ನಿಮಗೆ ಗೊತ್ತಿತ್ತೆ?

ವಾಟ್ಸಾಪ್‌ನಲ್ಲಿ ಯಾರಿಗೆಷ್ಟು ಮೆಸೇಜ್‌ ಸೆಂಡ್‌ ಮಾಡಿದ್ದೀರಿ ತಿಳಿಯುವುದು ಹೇಗೆ?

ವಾಟ್ಸಪ್ ನಲ್ಲಿ ಇರುವ ಹೊಸ 'ಸ್ಟೋರೇಜ್ ಯೂಸೇಜ್' ವಿಶೇಷತೆಯು ಸದ್ಯಕ್ಕೆ ಐ.ಒ.ಎಸ್ ತಂತ್ರಾಂಶಕ್ಕಷ್ಟೇ ಬಂದಿದೆ. ಇದರಿಂದಾಗಿ ನೀವು ಒಬ್ಬ ವ್ಯಕ್ತಿಗೆ ಅಥವಾ ಒಂದು ಗುಂಪಿಗೆ ಎಷ್ಟು ಮೆಸೇಜು ಕಳುಹಿಸಿದ್ದೀರಿ, ಎಷ್ಟು ಪಡೆದಿದ್ದೀರಿ ಎಂದು ತಿಳಿಯಬಹುದು. ಅದರಲ್ಲಿ ಸಂದೇಶಗಳೆಷ್ಟು, ವೀಡಿಯೋ, ಚಿತ್ರ, ಆಡಿಯೋ, ಕಡತಗಳೆಷ್ಟು ಎನ್ನುವುದನ್ನೂ ತಿಳಿಯಬಹುದು.

ಓದಿರಿ: ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಜೊತೆಗೆ, ಈ ವಿಶೇಷತೆಯಿಂದಾಗಿ ವಾಟ್ಸಪ್ ಬಳಕೆದಾರರು ಮೆಸೇಜುಗಳ ಸಂಖೈ ಗಮನಿಸಿ ತಮ್ಮ ನೆಚ್ಚಿನವರ್ಯಾರು ಎಂದು ತಿಳಿದುಬಿಡಬಹುದು.

ಓದಿರಿ: ವಾರದ ಸುದ್ದಿ: ಕಳೆದ ವಾರ ಬಿಡುಗಡೆಗೊಂಡ ಉತ್ತಮ ಸ್ಮಾರ್ಟ್ ಫೋನುಗಳು ಮತ್ತು ಇತರೆ ಗ್ಯಾಜೆಟ್ಟುಗಳು.

ಬೇಸರದ ಸುದ್ದಿಯೆಂದರೆ ಈ ಸೌಲಭ್ಯ ಆ್ಯಂಡ್ರಾಯ್ಡ್ ತಂತ್ರಾಂಶದಲ್ಲಿ ಇಲ್ಲ. ಹಾಗಿದ್ದರೂ, ಆ್ಯಂಡ್ರಾಯ್ಡ್ ಬಳಕೆದಾರರಿಗೂ ಒಂದು ಆಯ್ಕೆಯಿದೆ. ಇದು ಸ್ವಲ್ಪ ಕಷ್ಟವೆನ್ನಿಸಿದರೂ ಮೆಸೇಜುಗಳ ಸಂಖೈಯನ್ನು ನೋಡಬಹುದು.

ಈ ಲೇಖನದಲ್ಲಿ ಐ.ಒ.ಎಸ್ ಮತ್ತು ಆ್ಯಂಡ್ರಾಯ್ಡ್ ನಲ್ಲಿರುವ ವಾಟ್ಸಪ್ ನಲ್ಲಿ ಮೆಸೇಜುಗಳ ಸಂಖೈಯನ್ನು ತಿಳಿಯುವುದು ಹೇಗೆ ಎಂದು ವಿವರಿಸಿದ್ದೇವೆ. ಒಮ್ಮೆ ಓದಿ ನೋಡಿ.

ವಾಟ್ಸಾಪ್‌ನಲ್ಲಿ ಯಾರಿಗೆಷ್ಟು ಮೆಸೇಜ್‌ ಸೆಂಡ್‌ ಮಾಡಿದ್ದೀರಿ ತಿಳಿಯುವುದು ಹೇಗೆ?

ಐ.ಒ.ಎಸ್ ನಲ್ಲಿ ಒಟ್ಟು ಮೆಸೇಜುಗಳ ಸಂಖೈಯನ್ನು ನೋಡುವುದು ಹೇಗೆ?

  • ವಾಟ್ಸಪ್ ಅನ್ನು ತೆರೆಯಿರಿ, ಸೆಟ್ಟಿಂಗ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಅಕೌಂಟ್ಸ್ ಮೇಲೆ ಕ್ಲಿಕ್ ಮಾಡಿ.
  • ಸ್ಟೋರೇಜ್ ಯೂಸೇಜ್ ಮೇಲೆ ಕ್ಲಿಕ್ ಮಾಡಿ.
  • ಡೇಟಾದ ಗಾತ್ರ ಮತ್ತು ಸಂವಹನದ ಇತಿಹಾಸವನ್ನವಲಂಬಿಸಿ ಇದಕ್ಕೆ ಒಂದಷ್ಟು ಸಮಯ ತೆಗೆದುಕೊಳ್ಳಬಹುದು.
ವಾಟ್ಸಾಪ್‌ನಲ್ಲಿ ಯಾರಿಗೆಷ್ಟು ಮೆಸೇಜ್‌ ಸೆಂಡ್‌ ಮಾಡಿದ್ದೀರಿ ತಿಳಿಯುವುದು ಹೇಗೆ?
  • ಒಟ್ಟು ವಾಟ್ಸಪ್ ಮೆಸೇಜುಗಳನ್ನು ಪರದೆಯ ಮೇಲ್ಭಾಗದಲ್ಲಿ ನೋಡಬಹುದು ಮತ್ತು ಪ್ರತಿ ಚಾಟ್ ನಲ್ಲೂ ಇರುವ ಮೆಸೇಜುಗಳ ಸಂಖೈಯನ್ನು ಆ ವ್ಯಕ್ತಿಯ ನಂಬರಿನ ಪಕ್ಕದಲ್ಲಿ ಕಾಣಬಹುದು.
  • - ಯಾವ ವ್ಯಕ್ತಿಯ ನಂಬರ್ ಅಥವಾ ಹೆಸರಿನ ಮೇಲೆ ಕ್ಲಿಕ್ಕಿಸಿ ವಿವರಗಳನ್ನು ತಿಳಿಯಬಹುದು. ಎಷ್ಟು ಸಂದೇಶಗಳು, ವೀಡಿಯೋ, ಕಾಂಟಾಕ್ಟ್ಸ್, ಆಡಿಯೋ, ಲೊಕೇಷನ್, ಕಡತ ಮತ್ತು ಚಿತ್ರಗಳು ಹಂಚಿಕೆಯಾಗಿವೆ ಎಂದು ತಿಳಿಯಬಹುದು, ಅದು ಎಷ್ಟು ಸಂಗ್ರಹವನ್ನು ಆವರಿಸಿಕೊಂಡಿದೆ ಎಂದು ಅರಿಯಬಹುದು.
ವಾಟ್ಸಾಪ್‌ನಲ್ಲಿ ಯಾರಿಗೆಷ್ಟು ಮೆಸೇಜ್‌ ಸೆಂಡ್‌ ಮಾಡಿದ್ದೀರಿ ತಿಳಿಯುವುದು ಹೇಗೆ?
  • - ಜೊತೆಗೆ, ನಿಮಗೆ ಕೇವಲ ಸ್ಟೋರೇಜ್ ಯೂಸೇಜ್ ಅನ್ನು ನೋಡಬೇಕೆಂದಿದ್ದರೆ, ಕೆಳಭಾಗದಲ್ಲಿರುವ ಟ್ಯಾಬ್ ಮೇಲೆ ಕ್ಲಿಕ್ಕಿಸಿದರೆ ಸಾಕು. ವಾಟ್ಸಪ್ ತಂತ್ರಾಂಶ ಎಷ್ಟು ಮೆಮೊರಿಯನ್ನು ಉಪಯೋಗಿಸುತ್ತಿದೆ ಎಂದು ತಿಳಿದುಬಿಡುತ್ತದೆ.
ವಾಟ್ಸಾಪ್‌ನಲ್ಲಿ ಯಾರಿಗೆಷ್ಟು ಮೆಸೇಜ್‌ ಸೆಂಡ್‌ ಮಾಡಿದ್ದೀರಿ ತಿಳಿಯುವುದು ಹೇಗೆ?

ಆ್ಯಂಡ್ರಾಯ್ಡ್ ನಲ್ಲಿ ಒಟ್ಟು ಮೆಸೇಜುಗಳ ಸಂಖೈಯನ್ನು ತಿಳಿಯುವುದು ಹೇಗೆ?

1. ವಾಟ್ಸಪ್ ಅನ್ನು ತೆರೆಯಿರಿ. ಯಾವ ವ್ಯಕ್ತಿಯೊಡಗಿನ ಸಂದೇಶಗಳ ಸಂಖೈಯನ್ನು ತಿಳಿಯಬೇಕು ಆ ವ್ಯಕ್ತಿಯ ಹೆಸರನ್ನು ಆಯ್ಕೆ ಮಾಡಿ.

2.ಆಪ್ಶನ್ಸ್ ಗೆ ಹೋಗಿ ಮೋರ್ > ಇಮೇಲ್ ಚಾಟ್ ಅನ್ನು ಕ್ಲಿಕ್ಕಿಸಿ.

3. ಅಟ್ಯಾಚ್ ವಿತೌಟ್ ಮೀಡಿಯಾ ಎನ್ನುವುದರ ಮೇಲೆ ಕ್ಲಿಕ್ಕಿಸಿ.

4. ನಿಮ್ಮ ಇಮೇಲ್ ಐಡಿಯನ್ನು ನಮೂದಿಸಿ (ಈ ಇಮೇಲ್ ವಿಳಾಸಕ್ಕೆ ನಿಮ್ಮಿಡೀ ವಾಟ್ಸಪ್ ಚ್ಯಾಟ್ ಟೆಕ್ಸ್ಟ್ ರೂಪದಲ್ಲಿ ಬರುತ್ತದೆ.

5. ನಿಮ್ಮ ಇಮೇಲ್ ಖಾತೆಗೆ ಹೋಗಿ, ಸಂದೇಶಗಳನ್ನು ಡೌನ್ ಲೋಡ್ ಮಾಡಿ.

6. ಎಲ್ಲವನ್ನೂ ಕಾಪಿ ಮಾಡಿಕೊಂಡು ನೋಟ್ ಪ್ಯಾಡ್ ++ನಲ್ಲಿ ಪೇಸ್ಟ್ ಮಾಡಿ (ಇದು ಉಚಿತ ತಂತ್ರಾಂಶ)

  • ಈಗ 'ಎ.ಎಮ್' ಪದವನ್ನು ಮತ್ತು 'ಪಿ.ಎಮ್' ಪದವನ್ನು ಹುಡುಕಿ, ಅವು ಎಷ್ಟು ಸಲ ಇದೆಯೆಂದು ತೋರಿಸುತ್ತದೆ, ಅದೆರಡನ್ನೂ ಕೂಡಿದರೆ ಸಂದೇಶಗಳ ಸಂಖೈ ಸಿಗುತ್ತದೆ.
  • ಒಂದು ತಿಂಗಳ ಸಂದೇಶಗಳ ಸಂಖೈಯನ್ನು ತಿಳಿಯಬೇಕೆಂದರೆ, /11/2016 ಎಂದು ಟೈಪಿಸಿ ಹುಡುಕಿ. ಒಂದು ವರ್ಷದ ಲೆಕ್ಕ ಸಿಗಬೇಕೆಂದರೆ /2016 ಎಂದು ಹುಡುಕಿ.

ಗಮನಿಸಿ: ಕೇವಲ 2016 ಎಂದು ಟೈಪಿಸಿ ಹುಡುಕಬೇಡಿ, ಯಾಕೆಂದರೆ 2016 ಅಷ್ಟೇ ಇರುವ ಅನೇಕ ಮಾಹಿತಿ ಆ ಕಡತದಲ್ಲಿರುತ್ತದೆ. ಹಾಗಾಗಿ /2016 ಎಂದು ಹಾಕಿಯೇ ಹುಡುಕಬೇಕು.

7.ಮೇಸೇಜು ಕಳುಹಿಸಿದವರ ಹೆಸರನ್ನು ಹಾಕಿ ಹುಡುಕಿದರೆ ಗುಂಪಿನಲ್ಲಿ ಒಬ್ಬ ವ್ಯಕ್ತಿ ಕಳುಹಿಸಿರುವ ಸಂದೇಶಗಳ ಸಂಖೈಯನ್ನು ತಿಳಿದುಕೊಳ್ಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Using WhatsApp frequently? You can now check how many messages you have exchanged with a particular contact or group.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X