Subscribe to Gizbot

ಮೆಮೊರಿ ಕಾರ್ಡ್ ನಿಂದ ತಪ್ಪಿ ಅಳಿಸಿ ಹೋದ ಫೋಟೊಸ್/ವೀಡಿಯೋಸ್/ಫೈಲ್ಸ್ ಹೇಗೆ ಪುನಃ ಪಡೆಯುವುದು

ತಂತ್ರಜ್ಞಾನದಲ್ಲಿ ಆಗುತ್ತಿರುವ ಬಹು ಬೇಗದ ಬೆಳವಣಿಗೆಯಲ್ಲಿ, ಸ್ಟೋರೆಜ್ ಉಪಕರಣಗಳು ಗಾತ್ರದಲ್ಲಿ ಚಿಕ್ಕದಾಗುತ್ತಿವೆ ಮತ್ತು ಮೆಮೊರಿಯಲ್ಲಿ ದೊಡ್ಡದು. ಸ್ಮಾರ್ಟ್‍ಫೋನಿನಲ್ಲಿ ಡಾಟಾವನ್ನು ಇಟ್ಟುಕೊಳ್ಳಬೇಕೆಂದರೆ, ಮೈಕ್ರೊಎಸ್‍ಡಿ ಕಾಡ್ರ್ಸ್ ಗಳು ತುಂಬಾ ಅನುಕೂಲಕರ ಸ್ಟೋರೆಜ್ ವಿಧಾನವಾಗಿದೆ.

ಮೆಮೊರಿ ಕಾರ್ಡ್ ನಿಂದ ತಪ್ಪಿ ಅಳಿಸಿ ಹೋದ ಫೋಟೊಸ್/ವೀಡಿಯೋಸ್/ಫೈಲ್ಸ್


ಹಾಗೆಯೇ, ಮೆಮೊರಿ ಕಾರ್ಡ್ ಗಳು ಕೆಲ ಕಾರಣಕ್ಕೆ ಹಾಳಾಗಲು ಸಾಕಷ್ಟು ಅವಕಾಶಗಳಿರುತ್ತವೆ. ಈ ಮೆಮೊರಿ ಕಾಡ್ರ್ಸ್ ಕರಪ್ಟ್ ಅಥವಾ ಹಾಳಾದರೆ, ಹೆಚ್ಚಾಗಿ ಅದರೊಳಗಿನ ಎಲ್ಲಾ ಚಿತ್ರಗಳು,ವೀಡಿಯೊಗಳು ಮತ್ತು ಇನ್ನಿತರ ಫೈಲುಗಳು ಕಾಣೆಯಾಗುತ್ತವೆ.

ಓದಿರಿ: ಆಂಡ್ರಾಯ್ಡ್ ಫೋನ್‌ಗೆ ಜಿಯೋ ಸಿಮ್ ಕಾರ್ಡ್ ಹೀಗೆ ಪಡೆದುಕೊಳ್ಳಿ

ಮೈಕ್ರೊಎಸ್‍ಡಿ ಕಾರ್ಡ್‍ಗಳನ್ನು ನಿಷ್ಕಾಳಜಿ ಮಾಡಿದರೆ ಅದು ನಿಮಗೆ ಸದಾ ಕಾಲಕ್ಕೆ ನಿಮ್ಮ ಅಮೂಲ್ಯವಾದದನ್ನು ಶಾಶ್ವತವಾಗಿ ಅಳಿಸಿ ಹೋಗುವಂತೆ ಮಾಡಬಹುದು ಮತ್ತು ಎಸ್‍ಡಿ ಕಾರ್ಡ್ ರಿಕವರಿ ಮಾಡುವುದು ತುಂಬಾ ಕಷ್ಟವಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ನಾವು ಕೆಲವೊಂದು ಪರಿಹಾರಗಳೊಂದಿಗೆ ಬಂದಿದ್ದೇವೆ ನಿಮ್ಮ ಮೆಮೊರಿ ಕಾರ್ಡ್‍ನಲ್ಲಿನ ಡಾಟಾ ರಿಕವರ್ ಮಾಡಲು.

1. ಎಲ್ಲಕ್ಕಿಂತ ಮೊದಲು ಬೇರೆ ಡಿವೈಜ್ ನಲ್ಲಿ ಹಾಕಿ ನೋಡಿ

ಕರಪ್ಟ್ ಆದ ಎಸ್‍ಡಿ ಕಾರ್ಡ್ ಅನ್ನು ಬೇರೆ ಡಿವೈಜ್ ನಲ್ಲಿ ಹಾಕಿ ಪ್ರಯತ್ನಿಸಿ. ಅದು ನಿಜವಾಗಲೂ ಕೆಟ್ಟಿದ್ದರೆ ಡಿವೈಜ್ ನಲ್ಲಿ ಇನ್‍ಕೊಂಪಾಟಿಬಿಲಿಟಿ ಮೆಸೆಜ್ ತೋರಿಸುತ್ತದೆ.

ಮೆಮೊರಿ ಕಾರ್ಡ್ ನಿಂದ ತಪ್ಪಿ ಅಳಿಸಿ ಹೋದ ಫೋಟೊಸ್/ವೀಡಿಯೋಸ್/ಫೈಲ್ಸ್

2. ಡಿಸ್ಕ್ ಸ್ಕಾನ್ ಪರೀಕ್ಷಿಸಿ

ಮೊದಲನೆ ಹೆಜ್ಜೆ ಕೆಲಸ ಮಾಡದಿದ್ದಲ್ಲಿ ಎರಡನೇಯ ದಾಗಿ ಇದನ್ನು ಪ್ರಯತ್ನಿಸಿ. ಕಾರ್ಡ್ ರೀಡರ್ ನಲ್ಲಿ ಮೆಮೊರಿ ಕಾರ್ಡ್ ಹಾಕಿ. ಅದು ಡಿಟೆಕ್ಟ್ ಆದ ಮೇಲೆ ಸ್ಟಾರ್ಟ್ ಗೆ ಹೋಗಿ ಮತ್ತು ಸರ್ಚ್ ಬೊಕ್ಸ್ ನಲ್ಲಿ ಟೈಪ್ ಮಾಡಿ 'ಸಿಎಮ್‍ಡಿ’. ಕಮಾಂಡ್ ವಿಂಡೊ ಓಪನ್ ಆದಾಗ ಟೈಪ್ ಮಾಡಿ 'ಸಿಎಚ್‍ಕೆಡಿಎಸ್‍ಕೆ’ ಅದ ನಂತರ ಎಸ್‍ಡಿ ಕಾರ್ಡ್ ಸಂಭಂದಿತ ಡ್ರೈವ್ ಲೆಟರ್ ಆ ನಂತರ ಕೊಲನ್ ಮತ್ತು /ಎಫ್.

ಓದಿರಿ: ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು

ನೀವು ಎಂಟರ್ ಒತ್ತಿದ ಮೇಲೆ ಅದು ಸಾಧ್ಯವಾಗುವ ಎಲ್ಲಾ ಪರಿಹಾರಗಳನ್ನು ನೀಡುತ್ತದೆ ಮತ್ತು ಅದನ್ನು ಪರಿಹರಿಸಲು ನೋಡುತ್ತದೆ.

3. ಹೊಸ ಡ್ರೈವ್ ಅಸೈನ್ ಮಾಡಿ

ಮೆಮೊರಿ ಕಾರ್ಡ್ ನಿಂದ ತಪ್ಪಿ ಅಳಿಸಿ ಹೋದ ಫೋಟೊಸ್/ವೀಡಿಯೋಸ್/ಫೈಲ್ಸ್

ಸಿಸ್ಟಮ್ ನ ಕಾರ್ಡ್ ರೀಡರ್ ಗೆ ಎಸ್‍ಡಿ ಕಾರ್ಡ್ ಕನೆಕ್ಟ್ ಆಗದಿದ್ದರೆ. ಕೆಲವೊಮ್ಮೆ , ನಿಮ್ಮ ಸಿಸ್ಟಮ್ ಹೊಸ ಡ್ರೈವ್ ಅನ್ನು ಅಸೈನ್ ಮಾಡದೆ “ ಪ್ಲೀಸ್ ಇನ್ಸರ್ಟ್ ದ ಡಿಸ್ಕ್ ಇನ್‍ಟು ಡ್ರೈವ್ ಇ” ಎನ್ನುವ ಸಂದೇಶ ತೋರಿಸುತ್ತದೆ. ಇದನ್ನು ಪರಿಹರಿಸಲು ಹೊಸ ಡ್ರೈವ್ ಲೆಟರ್ ಅನ್ನು ಅಸೈನ್ ಮಾಡಿ ಒಪರೇಟಿಂಗ್ ಸಿಸ್ಟಮ್ ಸೆಟ್ಟಿಂಗ್ಸ್ ಮೂಲಕ. ಸ್ಯಾನ್ ಡಿಸ್ಕ್ ನ ಇನ್‍ಬಿಲ್ಟ್ ಸೊಲ್ಯುಷನ್ ಉಪಯೋಗಿಸಿ. ಇನ್ನೊಂದು ದಾರಿಯೆಂದರೆ ಡ್ರೈವ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಪ್ರೊಪರ್ಟಿಸ್ ಗೆ ಹೋಗಿ. ಅಲ್ಲಿ ನೀವು ಫುಲ್ ಫ್ರೀ ಸ್ಪೇಸ್ ಕಂಡರೆ ಆಗ ಎಲ್ಲಾ ಫೈಲ್ಸ್ ಇಲ್ಲವೆ ಡೈರೆಕ್ಟರಿ ಅಳಿಸಿ ಹೋಗಿದೆ ಎಂದರ್ಥ. ಈ ವಿಷಯದಲ್ಲಿ ಸ್ಯಾನ್ ಡಿಸ್ಕ್ ನ ಇನ್‍ಬಿಲ್ಟ್ ಸೊಲ್ಯುಷನ್ ಉಪಯೋಗಿಸಿ ಅಳಿಸಿ ಹೋದ ಫೈಲುಗಳನ್ನು ರಿಸ್ಟೋರ್ ಮಾಡಬಹುದು.

ಓದಿರಿ: ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್‌ ಪತ್ತೆ ಹೇಗೆ?

ಒಂದು ವೇಳೆ ನಿಮಗೆ ಎಲ್ಲಾ ಫೈಲು ಓದಲು ಸಾಧ್ಯವಿದ್ದಲ್ಲಿ ಆದರೆ ಸೇವ್ ಮಾಡಲು ಆಗುತ್ತಿಲ್ಲಾ ಎಂದಾದಲ್ಲಿ ನಿಮ್ಮ ಕಾರ್ಡ್ ಪ್ರೊಟೆಕ್ಟೆಡ್ ಮೊಡ್ ನಲ್ಲಿ ಇರಬಹುದು. ನೀವು ಮಾಡಬೇಕಾಗಿರುವುದಿಷ್ಟೆ ಕಾರ್ಡ್ ನಲ್ಲಿನ ಫೈಲ್ಸ್ ಗಳಲ್ಲಿ ಬದಲಾವಣೆ ಆಥವಾ ಸೇವೆ ಮಾಡಲು ಅದನ್ನು ಅನ್‍ಲೊಕ್ ಮಾಡಿ.

ಇದು ಕೆಲಸ ಮಾಡದಿದ್ದಲ್ಲಿ , ನೀವು ಡಿಸ್ಕ್ ಡೈಗ್ನೊಸ್ಟಿಕ್ ಟೂಲ್ ಕಾರ್ಡ್ ಗಾಗಿ ಕೂಡ ಉಪಯೋಗಿಸಬಹುದು. ಇನ್ನೊಂದು ಕಡೆ ಎಸ್‍ಡಿ ಕಾರ್ಡ್ ನಲ್ಲಿ ಹೆಚ್ಚಾಗಿ ಚಿತ್ರಗಳು ಮತ್ತು ಇತರ ಮೀಡಿಯಾ ಫೈಲು ಇರುವುದರಿಂದ ನೀವು ರಿಕವರಿ ಸೊಫ್ಟ್‍ವೇರ್ ಉಪಯೋಗಿಸಬಹುದು.

English summary
With the rapid growth in technology, the storage equipment is getting smaller in terms of size and bigger on memory.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot