ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!

|

ನೀವು ಫೋನ್‌ ಬಳಕೆ ಮಾಡುತ್ತಿದ್ದೀರಾ ಎಂದಾದರೆ ಟೆಲಿಮಾರ್ಕೆಟಿಂಗ್ ಕರೆಗಳು ಹಾಗೂ ಎಸ್‌ಎಮ್‌ಎಸ್‌ಗಳ ಕಾಟ ಮಾತ್ರ ತಪ್ಪುವುದಿಲ್ಲ. ಮೊಬೈಲ್‌ ಇರುವ ಯಾರೇ ಆದರೂ ಇದರಿಂದ ಬೇಸರ ಅನುಭವಿಸುವುದು ಸಾಮಾನ್ಯ. ಈ ಕರೆಗಳು ಬರುವುದು ಒಂದು ಕಡೆಯಾದರೆ ಕರೆ ಸ್ವೀಕರಿಸಿ ಮಾತನಾಡಿದರೆ ಬೆನ್ನಿಗೆ ಬಿದ್ದ ಬೇತಾಳನಂತೆ ಅವರು ಪದೇ ಪದೇ ಕರೆ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಫುಲ್‌ ಸ್ಟಾಪ್‌ ಇಡುವುದು ಹೇಗೆ ಗೊತ್ತಾ!?

ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ

ಹೌದು, ದಿನನಿತ್ಯ ರೀತಿಯ ಕರೆಗಳಿಂದ ಬೇಸರ ಅನುಭವಿಸಿದ್ದರೆ ಇಂದೇ ಅದರಿಂದ ಮುಕ್ತರಾಗಬಹುದು. ಯಾಕೆಂದರೆ ಈ ಕರೆಗಳಿಂದ ಮುಕ್ತಿ ಪಡೆಯುವುದು ಹೇಗೆ?, ಯಾವೆಲ್ಲಾ ಸಿಮ್‌ ಬಳಕೆದಾರರು ಹೇಗೆ ಈ ಟೆಲಿಮಾರ್ಕೆಟಿಂಗ್‌ ಕರೆಗಳನ್ನು ನಿರ್ಬಂಧಿಸಬಹುದು. ಆಪ್‌ಗಳಲ್ಲಿ DND ಸೇವೆ ಪಡೆಯುವುದು ಹೇಗೆ ಎಂಬ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಸಾಮಾನ್ಯವಾಗಿ ಟೆಲಿಮಾರ್ಕೆಟಿಂಗ್ ಕರೆಗಳು ಮತ್ತು ಮೆಸೆಜ್‌ಗಳನ್ನು ನಿರ್ಬಂಧಿಸಲು ತುಂಬಾ ಸುಲಭ ಮಾರ್ಗ ಎಂದರೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1909 ಗೆ ಮೆಸೆಜ್‌ ಮಾಡಬಹುದು. ಇದರ ಹೊರತಾಗಿಯೂ ನೀವು ಅನಗತ್ಯ ಟೆಲಿಮಾರ್ಕೆಟಿಂಗ್ ಮತ್ತು ಪ್ರಚಾರದ ಕರೆಗಳು ಹಾಗೂ ಮೆಸೆಜ್‌ಗಳನ್ನು ನಿರ್ಬಂಧಿಸಲು ನಿಮ್ಮ ನೆಟ್‌ವರ್ಕ್ ಆಪರೇಟರ್‌ನ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಅಥವಾ ಸಂಬಂಧಿಸಿದ ಆಪ್‌ ಬಳಕೆ ಮಾಡಿಕೊಂಡು ಈ ಕರೆಗಳಿಗೆ ಮುಕ್ತಿ ತೋರಬಹುದಾಗಿದೆ.

ವಿಧಾನ 1
ನಿಮ್ಮ ಸಂಖ್ಯೆಯಲ್ಲಿ DND ಅನ್ನು ಸಕ್ರಿಯಗೊಳಿಸುವ ಮೂಲಕ ಈ ರೀತಿಯ ಕರೆಗಳನ್ನು ನಿರ್ಬಂಧಿಸಬಹುದಾಗಿದೆ. ಇದರಿಂದ ಎಲ್ಲಾ ಮಾರ್ಕೆಟಿಂಗ್, ಪ್ರಚಾರ ಅಥವಾ ಅಪ್ರಸ್ತುತ ಸ್ಪ್ಯಾಮ್ ಮೆಸೆಜ್‌ಗಳು ಮತ್ತು ಕರೆಗಳು ನಿಮ್ಮ ಫೋನ್‌ಗೆ ಬರುವುದಿಲ್ಲ. ಇದಕ್ಕಾಗಿ ಈ ಮಾರ್ಗ ಅನುಸರಿಸಿ.

ಮೊದಲು ನಿಮ್ಮ ಫೋನ್‌ನಲ್ಲಿ ಡೀಫಾಲ್ಟ್ ಮೆಸೇಜಿಂಗ್ ಆಪ್‌ ಓಪನ್‌ ಮಾಡಿ. ನಂತರ ಹೊಸ ಸಂದೇಶವನ್ನು ರಚಿಸಿ ಅಲ್ಲಿ FULLY BLOCK ಎಂದು ಬರೆಯಿರಿ. ನಂತರ ಆ ಮೆಸೆಜ್‌ ಅನ್ನು 1909 ಗೆ ಕಳುಹಿಸಿ.

ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ

ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ನಿಮಗೆ ಈಗಾಗಲೇ ಬರುತ್ತಿದ್ದ ಅಥವಾ ಮುಂದೆ ಬರಬಹುದಾದ ಎಲ್ಲಾ ಟೆಲಿಮಾರ್ಕೆಟಿಂಗ್ ಸ್ಪ್ಯಾಮ್ ಕರೆಗಳು ಮತ್ತು ಮೆಸೆಜ್‌ಗಳು ನಿಮ್ಮ ಫೋನ್‌ ಬಳಿ ಸುಳಿಯುವುದಿಲ್ಲ. ಅದರಲ್ಲೂ ಮೆಸೆಜ್‌ ಮಾಡುವಾಗ ಕೆಲವು ಕೋಡ್‌ ಅನ್ನು ಎಂಟ್ರಿ ಮಾಡಿದರೆ ಆಯಾ ವಿಭಾಗದ ಕರೆ ಅಥವಾ ಮೆಸೆಜ್‌ಗಳನ್ನು ನಿರ್ಧಿಷ್ಟವಾಗಿ ನಿರ್ಬಂಧಿಸಬಹುದಾಗಿದೆ.

  • -ಎಲ್ಲಾ ವರ್ಗಗಳಿಗೆ FULLY BLOCK ಎಂದು ಟೈಪ್ ಮಾಡಿ.
  • -ಬ್ಯಾಂಕಿಂಗ್/ವಿಮೆ/ಕ್ರೆಡಿಟ್ ಕಾರ್ಡ್‌ಗಳು/ಹಣಕಾಸು ಉತ್ಪನ್ನಗಳಿಗೆ BLOCK 1 ಎಂದು ಟೈಪ್‌ ಮಾಡಿ.
  • -ರಿಯಲ್ ಎಸ್ಟೇಟ್‌ಗಾಗಿ BLOCK 2 ಎಂದು ಟೈಪ್ ಮಾಡಿ.
  • -ಶಿಕ್ಷಣ-ಸಂಬಂಧಿತ ಸ್ಪ್ಯಾಮ್‌ಗಳಿಗಾಗಿ BLOCK 3 ಎಂದು ಟೈಪ್‌ ಮಾಡಿ.
  • -ಆರೋಗ್ಯ ಸಂಬಂಧಿ ಕರೆಗಳಿಗಾಗಿ BLOCK 4 ಎಂದು ಟೈಪ್‌ ಮಾಡಿ.
  • -ಗ್ರಾಹಕ ಸರಕುಗಳು/ಆಟೋಮೊಬೈಲ್‌ಗಳು/ಮನರಂಜನೆ/ಐಟಿಗಾಗಿ BLOCK 5 ಎಂದು ಟೈಪ್‌ ಮಾಡಿ.
  • -ಸಂವಹನ/ಪ್ರಸಾರಕ್ಕಾಗಿ BLOCK 6 ಎಂದು ಟೈಪ್‌ ಮಾಡಿ.
  • -ಪ್ರವಾಸೋದ್ಯಮ ಕರೆಗಳಿಗಾಗಿ BLOCK 7 ಎಂದು ಟೈಪ್‌ ಮಾಡಿ.
  • -ಆಹಾರ ಮತ್ತು ಪಾನೀಯ ವಿಷಯದ ಕರೆಗಳಿಗಾಗಿ BLOCK 8 ಎಂದು ಟೈಪ್‌ ಮಾಡಿ.
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ

ವಿಧಾನ 2
ಇದಿಷ್ಟೇ ಅಲ್ಲದೆ ಇನ್ನೂ ಒಂದು ವಿಧಾನದ ಮೂಲಕ ನೀವು ಈ ರೀತಿಯ ಕರೆಗಳನ್ನು ಬ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ಜಿಯೋ, ಏರ್‌ಟೆಲ್‌ ಹಾಗೂ ವಿ ಆಪ್‌ ಬಳಕೆ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಯಾವ ಸಿಮ್‌ ಬಳಕೆ ಮಾಡುತ್ತಿದ್ದಿರೋ ಆಯಾ ಸಿಮ್‌ನ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡು ನೋಂದಣಿ ಆಗಿರಬೇಕಾಗುತ್ತದೆ.

ಜಿಯೋ DND
ಜಿಯೋ ಸಿಮ್ ಬಳಕೆದಾರರು ಜಿಯೋ ಆಪ್‌ನಲ್ಲಿ DND ನೋಂದಾಯಿಸಲು ಮೊದಲು ಮೈ ಜಿಯೋ ಆಪ್‌ಗೆ ಸೈನ್ ಇನ್ ಮಾಡಬೇಕಿದೆ. ನಂತರ ಅಲ್ಲಿ ಮೆನು ಮೇಲೆ ಟ್ಯಾಪ್ ಮಾಡಿದರೆ 'ಪ್ರೊಫೈಲ್ ಮತ್ತು ಇತರ ಸೆಟ್ಟಿಂಗ್‌ಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿದರೆ 'ಡೋಂಟ್ ಡಿಸ್ಟರ್ಬ್' ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ನಂತರ 'ಸೆಟ್ ಪ್ರಿಫರೆನ್ಸ್' ಮೇಲೆ ಟ್ಯಾಪ್ ಮಾಡಿ.

ಏರ್‌ಟೆಲ್ DND
ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ DND ನೋಂದಾಯಿಸಲು ಆಪ್‌ನ ಕೆಳಗಿನ ರಿಬ್ಬನ್‌ನಲ್ಲಿ 'More' ಆಯ್ಕೆ ಮೇಲೆ ಟ್ಯಾಪ್ ಮಾಡಿ. ನಂತರ ಅಲ್ಲಿ ಕಾಣಿಸಿಕೊಳ್ಳುವ ಮ್ಯಾನೇಜ್‌ ಸರ್ವಿಸ್‌ ವಿಭಾಗವನ್ನು ಗಮನಿಸಿ ನಂತರ ಅಲ್ಲಿ DND ಅನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಇದಾದ ಬಳಿಕ ನೀವು ನಿರ್ಬಂಧಿಸಲು ಬಯಸುವ ಸ್ಪ್ಯಾಮ್ ವಿಭಾಗಗಳನ್ನು ಆಯ್ಕೆ ಮಾಡಿ ಮತ್ತು ಸಬ್‌ಮಿಟ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ.

ವೊಡಾಫೋನ್-ಐಡಿಯಾ DND
ನಿಮ್ಮ ಫೋನ್‌ನಲ್ಲಿ ವಿ ಆಪ್‌ ಓಪನ್‌ ಮಾಡಿದ ನಂತರ ಕೆಳಗಿನ ರಿಬ್ಬನ್‌ನಲ್ಲಿ ಮೈ ಅಕೌಂಟ್‌ ಖಾತೆ ಯನ್ನು ಟ್ಯಾಪ್ ಮಾಡಿ. ಅದರಲ್ಲಿ 'ಇನ್ನಷ್ಟು ಸೇವೆಗಳು' ವಿಭಾಗಕ್ಕೆ ತಲುಪಿ ಕೆಳಗೆ ಸ್ಕ್ರಾಲ್ ಮಾಡಿದರೆ. ಡೋಂಟ್ ಡಿಸ್ಟರ್ಬ್ (DND) ಆಯ್ಕೆ ಕಾಣಸಿಗುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ ಲಭ್ಯವಿರುವ ಆಯ್ಕೆಗಳಿಂದ (Full DND, Block Promotions, Partial DND) ಯಾವುದು ಅಗತ್ಯ ಅದನ್ನು ಆಯ್ಕೆಮಾಡಿ.

Best Mobiles in India

English summary
How to Block Telemarketing, Spam Calls on Jio, Airtel, and V; details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X