Subscribe to Gizbot

ನೆನಪಿನಲ್ಲಿ ಉಳಿಯುವಂತಹ ಪಾಸ್ವರ್ಡ್‌ ಸೆಟ್‌ ಮಾಡುವುದು ಹೇಗೆ?

Posted By: Vijeth
ನೆನಪಿನಲ್ಲಿ ಉಳಿಯುವಂತಹ ಪಾಸ್ವರ್ಡ್‌ ಸೆಟ್‌ ಮಾಡುವುದು ಹೇಗೆ?
ಈಗಂತೂ ಅಂತರ್ಜಾಲದ ಬಳಕೆ ಮಾಡುವಾಗ ಪ್ರತಿಯೋಂದರಲ್ಲಿಯೂ ಕೂಡಾ ಪಾಸ್ವರ್ಡ್‌ ನೀಡುವುದು ಅತ್ಯವಶ್ಯಕ ಅಂದಹಾಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಒಂದೇ ಪಾಸ್ವರ್ಡ್‌ ಬಳಸುವುದೂ ಕೂಡಾ ಒಳ್ಳೆಯದ್ದಲ್ಲ. ಹೀಗಿರುವಾಗ ಪ್ರತಿಯೊಂದು ಎರಡು ಮೂರು ಪಾಸ್ವರ್ಡ್‌ಗಳನ್ನು ಹೇಗೆ ತಾನೆ ನೆನಪಿನಲ್ಲಿಡುವುದು. ನೆನಪಿನ್ಲಿ ಉಳಿಯಬಲ್ಲ ಪಾಸ್ವರ್ಡ್‌ ನೀಡುವುದಾದರು ಹೇಗೆ? ಆದ್ದರಿಂದಲೇ ಗಿಜ್ಬಾಟ್‌ ಇಂದು ಸುಲಭವಾಗಿ ಸ್ಮರಿಸಬಲ್ಲ ಪಾಸ್ವರ್ಡ್ ಸೆಟ್‌ ಮಾಡುವುದರ ಕುರಿತಾಗಿ ಕೆಲ ಸರಳ ವಿಧಾನಗಳನ್ನು ತಂದಿದೆ ಒಮ್ಮೆ ಓದಿ ನೋಡಿ. ಈ ಸುಲಭ ವಿದಾನವನ್ನು ಅನುಸರಿಸುವ ಮೂಲಕ ನೀವು ಸುರಕ್ಷತೆಯೊಂದಿಗೆ ಸುಲಭವಾಗಿ ನೆನಪಿನಲ್ಲಿ ಉಳಿಯುವಂತಹ ಪಾಸ್ವರ್ಡ್‌ಗಳನ್ನು ಸೆಟ್‌ ಮಾಡಿಕೊಳ್ಳ ಬಹುದಾಗಿದೆ.
  • ಸುರಕ್ಷಿತ ಪಾಸ್ವರ್ಡ್‌ ಆಯ್ಕೆಗಾಗಿ ನಿಮ್ಮ ನೆಚ್ಚಿ ಶಬ್ದ ಹಾಗೂ ನೆಚ್ಚಿನ ಸಿಂಬಲ್‌ ಅನ್ನು ಒಂದು ಮಾಡಿಬಿಡಿ. ಇಲ್ಲವಾದಲ್ಲಿ ಎರಡರಲ್ಲಿನ ಮೊದಲ ಅಕ್ಷರಗಳೋನ್ನು ತೆಗೆದುಕೊಂಡು ಪಾಸ್ವರ್ಡ್‌ ಕ್ರಿಯೇಟ್‌ ಮಾಡಿ. ಇಂತಹ ನೆಚ್ಚಿನ ಸಿಂಬಲ್‌ ಹಾಗೂ ಶಬ್ದಗಳು ನಮ್ಮ ನೆನಪಿನಲ್ಲಿಯೇ ಉಳಿದುಕೊಳ್ಳುವುದರಿಂದ ಸ್ಮರಿಸಲು ಅನುಕೂಲಕರವಾಗುತ್ತದೆ.

  • ಇಲ್ಲವಾದಲ್ಲಿ ನಿಮ್ಮ ನೆಚ್ಚಿನ ಯಾವುದಾದರು ಒಂದು ವಾಕ್ಯವನ್ನು ಅದರ ಶಾರ್ಟ್‌ ಫಾರ್ಮ್‌ನಲ್ಲಿ ಪಾಸ್ವರ್ಡ್‌ ಮಾಡಿ. ಉದಾಹರಣೆಗೆ ನಿಮಗೆ “eat the cheeseburger” ವಾಕ್ಯ ಇಷ್ಟವೆಂದು ತಿಳಿದುಕೊಳ್ಳೋಣ ಹೀಗಿದ್ದಲ್ಲಿ ಅದನ್ನು “tthchsbrgr” ಈರೀತಿ ಶಾರ್ಟ್‌ಫಾರ್ಮ್‌ ಮಾಡಿ ಪಾಸ್ವರ್ಡ್‌ ಮಾಡಿಬಿಡಿ ಇಂತಹ ಪಾಸ್ವರ್ಡ್‌ಗಳನ್ನು ಹ್ಯಾಕ್‌ ಮಾಡಲು ಅಷ್ಟು ಸುಲಭದ ಮಾತಲ್ಲ.

  • ನಿಮಗೆ ಬೇಕಿದ್ದಲ್ಲಿ ಸಂಖ್ಯೆಗಳನ್ನು ಕೂಡಾ ಅಕ್ಷರಗಳಲ್ಲಿಯೂ ಕೂಡಾ ನೀಡಬಹುದಾಗಿದೆ. A-1 , B-2, c-3 ಹೀಗೆ ಅಂಖ್ಯೆಗಳಿಗೆ ಅಕ್ಷರಗಳನ್ನು ನೀಡಿ ನಿಮ್ಮ ಫೋನ್‌ ನಂಬರ್‌ ಅನ್ನೇ ನೀಡಿ ಪಾಸ್ವರ್ಡ್‌ ಸ್ಟಾಂಗ್ ಮಾಡಿಕೊಳ್ಳಬಹುದಾಗಿದೆ.

  • ನಿಮ್ಮ ಪಾಸ್ವರ್ಡ್‌ನ ಮೊದಲಾಕ್ಷರವನ್ನು ಸ್ಮಾಲ್‌ ಅತವಾ ಕ್ಯಾಪಿಟಲ್‌ ಲೆಟರ್‌ನಲ್ಲಿಯೂ ಕೂಡಾ ನೀಡ ಬಹುದಾಗಿದೆ. ಉದಾಹರಣೆಗೆ ElePhAnT ಈ ಮಾದರಿಯಲ್ಲಿ ನಿಮ್ಮ ಪಾಸ್ವರ್ಡ್‌ ಸೆಲೆಕ್ಟ್‌ ಮಾಡಿದಲ್ಲಿ ಸುಲಭವಾಗಿ ನೆನಪಿನಲ್ಲುಳಿಯುವುದರ ಜೊತೆಗೆ ಸುರಕ್ಷಿತವಾಗಿರುತ್ತದೆ.


ವೇಗವಾಗಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot