Subscribe to Gizbot

ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯೇ? ಇಲ್ಲಿದೆ ಸಲಹೆ

Written By:

ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್ ಮೊದಲಾದ ಸಾಮಾಜಿಕ ತಾಣಗಳು ನಿಮ್ಮನ್ನು ಹೊರಜಗತ್ತಿನೊಂದಿಗೆ ಹೆಚ್ಚು ಸಂರ್ಕದಲ್ಲಿರುವಂತೆ ಮಾಡುತ್ತದೆ ಎಂಬುದೇನೋ ನಿಜ. ಆದರೆ ಇಂತಹ ಖಾತೆಗಳನ್ನು ಯಾರಾದರೂ ಹ್ಯಾಕ್ ಮಾಡಿದಲ್ಲಿ ಅದರಿಂದುಂಟಾಗುವ ಅಪಾಯಗಳನ್ನು ನೀವು ಅರಿತಿರುತ್ತೀರಿ. ಇತ್ತೀಚೆಗಂತೂ ಬಳಕೆದಾರರಿಗೆ ಗೊತ್ತಿಲ್ಲದೆಯೇ ಅವರುಗಳ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಃ ಬಳಕೆದಾರರಿಗೆ ಅರಿವು ಇರುವುದಿಲ್ಲ. ಏನಾದರೂ ಅಸಹ್ಯಕಾರಿ ಪೋಸ್ಟ್‌ಗಳನ್ನು ಅವರ ಖಾತೆಯಿಂದ ಪೋಸ್ಟ್ ಮಾಡಿದ ಸಂದರ್ಭದಲ್ಲಿ, ಸ್ನೇಹಿತರಿಂದ ತಮ್ಮ ಬಗ್ಗೆ ಹ್ಯಾಕ್ ಆಗಿರುವ ಮಾಹಿತಿಯನ್ನು ಅವರು ಪಡೆದುಕೊಳ್ಳುತ್ತಾರೆ.

ಓದಿರಿ: ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

ಹ್ಯಾಕ್ ಮಾಡಿದ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ಬ್ಲಾಕ್ ಮಾಡುವುದರ ಜೊತೆಗೆ ಕೆಲವೊಂದು ಸೂಚನೆಗಳನ್ನು ನೀವು ಪಾಲಿಸಬೇಕಾಗುತ್ತದೆ. ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ನಿಮ್ಮ ಖಾತೆ ಹ್ಯಾಕ್ ಆದೊಡನೆ ನೀವು ಈ ರೀತಿಯ ನಿಯಮಗಳನ್ನು ಪಾಲಿಸುವುದರಿಂದ ಮುಂದೆ ಉಂಟಾಗುವ ನಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಸ್‌ವರ್ಡ್ ಬದಲಾಯಿಸಿ

ಪಾಸ್‌ವರ್ಡ್ ಬದಲಾಯಿಸಿ

ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಿಕೊಂಡು ಮತ್ತೊಮ್ಮೆ ಹ್ಯಾಕರ್ ನಿಮ್ಮ ಖಾತೆಯನ್ನು ಬಳಸಿಕೊಳ್ಳದಂತೆ ಮಾಡಬಹುದಾಗಿದೆ. ಇದಕ್ಕಾಗಿ ಹೋಮ್ > ಅಕೌಂಟ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ > ಜನರಲ್ ಮತ್ತು ಪಾಸ್‌ವರ್ಡ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ> ಪ್ರಸ್ತುತ ಪಾಸ್‌ವರ್ಡ್ ದೃಢೀಕರಿಸಿ ಮತ್ತು ಹೊಸದನ್ನು ಮರುನಮೂದಿಸಿ.

ಪಾಸ್‌ವರ್ಡ್ ಮರುಹೊಂದಿಸಿ

ಪಾಸ್‌ವರ್ಡ್ ಮರುಹೊಂದಿಸಿ

ನಿಮ್ಮ ಪಾಸ್‌ವರ್ಡ್ ಎಲ್ಲಿಯಾದರೂ ಬದಲಾಗಿದ್ದಲ್ಲಿ, ನಿಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ, ನಿಮ್ಮ ಪಾಸ್‌ವರ್ಡ್ ಅನ್ನು ಮರುಹೊಂದಿಸಿಕೊಳ್ಳಿ. ಹೋಮ್‌ಪೇಜ್‌ನಲ್ಲಿ ರಿಸೆಟ್ ಆಪ್ಶನ್ ಲಭ್ಯವಿದ್ದು, ಅದನ್ನು ಕ್ಲಿಕ್ ಮಾಡುವುದರ ಮೂಲಕ, ಫೇಸ್‌ಬುಕ್ ನಿಮ್ಮ ನೋಂದಾಯಿಸಿದ ಇಮೇಲ್ ವಿಳಾಸಕ್ಕೆ ಲಿಂಕ್ ಅನ್ನು ಕಳುಹಿಸುತ್ತದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಪಾಸ್‌ವರ್ಡ್ ನಮೂದಿಸಿ ಮತ್ತು ನಿಮ್ಮ ಖಾತೆಯನ್ನು ರಿಕವರಿ ಮಾಡಲು ಅದನ್ನು ದೃಢೀಕರಿಸಿ.

ಕಾಂಪ್ರಮೈಸ್ಡ್ ಖಾತೆಯಂತೆ ರಿಪೋರ್ಟ್ ಮಾಡಿ

ಕಾಂಪ್ರಮೈಸ್ಡ್ ಖಾತೆಯಂತೆ ರಿಪೋರ್ಟ್ ಮಾಡಿ

ಗುರುತಿಸಲಾಗದೇ ಇರುವ ಲಿಂಕ್‌ಗಳನ್ನು ತಮ್ಮ ಸ್ನೇಹಿತರಿಗೆ ಫೇಸ್‌ಬುಕ್ ಬಳಕೆದಾರರು ಕಳುಹಿಸುತ್ತಿರುತ್ತಾರೆ. ಇದು ಕೊಂಚ ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಇದನ್ನು ಕಾಂಪ್ರಮೈಸ್ಡ್ ಎಂಬಂತೆ ಎಲ್ಲಾ ಬಳಕೆದಾರರು ರಿಪೋರ್ಟ್ ಮಾಡಬೇಕು.ನಿಮ್ಮ ಸಂಪರ್ಕಗಳಿಗೆ ಲಿಂಕ್‌ಗಳನ್ನು ಕಳುಹಿಸುವುದನ್ನು ಇದು ನಿಲ್ಲಿಸುತ್ತದೆ.

ದೋಷಪೂರಿತ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡಿ

ದೋಷಪೂರಿತ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡಿ

ಒಮ್ಮೆಮ್ಮೆ ವ್ಯಕ್ತಿಯ ಬದಲಿಗೆ ದೋಷಪೂರಿತ ಅಪ್ಲಿಕೇಶನ್‌ಗಳು ಕೂಡ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಸಂಭವ ಇರುತ್ತದೆ. ಈ ದೋಷಪೂರಿತ ಅಪ್ಲಿಕೇಶನ್‌ಗಳನ್ನು ನಿವಾರಿಸಿಕೊಳ್ಳಲು, ಹೋಮ್ > ಅಕೌಂಟ್ ಸೆಟ್ಟಿಂಗ್ಸ್>ಅಪ್ಲಿಕೇಶನ್ ಮತ್ತು ಅವರು ರಿಮೂವ್ ಮಾಡಬೇಕೆಂದಿರುವ ಅಪ್ಲಿಕೇಶನ್ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are a few ways that every Facebook user should immediately do as soon as they realize that their account has been hacked.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot