ವಾಟ್ಸಾಪ್‌ನಲ್ಲಿ 10೦ ಕ್ಕಿಂತ ಹೆಚ್ಚು ಫೋಟೋಗಳ ಸೆಂಡ್ ಒಮ್ಮೆಯೇ ಹೇಗೆ?

By Suneel
|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್, ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಕರ್ಷಕವು ಹಾಗೂ ಹೆಚ್ಚಿನ ಉಪಯೋಗವಾಗುವ ವಾಯ್ಸ್ ಕರೆ, ಕಾಲ್‌ ಬ್ಯಾಕ್‌ ನಂತಹ ಹಲವು ಫೀಚರ್‌ಗಳನ್ನು ಪರಿಚಯಿಸಿದೆ. ಈ ಫೀಚರ್‌ಗಳು ಅಪರಿಚಿತ ನಂಬರ್‌ಗಳಿಂದ ಬರುವ ಮೆಸೇಜ್‌ಗಳಿಗೆ ಉತ್ತಮ ಅಂತರ್‌ ಸಂಪರ್ಕವನ್ನು ನೀಡುತ್ತವೆ. ಅಂದಹಾಗೆ ವಾಟ್ಸಾಪ್, ಒಮ್ಮೆಯೇ 10 ಫೋಟೋಗಳಿಗಿಂತ ಹೆಚ್ಚಿನ ಫೋಟೋಗಳನ್ನು ಸೆಂಡ್‌ ಮಾಡುವ ಫೀಚರ್‌ ಅನ್ನು ಅಪ್‌ಡೇಟ್‌ ಮಾಡಿಲ್ಲ.

ಉದಾಹರಣೆಗೆ ನೀವು ಅಗತ್ಯವಾಗಿ ಯಾರಿಗಾದರೂ 100 ಫೋಟೋಗಳನ್ನು ಕಳುಹಿಸಬೇಕಾದಲ್ಲಿ 10 ಫೋಟೋಗಳಂತೆ 10 ಬಾರಿ ಸೆಂಡ್‌ ಮಾಡಬೇಕಾಗುತ್ತದೆ. ಈ ಚಟುವಟಿಕೆ ಕಿರಿಕಿರಿಯು ಹೌದು, ಹಾಗೆ ಕಷ್ಟವು ಹೌದು. ಆದ್ರೆ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇಇರುತ್ತದೆ. ಅಂದಹಾಗೆ ಇಂದಿನ ಲೇಖನದಲ್ಲಿ ನಾವು ನಿಮಗೆ ವಾಟ್ಸಾಪ್‌ನಲ್ಲಿ 10 ಇಮೇಜ್‌ಗಳಿಗಿಂತ ಹೆಚ್ಚಿನ ಇಮೇಜ್‌ಗಳನ್ನು ಸೆಂಡ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್‌ ಮಾಡಿದರೆ ಏನಾಗಬಹುದು ಗೊತ್ತೇ?

ವಾಟ್ಸಾಪ್(WhatsApp) ಬಳಕೆದಾರರು ಕೇವಲ 'Unlimited Media' ಆಪ್ಶನ್‌ ಅನ್ನು ಕ್ಲಿಕ್‌ ಮಾಡಬೇಕಷ್ಟೆ. ನಂತರ ನಿಮ್ಮ ಯಾವುದೇ ವಾಟ್ಸಾಪ್ ಕಾಂಟ್ಯಾಕ್ಟ್‌ಗಳಿಗೆ ಎಷ್ಟು ಬೇಕಾದರೂ ಫೋಟೋಗಳನ್ನು ಕಳುಹಿಸಬಹುದು. ಅದು ಹೇಗೆ ಎಂದು ಕೆಳಗಿನ ಸ್ಲೈಡರ್‌ನ ಮಾಹಿತಿ ಓದಿ ತಿಳಿಯಿರಿ.

Cydia App ಡೌನ್‌ಲೋಡ್‌ ಮಾಡಿ

Cydia App ಡೌನ್‌ಲೋಡ್‌ ಮಾಡಿ

ವಿಶೇಷವಾಗಿ ನೀವು ಐಫೋನ್‌ ಬಳಕೆದಾರರಾಗಿದ್ದಲ್ಲಿ, ನೀವು 'Cydia App' ಅನ್ನು ಆಪಲ್‌ ಆಪ್‌ ಸ್ಟೊರ್‌ನಿಂದ ಡೌನ್‌ಲೋಡ್‌ ಮಾಡಿ. ನಂತರ ನಿಮ್ಮ ವಿವರಗಳನ್ನು ನೀಡಿ ಸೈನಪ್‌ ಆಗಿ.

WhatsApp Unlimited Media

WhatsApp Unlimited Media

ಆಪ್‌ನಲ್ಲಿ ಪರಿಶೀಲನೆ ಮುಗಿದ ನಂತರ, 'WhatsApp Unlimited Media' ಆಪ್ಶನ್‌ ಅನ್ನು ನಾವಿಗೇಷನ್ ಮೆನುವಿನಲ್ಲಿ ಸರ್ಚ್‌ ಮಾಡಿ.

ಇನ್‌ಸ್ಟಾಲೇಶನ್‌ ಆರಂಭಿಸಿ

ಇನ್‌ಸ್ಟಾಲೇಶನ್‌ ಆರಂಭಿಸಿ

ಇನ್‌ಸ್ಟಾಲೇಶನ್‌ ಪ್ರೊಸೆಸ್‌ನಲ್ಲಿ 'Install' ಆಪ್ಶನ್‌ ಕ್ಲಿಕ್ ಮಾಡಿ.

ಇನ್‌ಸ್ಟಾಲೇಶನ್ ಕೊನೆಯ ಹಂತ

ಇನ್‌ಸ್ಟಾಲೇಶನ್ ಕೊನೆಯ ಹಂತ

ಇನ್‌ಸ್ಟಾಲೇಶನ್ ಮುಗಿದರೆ, ಎಷ್ಟು ಫೋಟೋಗಳನ್ನು ಬೇಕಾದರೂ ವಾಟ್ಸಾಪ್‌ನಲ್ಲಿ ಇತರರಿಗೆ ಸೆಂಡ್‌ ಮಾಡಬಹುದು.

ಅನ್‌ಲಿಮಿಟೆಡ್‌ ಫೋಟೋಗಳನ್ನು  ವಾಟ್ಸಾಪ್‌ನಲ್ಲಿ ಸೆಂಡ್‌ ಮಾಡಿ.

ಅನ್‌ಲಿಮಿಟೆಡ್‌ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಸೆಂಡ್‌ ಮಾಡಿ.

ನಿಮ್ಮ ವಾಟ್ಸಾಪ್‌ ಆಪ್‌ನಲ್ಲಿ ಎಷ್ಟು ಬೇಕಾದರೂ ಇಮೇಜ್‌ಗಳನ್ನು ಸೆಲೆಕ್ಟ್ ಮಾಡಿ, ಸೆಂಡ್‌ ಬಟನ್ ಕ್ಲಿಕ್ ಮಾಡಿ.
ಸೂಚನೆ : ವಾಟ್ಸಾಪ್‌ನಲ್ಲಿ ಅನ್‌ಲಿಮಿಟೆಡ್‌ ಇಮೇಜ್‌ಗಳನ್ನು ಸೆಂಡ್‌ ಮಾಡುವ ಮೇಲಿನ ಹಂತಗಳನ್ನು ಪಾಲಿಸಿ, ಬಳಸುವ ಅವಕಾಶ ಐಫೋನ್‌ ಬಳಕೆದಾರರಿಗೆ ಮಾತ್ರ ಸಾಧ್ಯ.

Best Mobiles in India

English summary
How to Send More Than 10 Photos in WhatsApp. SIMPLE TRICK. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X