Subscribe to Gizbot

ಫೋನ್‌ನಲ್ಲಿ ಫೋಟೋ ತೆಗೆಯುವಾಗ ಪಾಲಿಸಬೇಕಾದ ಸಲಹೆಗಳು

Written By:

ಉತ್ತಮ ಕ್ಯಾಮೆರಾ ಸಾಮರ್ಥ್ಯವುಳ್ಳ ಒಳ್ಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸಿದ್ದರೂ, ನಿಮಗೆ ಚೆನ್ನಾಗಿ ಫೋಟೋ ತೆಗೆಯಲು ಗೊತ್ತಿಲ್ಲ ಎಂದಾದಲ್ಲಿ ಜನರ ಅವಹೇಳನಕ್ಕೆ ನೀವು ಗುರಿಯಾಗುವುದು ಖಂಡಿತ. ಸಾಮಾಜಿಕ ತಾಣದಲ್ಲಿ ಕೂಡ ನೀವು ಸೆರೆಹಿಡಿದ ಚಿತ್ರಗಳು ಮಿಂಚಬೇಕೆಂಬ ಹಂಬಲ ನಿಮ್ಮದಾಗಿದೆ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ನಿಮಗೆ ಟಿಪ್ಸ್‌ಗಳನ್ನು ನೀಡುತ್ತಿದ್ದೇವೆ.

ಅತ್ಯುತ್ತಮ ಫೋಟೋಗ್ರಫಿ ಟಿಪ್ಸ್‌ಗಳು ಇವುಗಳಾಗಿದ್ದು ನಿಮಗಿವುಗಳು ಖಂಡಿತ ಸಹಕಾರಿಯಾಗಲಿವೆ. ಹಾಗಿದ್ದರೆ ಆ ಕ್ಯಾಮೆರಾ ಟ್ರಿಕ್ಸ್‌ಗಳೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ರಾಪ್ ಮಾಡಲು

ಡಿಜಿಟಲ್ ಜೂಮ್ ಬೇಡ

ಫೋಟೋವನ್ನು ದೊಡ್ಡದು ಮಾಡಿ ಕ್ರಾಪ್ ಮಾಡಲು ಇದು ಸಹಕಾರಿ. ಪೂರ್ಣ ಜೂಮ್‌ನಲ್ಲಿ ಚಿತ್ರಗಳನ್ನು ತೆಗೆದು ನಂತರ ಅವುಗಳನ್ನು ಎಡಿಟ್ ಮಾಡಬಹುದಾಗಿದೆ.

ಹೆಚ್ಚು ಸ್ವಾಭಾವಿಕ

ಫ್ಲ್ಯಾಶ್ ಬಳಕೆ

ನಿಮ್ಮ ಫೋಟೋ ಹೆಚ್ಚು ಸ್ವಾಭಾವಿಕವಾಗಿ ಮತ್ತು ಆಳವಾಗಿ ಬರಬೇಕು ಎಂಬ ಆಸೆ ನಿಮ್ಮದು ಎಂದಾದಲ್ಲಿ, ಫ್ಲ್ಯಾಶ್ ಬಳಕೆಯನ್ನು ಮಾಡದೇ ಸ್ವಾಭಾವಿಕ ಬೆಳಕಿನಲ್ಲಿ ಫೋಟೋ ತೆಗೆಯಿರಿ.

ಮೂರು ಭಾಗ

ರೂಲ್ ಆಫ್ ಥರ್ಡ್ಸ್

ಯಾವಾಗಲೂ ಫೋಟೋ ತೆಗೆಯುವಾಗ ರೂಲ್ ಆಫ್ ಥರ್ಡ್ಸ್ ಅನ್ನು ಅನ್ವಯಿಸಿಕೊಳ್ಳಿ. ಫ್ರೇಮ್ ಅನ್ನು ಮೂರು ಭಾಗಗಳನ್ನಾಗಿ ಈ ನಿಯಮ ಮಾಡುತ್ತದೆ.

ಪ್ರಾಥಮಿಕ ಬೆಳಕಿನ ಮೂಲ

ಲೈಟ್ನಿಂಗ್ ಮತ್ತು ಫೋಕಸ್

ನಿಮ್ಮ ಪ್ರಾಥಮಿಕ ಬೆಳಕಿನ ಮೂಲ ಮತ್ತು ಅದರ ದಿಕ್ಕನ್ನು ಆರಿಸಿ, ಅದಕ್ಕನುಗುಣವಾಗಿ ವಿಷಯವಿರಲಿ ಆದಷ್ಟು ಫೋಟೋ ತೆಗೆಯುವಾಗ ಬ್ಲರ್ ಇಮೇಜ್ ಬರದಂತೆ ನೋಡಿಕೊಳ್ಳಿ ನಿಮ್ಮ ಕ್ಯಾಮೆರಾವನ್ನು ಸರಿಯಾಗಿ ಹಿಡಿದುಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ತತ್ವ

ಕಾಂಪೊಸಿಶನ್

ಏಂಗಲ್ ಮತ್ತು ಸಿಮೆಟ್ರಿಯಂತಹ ತತ್ವಗಳನ್ನು ನೀವು ಅನ್ವಯಿಸಿಕೊಳ್ಳಬೇಕಾಗುತ್ತದೆ. ಫೋಟೋ ತೆಗೆಯುವಾಗ ನಿಖರವಾದ ಏಂಗಲ್‌ಗಳನ್ನು ಬಳಸಿರಿ ಇದರಿಂದ ಫೋಟೋ ಚೆನ್ನಾಗಿ ಬರುತ್ತದೆ.

ಫೋನ್ ಸ್ಟೆಡಿ

ಎಚ್‌ಡಿಆರ್ ಮೋಡ್ ಬಳಕೆ

ನೀವು ಎಚ್‌ಡಿಆರ್ ಮೋಡ್ ಅನ್ನು ಬಳಸುತ್ತಿರುವಾಗ ನಿಮ್ಮ ಫೋನ್ ಸ್ಟೆಡಿಯಾಗಿದೆಯೇ ಎಂಬುದನ್ನು ನೋಡಿ.

ಎಡಿಟಿಂಗ್ ಅಪ್ಲಿಕೇಶನ್‌

ಫೋಟೋ ಕ್ಯಾಪ್ಚರ್ ಮತ್ತು ಎಡಿಟಿಂಗ್ ಟೂಲ್

ನಿಮ್ಮ ಫೋನ್‌ನ ಕ್ಯಾಮೆರಾ ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬಂತಹ ಸಂದರ್ಭದಲ್ಲಿ ಫೋಟೋ ಕ್ಯಾಪ್ಚರಿಂಗ್ ಮತ್ತು ಎಡಿಟಿಂಗ್ ಅಪ್ಲಿಕೇಶನ್‌ಗಳ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಪ್ರೊ ಎಚ್‌ಡಿಆರ್, ಪ್ರೊ ಕ್ಯಾಪ್ಚರ್ ಫ್ರಿ, ಕ್ಯಾಮೆರಾ FV-5 ಮತ್ತು ಸ್ನ್ಯಾಪ್‌ಸೀಡ್ ಮೊದಲಾದ ಟೂಲ್‌ಗಳಾಗಿವೆ.

ಫೋನ್ ಲೆನ್ಸ್

ಲೆನ್ಸ್ ಸ್ವಚ್ಛಗೊಳಿಸಿ

ನಿಮ್ಮ ಫೋನ್ ಧೂಳಿಗೆ ಒಳಗಾಗುತ್ತಲೇ ಇರುತ್ತದೆ. ಆದಷ್ಟು ಫೋನ್ ಲೆನ್ಸ್ ಅನ್ನು ಸ್ವಚ್ಛಮಾಡುತ್ತಿರಿ. ಲೆನ್ಸ್‌ಗಳ ಮೇಲೆ ಯಾವುದೇ ಸ್ಕ್ರಾಚ್‌ಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ವೈಡ್ ಸ್ಕ್ರೀನ್ ರೆವಲ್ಯೂಶನ್‌

ಲ್ಯಾಂಡ್ ಸ್ಕೇಪ್ ಕ್ಯಾಟಗರಿ

ಲ್ಯಾಂಡ್ ಸ್ಕೇಪ್ ಮೋಡ್‌ನಲ್ಲಿ ಫೋಟೋಗಳನ್ನು ತೆಗೆಯುವುದು ಉತ್ತಮ ವಿಚಾರವಾಗಿದೆ. ವೈಡ್ ಸ್ಕ್ರೀನ್ ರೆವಲ್ಯೂಶನ್‌ಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಫೋಟೋಗಳನ್ನು ತೆಗೆಯುವಾಗ ಲ್ಯಾಂಡ್ ಸ್ಕೇಪ್ ಮೋಡ್ ಅನ್ನೇ ಬಳಸಿಕೊಳ್ಳಿ.

ಕಪ್ಪು ಬಿಳುಪಿನ ಚಿತ್ರ

ಮೋನೋಕ್ರೋಮ್

ಕಪ್ಪು ಬಿಳುಪಿನ ಚಿತ್ರವನ್ನು ನೀವೀಗ ಪಡೆದುಕೊಳ್ಳಬಹುದಾಗಿದೆ ಇನ್ ಬಿಲ್ಟ್ ಅಥವಾ ಅಪ್ಲಿಕೇಶನ್ ಫಿಲ್ಟರ್ ಅನ್ನು ಬಳಸಿಕೊಂಡು ನಿಮಗಿದನ್ನು ಸಾಧಿಸಿಕೊಳ್ಳಬಹುದಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಬೆಂಗಳೂರಿಗರಿಗಾಗಿ ಮಾತ್ರ ಈ ಟಾಪ್ 5 ಅಪ್ಲಿಕೇಶನ್‌ಗಳು
ವಾಟ್ಸಾಪ್ ಗ್ರೂಪ್‌ನಿಂದ ಉದ್ಯೋಗಕ್ಕೆ ನೇಮಕ
ಮನ ಮೆಚ್ಚಿದ ಬೆಲೆಯಲ್ಲಿ ಖರೀದಿಸಿ ಟಾಪ್ 20 ಆಂಡ್ರಾಯ್ಡ್ ಫೋನ್ಸ್
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು
ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
You just bought a good smartphone, with a nice big camera but are still not able to capture those cool images that you see on other people's Instagram accounts. Don't worry we got your back, here are some of the tips that would help you take pro-like images..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot