ನಿಮ್ಮ ಸ್ಮಾರ್ಟ್ ಫೋನ್ ಅಥವಾ ಐಫೋನ್ ಅನ್ನು ವೈಫೈ ರೂಟರ್ ಅಥವಾ ಮೊಬೈಲ್ ಹಾಟ್ ಸ್ಪಾಟ್ ಆಗಿ ಉಪಯೋಗಿಸುವುದೇಗೆ?
ತಡೆರಹಿತ ಅಂತರ್ಜಾಲ ಸಂಪರ್ಕವನ್ನು ಹೊಂದಿರಲು, ದಕ್ಷ ರೂಟರ್ ಅತ್ಯವಶ್ಯ. ಆದರೆ ರೂಟರ್ ಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ, ಒಳ್ಳೆಯ ರೂಟರ್ ಖರೀದಿಸುವುದು - ಅದರಲ್ಲೂ ನಮ್ಮ ಯುವಜನತೆಗೆ - ಕಷ್ಟದ ಕೆಲಸವಾಗಿಬಿಟ್ಟಿದೆ.

ಈಗಂತೂ, ವ್ಯಕ್ತಿಯ ಬಳಿ ಅಸಂಖ್ಯಾತ ಸ್ಮಾರ್ಟ್ ಸಾಧನಗಳಿರುತ್ತವೆ, ಮತ್ತು ಈ ಸಾಧನಗಳಲ್ಲಿ ಆನ್ ಲೈನ್ ಉಳಿಯಲು ಉತ್ತಮ ಅಂತರ್ಜಾಲದ ಸಂಪರ್ಕ ಅನಿವಾರ್ಯ.
ಓದಿರಿ: ದಿನಕ್ಕೆ 4ಜಿ ಡೇಟಾ: ರಿಲಯನ್ಸ್ ಜಿಯೋ ಆಫರ್
ದಕ್ಷ ನಂಬುಗೆಯ ವೈಫೈ ರೂಟರ್, ವಿದ್ಯುತ್, ಆಹಾರ ಅಥವಾ ನೀರಿನಷ್ಟೆ ಅವಶ್ಯಕ. ನಿಮ್ಮ ಸ್ಮಾರ್ಟ್ ಫೋನಿನಿಂದ ಕಡಿಮೆ ಬೆಲೆಗೆ ಉತ್ತಮ ಅಂತರ್ಜಾಲ ಸಂಪರ್ಕವನ್ನು ಪಡೆಯುವುದು ವರವೇ ಸರಿ.
ಆ್ಯಂಡ್ರಾಯ್ಡ್ ಬಳಕೆದಾರರಿಗೆ: ನಿಮ್ಮ ಸ್ಮಾರ್ಟ್ ಫೋನನ್ನೇ ರೂಟರ್ ಆಗಿಸಿ.
ರೂಟರ್ ಕೊಳ್ಳಲು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಬಯಸದ ಆ್ಯಂಡ್ರಾಯ್ಡ್ ಬಳಕೆದಾರರು, ನಿಮ್ಮ ಫೋನನ್ನೇ ಹಲವು ಸರಳ ಆಯ್ಕೆಗಳ ಮೂಲಕ ರೂಟರ್ ಆಗಿ ಬದಲಿಸಬಹುದು.

ಹಂತ 1: ಸೆಟ್ಟಿಂಗ್ಸ್ ಗೆ ಹೋಗಿ.
ಹಂತ 2: ಟೆಥರಿಂಗ್ ಮತ್ತು ಮೊಬೈಲ್ ಹಾಟ್ ಸ್ಪಾಟ್ ಮೇಲೆ ಕ್ಲಿಕ್ಕಿಸಿ.

ಹಂತ 3: ಪೋರ್ಟಬಲ್ ವೈಫೈ ಹಾಟ್ ಸ್ಪಾಟ್ ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ಆ್ಯಂಡ್ರಾಯ್ಡ್ ಫೋನ್ ರೂಟರ್ ಆಗಿ ಕೆಲಸ ಮಾಡಲು ಸಿದ್ಧವಾಗಿದೆ.
ಹಂತ 4: ವೈಫೈ ಸೌಕರ್ಯವಿರುವ ಕಂಪ್ಯೂಟರ್ ಅಥವಾ ವೈರ್ ಲೆಸ್ ಸಾಧನಗಳಲ್ಲಿ 'ಆ್ಯಂಡ್ರಾಯ್ಡ್ ಎಪಿ' ಎಂದಿರುವ ಕಡೆ ಕ್ಲಿಕ್ಕಿಸಿ ಅಂತರ್ಜಾಲಕ್ಕೆ ಸಂಪರ್ಕ ಪಡೆಯಿರಿ.
ಐಫೋನ್ ಬಳಕೆದಾರರಿಗೆ: ನಿಮ್ಮ ಸ್ಮಾರ್ಟ್ ಫೋನನ್ನೇ ರೂಟರ್ ಆಗಿಸುವುದು ಹೀಗೆ.

ಹಂತ 1: ಹೋಮ್ ಪರದೆಯ ಮೇಲಿರುವ ಸೆಟ್ಟಿಂಗ್ಸ್ ಐಕಾನಿನ ಮೇಲೆ ಕ್ಲಿಕ್ಕಿಸಿ.
ಹಂತ 2: ಪರ್ಸನಲ್ ಹಾಟ್ ಸ್ಪಾಟ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ, ಆನ್ ಮಾಡಿ. ಬೇಡವಾದಾಗ ಆಫ್ ಮಾಡಿ.
ಓದಿರಿ: ಆಧಾರ್ ಕಾರ್ಡ್ ಇದ್ದಲ್ಲಿ, 1,700 ರೂಗೆ 'ಐಫೋನ್ 7' ಖರೀದಿಸಿ!
ಹಂತ 3: ವೈಫೈ ಪಾಸ್ ವರ್ಡ್ ಪರದೆಯ ಮೇಲೆ ಮೂಡುತ್ತದೆ. ಅದನ್ನು ಗುರುತಿಟ್ಟುಕೊಳ್ಳಿ.
ಹಂತ 4: ವೈಫೈ ಸೌಕರ್ಯವಿರುವ ಕಂಪ್ಯೂಟರ್ ಅಥವಾ ವೈರ್ ಲೆಸ್ ಸಾಧನಗಳಲ್ಲಿ ಐಫೋನ್ ಹೆಸರನ್ನು ಆಯ್ದುಕೊಂಡು ಅಂತರ್ಜಾಲಕ್ಕೆ ಸಂಪರ್ಕ ಪಡೆಯಿರಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








