ಪೆನ್‌ಡ್ರೈವ್ ಡೇಟಾ ವರ್ಗಾವಣೆ ವೇಗ ಹೆಚ್ಚಿಸುವುದು ಹೇಗೆ?

|

ಎಲ್ಲಾ ಪೆನ್‌ಡ್ರೈವ್ ಸಾಧನಗಳು ಒಂದೇ ತೆರನಾಗಿ ಕೆಲಸಮಾಡುತ್ತದೆಯೆಂದು ನೀವು ತಿಳಿದಿದ್ದರೆ ಅದು ನಿಜವಲ್ಲ. ಏಕೆಂದರೆ, USB ಸಾಧನಗಳು ಎರಡು ರೀತಿಯಲ್ಲಿವೆ. ಒಂದು USB 2.0 ಆಗಿದ್ದು ಅದು 35 Mbps ಡೇಟಾ ವರ್ಗಾವಣೆಯ ವೇಗ ಹೊಂದಿದ್ದರೆ ಮತ್ತೊಂದು USB 3.0 ಆಗಿದ್ದು ಅದರ ಡೇಟಾ ವರ್ಗಾವಣೆಯ ವೇಗ 625 Mbps ಆಗಿದೆ.

ನಿಮ್ಮ ಬಳಿ ಇರುವ USB ಸಾಧನ ನೀವು ಮೂರು ವರ್ಷಗಳ ಹಿಂದೆ ಖರೀದಿಸಿದ್ದಾಗಿದ್ದರೆ ಅದು USB 2.0 ಆಗಿರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಅಧಿಕ ಮೊತ್ತದ ಡೇಟಾ ವರ್ಗಾವಣೆ ಮಾಡುವಾಗ ಈ USB ಸಾಧನದ ನಿಧಾನ ಗತಿಯ ಡೇಟಾ ವರ್ಗಾವಣೆಯಂತಹ ಸಮಸ್ಯೆ ನಿಮಗೆ ಎದುರಾಗಿರಬಹುದು ಮತ್ತು ಇದು ಹೆಚ್ಚು ತೊಂದರೆಯಾಗಿರಬಹುದು.

ಪೆನ್‌ಡ್ರೈವ್ ಡೇಟಾ ವರ್ಗಾವಣೆ ವೇಗ ಹೆಚ್ಚಿಸುವುದು ಹೇಗೆ?

ಹಾಗಾಗಿ, ಪೆನ್ಡ್ರೈವ್‌ನ ಡೇಟಾ ವರ್ಗಾವಣೆಯ ವೇಗವನ್ನು ನಿರ್ಧರಿಸುವ ಹಲವು ಅಂಶಗಳಲ್ಲಿ ಅಲೊಕೇಶನ್ ಟೇಬಲ್, ಸಾಧನದ ಪಾಲಿಸಿ, ಫೈಲ್‌ನ ವಿಧಗಳು, ಓಎಸ್ ಮತ್ತು ಹಾರ್ಡ್ವೇರ್ ನ ಕಾರ್ಯಕ್ಷಮತೆಯಲ್ಲಿ ಕೆಲವು ಚಿಕ್ಕಪುಟ್ಟ ಬದಲಾವಣೆ ತಂದು ನಿಮ್ಮ USB ಸಾಧನದ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಪೆನ್‌ಡ್ರೈವ್ ಡೇಟಾ ವರ್ಗಾವಣೆ ವೇಗ ಹೆಚ್ಚಿಸುವುದು ಹೇಗೆ?

ವಿಧಾನ 1: ನಿಮ್ಮ ಫೈಲ್ ಅಲೊಕೇಶನ್ ಟೇಬಲ್ ಅನ್ನು ಫಾರ್ಮ್ಯಾಟ್ ಮಾಡಿ

ಹಂತ 1: ನಿಮ್ಮ ಪೆನ್ಡ್ರೈವ್ ಅನ್ನು ಕಂಪ್ಯೂಟರ್ ಗೆ ಜೋಡಿಸಿ

ಹಂತ 2: 'ಮೈ ಕಂಪ್ಯೂಟರ್' ತೆರದು ಡ್ರೈವ್ ನ ಮೇಲೆ ರೈಟ್ ಕ್ಲಿಕ್ ಮಾಡಿ.

ಹಂತ 3: ನಂತರ 'ಪ್ರಾಪರ್ಟೀಸ್' ಮೇಲೆ ಕ್ಲಿಕ್ ಮಾಡಿ 'ಫಾರ್ಮ್ಯಾಟ್' ಅನ್ನು ಆಯ್ಕೆಮಾಡಿ

ಹಂತ 4: ನಂತರ 'ಫೈಲ್ ಸಿಸ್ಟಮ್' ನ ಡ್ರಾಪ್ ಡೌನ್ ಮೆನು ತೆರೆದು 'NTFS' ಆಯ್ಕೆ ಮಾಡಿ

ಹಂತ 5: ಈಗ ಫರ್ಮ್ಯಾಟ್ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಪೆನ್ಡ್ರೈವ್ ಹಿಂದಿಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಡೇಟಾ ಅಲೊಕೇಶನ್ ಟೇಬಲ್ ಅನ್ನು ಫಾರ್ಮ್ಯಾಟ್ ಮಾಡುವ ಮೊದಲು ನಿಮ್ಮ ಡೇಟಾ ದ ಬ್ಯಾಕಪ್ ತೆಗೆದಿರಿಸಲು ಮರೆಯದಿರಿ.

ಪೆನ್‌ಡ್ರೈವ್ ಡೇಟಾ ವರ್ಗಾವಣೆ ವೇಗ ಹೆಚ್ಚಿಸುವುದು ಹೇಗೆ?

ವಿಧಾನ 2: USB ಸಾಧನದ ಪಾಲಿಸಿಗಳಲ್ಲಿ ಬದಲಾವಣೆ ಮಾಡಿ

ನಿಮ್ಮ USB ಸಾಧನದ ಪಾಲಿಸಿಯಲ್ಲಿ ಬದಲಾವಣೆ ಮಾಡುವ ಮೂಲಕ ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ಈ ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಪೆನ್ಡ್ರೈವ್ ನ ವೇಗ ಹೆಚ್ಚುತ್ತದೆ. ಈ ವಿಧಾನದ ಮೊದಲೆರಡು ಹಂತಗಳನ್ನು ಮೇಲೆ ಹೇಳಿರುವ ವಿಧಾನದಿಂದ ಅಳವಡಿಸಿಕೊಳ್ಳಿ. ನಾವು ಈ ವಿಭಾಗದಲ್ಲಿ ಮೂರನೇ ಹಂತದಿಂದ ಪ್ರಾರಂಭಿಸಿ ನಂತರದ ಸೂಚನೆಗಳನ್ನು ನೀಡಿದ್ದೇವೆ.

Unboxing of Rs. 8,499 LED TV from Daiwa

ಹಂತ 1: 'ಪ್ರಾಪರ್ಟೀಸ್' ಆಯ್ಕೆ ಮಾಡಿ 'ಹಾರ್ಡ್ವೇರ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಪೆನ್ಡ್ರೈವ್ ನ ಡೇಟಾ ವರ್ಗಾವಣೆಯ ವೇಗ ಹೆಚ್ಚಿಸುವುದು ಹೇಗೆ?
ಹಂತ 2: ಈಗ ನಿಮ್ಮ ಪರದೆಯ ಮೇಲೆ ಬೇರೆ ಬೇರೆ ಡ್ರೈವರ್ ಗಳ ಪಟ್ಟಿ ಬರುತ್ತದೆ. ಅವುಗಳ ಪೈಕಿ ನಿಮ್ಮ ಡ್ರೈವ್ ಅನ್ನು ಆಯ್ಕೆ ಮಾಡಿ ಪುನ: 'ಪ್ರಾಪರ್ಟೀಸ್' ಮೇಲೆ ಕ್ಲಿಕ್ ಮಾಡಿ

ಹಂತ 3: 'ಚೇಂಜ್ ಸೆಟ್ಟಿಂಗ್ಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ ನಂತರ 'ಪಾಲಿಸಿ ಟ್ಯಾಬ್' ಕ್ಲಿಕ್ ಮಾಡಿ

ಹಂತ 4: 'ಬೆಟರ್ ಪರ್ಫಾರ್ಮೆನ್ಸ್ ಆಪ್ಶನ್' ಎಂಬ ಬಾಕ್ಸ್ ಮೇಲೆ 'ಟಿಕ್' ಮಾಡಿ. ಈ ವಿಧಾನದಿಂದ ನಿಮ್ಮ ಪೆನ್ಡ್ರೈವ್ ನ ಕಾರ್ಯಕ್ಷಮತೆ ಹೆಚ್ಚುವುದು.

Best Mobiles in India

English summary
First of all plug in your Pendrive in the USB port of your computer and right click on a drive and select properties. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X