ಐಫೋನ್‌ಗಳನ್ನೇ ಮೀರಿಸುವ ಬಜೆಟ್ ದರದ ಕ್ಲೋನ್ ಐಫೋನ್‌ಗಳು

By Shwetha
|

ಹೊಸ ಐಫೋನ್ ಲಾಂಚ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದುಗದ್ದಲವನ್ನು ಉಂಟುಮಾಡುತ್ತಿರುವ ಸಂದರ್ಭದಲ್ಲಿಯೇ ಐಫೋನ್ ಅನ್ನೇ ಹೋಲುವ ಕಡಿಮೆ ದರದ ಡಿವೈಸ್‌ಗಳಾಗಿದ್ದು ಐಫೋನ್ ಕ್ಲೋನ್ ಎಂಬುದಾಗಿ ಇವುಗಳನ್ನು ಕರೆಯಬಹುದಾಗಿದೆ. ಮಾರುಕಟ್ಟೆಯಲ್ಲಿ ಸದ್ಯದಲ್ಲಿ ಬೇಡಿಕೆಯಲ್ಲಿರುವ ಈ ಐಫೋನ್‌ಗಳು ಕಡಿಮೆ ಮೌಲ್ಯದ್ದಾಗಿದೆ.

ಓದಿರಿ: ಅತಿ ಕಡಿಮೆ ಬೆಲೆಯಲ್ಲಿ ಐಫೋನ್ 7 ಲಭ್ಯ!!!

ಮೆಟಾಲಿಕ್ ಫಿನ್ನಿಶ್, ಸ್ಲಿಮ್ ಬಾಡಿ ಮತ್ತು ಉತ್ತಮ ಕ್ಯಾಮೆರಾವನ್ನು ಈ ಐಫೋನ್‌ಗಳು ಹೊಂದಿವೆ. ಐಫೋನ್‌ಗಳಂತೆಯೇ ಇದು ಕಂಡುಬಂದಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಐಫೋನ್ ಕ್ಲೋನ್‌ಗಳ ಕುರಿತಾದ ಮಾಹಿತಿಯನ್ನು ನಾವು ನೀಡುತ್ತಿದ್ದು ಅವುಗಳ ವಿಶೇಷತೆಯನ್ನು ನೀವು ನೋಡಿ

ಓದಿರಿ: ಐಫೋನ್ ಟಿಪ್ಸ್: ನೀವೆಷ್ಟು ಜಾಣರು ಎಂಬುದನ್ನು ತಿಳಿದುಕೊಳ್ಳಿ

ಮೀಜು ಎಮ್3 ನೋಟ್

ಮೀಜು ಎಮ್3 ನೋಟ್

ಐಫೋನ್ 6ಎಸ್‌ನಂತೆಯೇ ಕಾಣುವ ಎಮ್ಐ 3 ನೋಟ್ ಕಂಪೆನಿಯ ಪ್ರೀಮಿಯರ್ ಫೋನ್‌ಗಳಲ್ಲಿ ಒಂದೆನಿಸಿದೆ. 1.8GHZ ಓಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ10 ಪ್ರೊಸೆಸರ್, ಮಾಲಿ T860mp2 ಜಿಪಿಯು ಮತ್ತು 3ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. 32 ಜಿಬಿ ವಿಸ್ತರಿಸಬಹುದಾದ ಆಂತರಿಕ ಮೆಮೊರಿಯನ್ನು ಡಿವೈಸ್ ಪಡೆದುಕೊಂಡಿದ್ದು ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. ಆಂಡ್ರಾಯ್ಡ್ 5.1 ಲಾಲಿಪಪ್ ಇದರಲ್ಲಿದೆ.

ಬ್ಲ್ಯಾಕ್‌ವ್ಯೂ ಅಲ್ಟ್ರಾ

ಬ್ಲ್ಯಾಕ್‌ವ್ಯೂ ಅಲ್ಟ್ರಾ

ಈ ಡಿವೈಸ್ 4.7 ಇಂಚಿನ ಎಚ್‌ಡಿ ಐಪಿಎಸ್ ಕ್ಯಾಪಸಿಟೀವ್ ಸ್ಕ್ರೀನ್ ಅನ್ನು ಹೊಂದಿದ್ದು, 1280x720 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. 1.3GHZ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಡ್ಯುಯಲ್ ಸಿಮ್ ಸ್ಲಾಟ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಆಂಡ್ರಾಯ್ಡ್ 4.4 ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ. ಆಂತರಿಕ ಸ್ಟೋರೇಜ್ 8ಜಿಬಿಯಾಗಿದೆ. ಎಸ್‌ಡಿ ಕಾರ್ಡ್ ಬಳಸಿ ಮೆಮೊರಿಯನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಫೋನ್ ಬೆಲೆ ರೂ 6,879 ಆಗಿದೆ.

ಸ್ಪೈಸ್ ಎಮ್ಐ - 549

ಸ್ಪೈಸ್ ಎಮ್ಐ - 549

ಸ್ಪೈಸ್ ಎಮ್ಐ - 549 ಡಿವೈಸ್, 5.5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು ರೆಸಲ್ಯೂಶನ್ 1920x1080 ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ. 1.3GHZ ಕ್ವಾಡ್ - ಕೋರ್ ಪ್ರೊಸೆಸರ್ ಅನ್ನು ಇದು ಹೊಂದಿದೆ. ಡ್ಯುಯಲ್ ಸಿಮ್ ಅನ್ನು ಫೋನ್ ಹೊಂದಿದ್ದು ಆಂಡ್ರಾಯ್ಡ್ 4.4 ಓಎಸ್ ಇದರಲ್ಲಿದೆ. 1ಜಿಬಿ RAM ಅನ್ನು ಫೋನ್ ಪಡೆದಿದ್ದು ಆಂತರಿಕ ಸ್ಟೋರೇಜ್ 8ಜಿಬಿಯಾಗಿದೆ. ಇದರ ಮೆಮೊರಿಯನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ರಿಯರ್ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಎಲ್ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. 1080 ಪ ಪೂರ್ಣ ಎಚ್‌ಡಿ ವೀಡಿಯೊಗಳನ್ನು ಇದು ರೆಕಾರ್ಡ್ ಮಾಡುತ್ತದೆ. ಮುಂಭಾಗ ಕ್ಯಾಮೆರಾ 2 ಎಮ್‌ಪಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಫೋನ್ ಬೆಲೆ ರೂ 7,999 ಆಗಿದೆ.

ಗೂಫೋನ್ ಐ6ಎಸ್ ಪ್ಲಸ್ MTK6572

ಗೂಫೋನ್ ಐ6ಎಸ್ ಪ್ಲಸ್ MTK6572

ಗೂಫೋನ್ ಐ6ಎಸ್ ಪ್ಲಸ್ ಬೆಲೆ 6,714 ಆಗಿದ್ದು 5.5 ಇಂಚಿನ ಪರದೆ ಮತ್ತು 854x480 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಆಂತರಿಕ ಮೆಮೊರಿ 8ಜಿಬಿಯಾಗಿದ್ದು RAM 512 ಎಮ್‌ಬಿಯಾಗಿದೆ. ಇದರ ಆಂತರಿಕ ಮೆಮೊರಿಯನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

ಕಿಫೋನ್ ಐ6 ಪ್ಲಸ್

ಕಿಫೋನ್ ಐ6 ಪ್ಲಸ್

10 ಕೆ ಬಜೆಟ್‌ನಲ್ಲಿ ರೂ 11,821 ಕ್ಕೆ ಈ ಡಿವೈಸ್ ಲಭ್ಯವಿದೆ. 1.3GHZ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 1ಜಿಬಿ RAM ಅನ್ನು ಬಳಕೆದಾರರಿಗೆ ನೀಡಲಿದೆ. 8ಜಿಬಿ ಆಂತರಿಕ ಮೆಮೊರಿಯನ್ನು ಇದು ಹೊಂದಿದೆ. ಆಂಡ್ರಾಯ್ಡ್ 4.2 ಓಎಸ್ ಇದರಲ್ಲಿ ಚಾಲನೆಗೊಳ್ಳುತ್ತಿದ್ದು ಐಓಎಸ್ 8.0 ಥೀಮ್ ಇದರಲ್ಲಿದೆ. 8 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ.

Best Mobiles in India

English summary
Here a few of the smartphones that are clones of the iPhone and are fairly priced in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X