Subscribe to Gizbot

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

Written By:

ಗ್ಲೋಬಲ್ ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ಲಿಇಕೊ ತನ್ನ ಮೊದಲ ದೀಪಾವಳಿ ವಿಶೇಷ ಮಾರಾಟಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಅಪಾರ ಖುಷಿಪಟ್ಟಿದೆ.

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಲಿಇಕೊ ದೀಪಾವಳಿಯ ಸಮಯದಲ್ಲಿ ಲಿಮಾಲ್.ಕಾಮ್, ಫ್ಲಿಪ್ ಕಾರ್ಟ್, ಅಮೆಜಾನ್ ಇಂಡಿಯಾ ಮತ್ತು ಸ್ನ್ಯಾಪ್ ಡೀಲ್ ಮೂಲಕ 2,00,000 ಸ್ಮಾರ್ಟ್ ಫೋನ್ಸ್, 1800 ಸೂಪರ್ ಟಿವಿ ಮತ್ತು ಐನೂರಕ್ಕೂ ಅಧಿಕ ಆಕ್ಸೆಸರಿಗಳನ್ನು ಮಾರಾಟ ಮಾಡಿದೆ, 200 ಕೋಟಿಗಿಂತಲೂ ಅಧಿಕ ವಹಿವಾಟಾಗಿದೆ.

ಓದಿರಿ: 2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಐದು ದಿನಗಳಲ್ಲಿ ಈ ಅಂತರ್ಜಾಲ ಪುಟಗಳಲ್ಲಿ 2,00,000 ಸ್ಮಾರ್ಟ್ ಫೋನ್ಸ್ ಮತ್ತು 1800 ಸೂಪರ್ ಟಿವಿಗಳನ್ನು ಮಾರಿದ್ದು ದಾಖಲೆಯಾಗಿದೆ. ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ದಿನಗಳ ವ್ಯಾಪಾರದಲ್ಲಿ ಲಿಇಕೊ ಹೆಚ್ಚು ಮಾರಾಟವಾದ ಜನಪ್ರಿಯ ಬ್ರ್ಯಾಂಡ್.

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಲಿಇಕೋದ ಲಿ2 ಜನಪ್ರಿಯತೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆಯುತ್ತಿದೆ, ಇದು ಫ್ಲಿಪ್ ಕಾರ್ಟ್ ನಲ್ಲಿ 10ರಿಂದ 12 ಸಾವಿರದವರೆಗಿನ ಫೋನುಗಳಲ್ಲೇ ಅತಿ ಹೆಚ್ಚು ಮಾರಾಟ ಕಾಣುತ್ತಿರುವ ಫೋನಾಗಿದೆ; 15ರಿಂದ 18 ಸಾವಿರ ಬೆಲೆಯ ಫೋನುಗಳಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಹೊಂದಿರುವ ಲಿಮ್ಯಾಕ್ಸ್ 2.

ಓದಿರಿ: 2017 ರಲ್ಲಿ ಲಾಂಚ್‌ ಆಗಬಹುದಾದ ಟಾಪ್‌ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿವು!

ಈ ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಸ್ಮಾರ್ಟ್ ಎಲೆಕ್ಟ್ರಾನಿಕ್ ಬ್ಯುಸಿನೆಸ್ಸಿನ ಸಿ.ಒ.ಒ ಅತುಲ್ ಜೈನ್ "ನಾವು ಭಾರತಕ್ಕೆ ಕಾಲಿಟ್ಟು ಒಂದು ವರ್ಷವೂ ಆಗಿಲ್ಲ. ಈಗಲೇ ಇಷ್ಟು ಗುರಿ ಮುಟ್ಟಿರುವುದು ದೊಡ್ಡ ಸಾಧನೆಯೇ ಹೌದು. ನಮ್ಮ ಗ್ರಾಹಕರ ಪ್ರತಿಕ್ರಿಯೆ ನಮ್ಮನ್ನು ವಿನೀತರನ್ನಾಗಿಸಿದೆ. ಇನ್ನೂ ಹೆಚ್ಚಿನ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಒದಗಿಸುವುದು ನಮ್ಮ ಮುಂದಿನ ಯೋಜನೆ.

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಉತ್ಪನ್ನಗಳ ಬದಲಾವಣೆ ಮತ್ತು ಕ್ಯಾಷ್ ಬ್ಯಾಕ್ ಕೊಡುಗೆಗಳು ಗ್ರಾಹಕರನ್ನು ಸೆಳೆಯುವುದೇನೋ ದಿಟ ಆದರೆ ಕೊನೆಗೆ ಭಾರತೀಯ ಗ್ರಾಹಕ ಮಾರು ಹೋಗುವುದು ವಸ್ತುವೊಂದರ ಗುಣಮಟ್ಟಕ್ಕೆ ಮಾತ್ರ, ಮತ್ತು ಅದರ ಗುಣಮಟ್ಟಕ್ಕೆ ತಕ್ಕ ಬೆಲೆ ಇದೆಯೇ ಎನ್ನುವುದರ ಆಧಾರದ ಮೇಲೆ.

ಈ ಕೊಳ್ಳುವ ಭರಾಟೆಯಲ್ಲಿ ಲಿಇಕೊದ ಸ್ಮಾರ್ಟ್ ಫೋನುಗಳು ಅತಿ ಹೆಚ್ಚು ಮಾರಾಟ ಕಂಡಿದ್ದು ಹೆಮ್ಮೆಯ ವಿಷಯವೇ" ಎಂದಿದ್ದಾರೆ.

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಹಬ್ಬದ ಕೊಡುಗೆಗಳ ಪ್ರಯುಕ್ತ ಲಿಇಕೊ ತನ್ನ ಸ್ಮಾರ್ಟ್ ಫೋನ್ ಮತ್ತು ಸೂಪರ್ ಟಿವಿಗಳ ಮೇಲೆ ಅತ್ಯಾಕರ್ಷಕ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದ್ದು ಹೆಚ್ಚಿನ ಜನರನ್ನು ಸೆಳೆಯಿತು. ಈ ಸ್ಮಾರ್ಟ್ ಫೋನುಗಳು ಮತ್ತು ಸೂಪರ್ ಟಿವಿಗಳು ಲಿಮಾಲ್.ಕಾಂನಲ್ಲೂ ಇದೇ ಅವಧಿಯಲ್ಲಿ ಲಭ್ಯವಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಸೂಪರ್ ಫೋನ್ ವಿಭಾಗದಲ್ಲಿ ಲಿಇಕೋದ ಎರಡನೇ ತಲೆಮಾರಿನ ಫೋನ್ ಲಿ2 ಮತ್ತು ಬ್ಲಾಕ್ ಬಸ್ಟರ್ ಸೂಪರ್ ಫೋನ್ ಲಿ1ಎಸ್ಇಕೊ ಹೆಚ್ಚು ಮಾರಾಟ ಕಂಡವು. ಲಿಇಕೋ ಇತ್ತೀಚೆಗೆ ಸೂಪರ್ 3ಎಕ್ಸ್55 ಟಿವಿಯನ್ನು ಹೊರತಂದಿತ್ತು, ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಇದಕ್ಕೆ ಮುಖ್ಯ ಕಾರಣವೆಂದರೆ ಲಿಇಕೋದ ಸೂಪರ್ ಫೋನ್ ಮತ್ತು ಸೂಪರ್ ಟಿವಿಗಳ ಜೊತೆಗೆ ಲಿಇಕೊ ಮೆಂಬರ್ಶಿಪ್ ಕೆಲವು ವರುಷಗಳವರೆಗೆ ಉಚಿತವಾಗಿ ದೊರೆಯುತ್ತದೆ.

ದೀಪಾವಳಿಯ ಸಮಯದಲ್ಲಿ 200 ಕೋಟಿ ವ್ಯಾಪಾರ ಮಾಡಿ ದಾಖಲೆ ನಿರ್ಮಿಸಿದ ಲಿಇಕೊ.

ಲಿಇಕೊ ಭಾರತದಲ್ಲಿ ಉತ್ತಮ ಹೆಸರನ್ನು ಮಾಡಿದೆ, ಉತ್ತಮ ತಂತ್ರಜ್ಞಾನವನ್ನು ತಂದಿದೆ ಮಾರುಕಟ್ಟೆಯಲ್ಲಿ ಹೆಸರು ಮಾಡಿಕೊಂಡಿದೆ.

ಭಾರತದ ಗ್ರಾಹಕರನ್ನು ತಲುಪಲು ಲಿಇಕೊ ಇನ್ನು ಮುಂದಿನ ದಿನಗಳಲ್ಲಿ ಕಂಡುಕೊಳ್ಳುವ ಹೊಸ ಮಾರ್ಗಗಳು ನಿರೀಕ್ಷೆ ಮೂಡಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Global internet and technology conglomerate, LeEco is jubilant at the response it has received for its first ever participation in the popular pre-Diwali sales by leading e-commerce platforms.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot