ವಿಂಡೋಸ್ 8.1 ಮತ್ತು ಆ್ಯಂಡ್ರಾಯ್ಡ್ 4.0.3 ಫೋನುಗಳಲ್ಲಿ ಇನ್ನು ಮುಂದೆ ಸ್ಕೈಪ್ ಇರುವುದಿಲ್ಲ.
ಮುಂದಿನ ವರುಷದ ಪ್ರಾರಂಭದಲ್ಲಿ ವಿಂಡೋಸ್ 8 ಮತ್ತು ವಿಂಡೋಸ್ 8.1 ಫೋನುಗಳಿಗೆ ಸ್ಕೈಪ್ ಸೇವೆಯನ್ನು ನೀಡದಿರಲು ಮೈಕ್ರೋಸಾಫ್ಟ್ ಯೋಚಿಸುತ್ತಿದೆ. ಕಳೆದ ತಿಂಗಳಲ್ಲಿ ಮೈಕ್ರೋಸಾಫ್ಟ್ ಈ ಸುದ್ದಿಯನ್ನು ತಿಳಿಸಿತ್ತು. ಆಗ ಕಂಪನಿಯವರು, ಅಕ್ಟೋಬರ್ ತಿಂಗಳಿನಿಂದ ವಿಂಡೋಸ್ 8 ಮತ್ತು ವಿಂಡೋಸ್ 8.1 ಬಳಕೆದಾರರು ಸ್ಕೈಪ್ ಉಪಯೋಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಹಾಗಾಗ್ಯೂ, ಕಂಪನಿಯು ಈ ನಿರ್ಧಾರವನ್ನು ಈಗ ಮರುಪರಿಶೀಲಿಸುತ್ತಿದೆ ಮತ್ತು ಸ್ಕೈಪ್ ನ ಬಳಕೆಯನ್ನು 2017ರ ಮೊದಲಿನವರೆಗೆ ಮುಂದುವರೆಸಲು ನಿರ್ಧರಿಸಿದೆ. ಈಗ, ಕೇವಲ 20 ಪ್ರತಿಶತಃದಷ್ಟು ವಿಂಡೋಸ್ ಸ್ಮಾರ್ಟ್ ಫೋನ್ ಬಳಕೆದಾರರು ಮಾತ್ರ ವಿಂಡೋಸ್ 10 ಬಳಸುತ್ತಿದ್ದಾರೆ, ಅದರರ್ಥ 80 ಪರ್ಸೆಂಟ್ ಬಳಕೆದಾರರು ಸ್ಕೈಪ್ ಉಪಯೋಗಿಸಲು ಸಾಧ್ಯವಿಲ್ಲ.
ಓದಿರಿ: ಪ್ರಪಂಚದಲ್ಲೇ ಮೊಟ್ಟ ಮೊದಲ 'ಹ್ಯಾಕ್ ಪ್ರೂಫ್' ಸಂವಹನ ಉಪಗ್ರಹ ಚೀನಾದಿಂದ!
ವಿಂಡೋಸ್ 8 ಮತ್ತು ವಿಂಡೋಸ್ 8.1 ಫೋನುಗಳ ಜೊತೆಗೆ ಕಂಪನಿಯು ಸ್ಕೈಪ್ ಸೇವೆಯನ್ನು ಆ್ಯಂಡ್ರಾಯ್ಡ್ 4.0.3 ಫೋನುಗಳಿಗೂ ಸ್ಥಗಿತಗೊಳಿಸಲಿದೆ. ಈ ಪಟ್ಟಿಗೆ ವಿಂಡೋಸ್ ಆರ್.ಟಿ ಕೂಡ ಸೇರಿದೆ.
ಓದಿರಿ: ಫೇಸ್‌ಬುಕ್ ಟೈಮ್‌ಲೈನ್‌ನಿಂದ ಹಳೆಯ ಪೋಸ್ಟ್ ಅಳಿಸುವುದು ಹೇಗೆ?
ಮೈಕ್ರೋಸಾಫ್ಟ್ ಸ್ಕೈಪ್ ಪಿ2ಪಿ ಅನ್ನು ಕ್ಲೌಡ್ ಗೆ ವರ್ಗಾಯಿಸುತ್ತಿದೆ ಮತ್ತು ಆ್ಯಪ್ ನ ಫೀಚರ್ರುಗಳಾದ ಫೈಲ್ ಹಂಚುವಿಕೆ, ಕಾಲ್ ಗುಣಮಟ್ಟ, ವೀಡಿಯೋ ಮೆಸೇಜುಗಳ ಗುಣಮಟ್ಟವನ್ನು ಮತ್ತಷ್ಟು ಉತ್ತಮಪಡಿಸುವ ಹಾದಿಯಲ್ಲಿದೆ. ಈ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ಕಾರಣ ಮಾರುಕಟ್ಟೆಯಲ್ಲಿ ವಿಂಡೋಸ್ ಫೋನುಗಳ ಸಂಖೈ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ, ಹೀಗಾಗಿ ವಿಂಡೋಸ್ ಫೋನ್ 8.1 ಮತ್ತು ವಿಂಡೋಸ್ ಫೋನ್ 8ಗೆ ಬೆಂಬಲ ನೀಡುವುದರಿಂದ ಯಾವುದೇ ಉಪಯೋಗವಿಲ್ಲ.
ಓದಿರಿ: ಒಪ್ಪೋ F1s ಸ್ಮಾರ್ಟ್ ಫೋನಿನಲ್ಲಿ ಈ 8 ಸಲಹೆಗಳನ್ನು ಉಪಯೋಗಿಸಿ
ಮೈಕ್ರೋಸಾಫ್ಟಿನ ಈ ನಿರ್ಧಾರಕ್ಕೆ ನಿಮ್ಮ ಬೆಂಬಲವಿದೆಯೇ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟಿನಲ್ಲಿ ತಿಳಿಸಿ.


Click it and Unblock the Notifications








