ನೋಕಿಯಾ ಹೊಸ ಸ್ಮಾರ್ಟ್‌ಪೋನು 'ಹಾರ್ಟ್' ಹೇಗಿದೆ..?

|

ನೋಕಿಯಾ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡುತ್ತಿದ್ದು, ಒಂದೊಂದಾಗಿ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡುತ್ತಿದೆ, ಮೊನ್ನೆ ತಾನೇ ಚೀನಾ ಮಾರುಕಟ್ಟೆಗೆ ಮೊದಲನೇಯದಾಗಿ ನೋಕಿಯಾ 6 ಸ್ಮಾರ್ಟ್‌ಪೋನನ್ನು ಪರಿಚಯಿಸಿತ್ತು. ಈಗ ನೋಕಿಯಾ 8 ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಬಿಡುವ ಚಿಂತನೆಯಲ್ಲಿದೆ. ಇದರ ಬೆನ್ನಹಿಂದಯೇ ನೋಕಿಯಾ 'ಹಾರ್ಟ್‌' ಎಂಬ ಸ್ಮಾರ್ಟ್‌ಪೋನನ್ನು ರೆಡಿ ಮಾಡಿಕೊಂಡಿದೆ.

ನೋಕಿಯಾ ಹೊಸ ಸ್ಮಾರ್ಟ್‌ಪೋನು 'ಹಾರ್ಟ್' ಹೇಗಿದೆ..?

ಓದಿರಿ..: ರೆಡ್‌ಮಿ ನೋಟ್ 4 ಸೋಲ್ಡ್ ಔಟ್..! ಇಲ್ಲಿದೆ ನೋಡಿ ಬೇರೆ ಫೋನುಗಳು..!

ಮತ್ತೆ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿರುವ ವರ್ಷದಲ್ಲದೇ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನು, ಫೀಚರ್ ಪೋನುಗಳು ಹಾಗೂ ಟಾಬ್ಲೆಟ್‌ಗಳನನ್ನು ನೋಕಿಯಾ ಬಿಡುಗಡೆ ಮಾಡಲಿದೆ ಎನ್ನುವ ವಿಚಾರ ಈಗಾಗಲೇ ತಿಳಿದಿದ್ದು, ಇದೇ ಹಿನ್ನಲೆಯಲ್ಲಿ ಸದ್ಯ ನೋಕಿಯಾ 'ಹಾರ್ಟ್' ಸಖತ್ ಸದ್ದು ಮಾಡುತ್ತಿದೆ.

ಎಂಡಬ್ಲೂಸಿ ಶೋನಲ್ಲಿ ಈ ಸ್ಮಾರ್ಟ್‌ಪೋನು ಪ್ರದರ್ಶನಗೊಳ್ಳಲಿದ್ದು, ಈ ಹಾರ್ಟ್‌ ಎಂಟ್ರಿ ಲೆವೆಲ್ ಸ್ಮಾರ್ಟ್‌ಪೋನಾಗಿದೆ. ಇದು ಸಹ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, 5.2 ಇಂಚಿನ ಪರದೆಯನ್ನು ಹೊಂದಿದೆ. 1.4 GHz ವೇಗದ ಆಕ್ಟಾಕೋರ್ ಪ್ರೋಸರ್ ಈ ಪೋನಿನಲ್ಲಿದೆ. 2GB RAM ಈ ಪೋನಿನಲ್ಲಿದ್ದು, 9GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಹಿಂಭಾಗದಲ್ಲಿ 12MP ಕ್ಯಾಮೆರಾ ಹೊಂದಿದ್ದು, ಮುಂಭಾಗದಲ್ಲಿ 7MP ಕ್ಯಾಮೆರಾ ಈ ಪೋನಿನಲ್ಲಿದೆ.

ನೋಕಿಯಾ ಹೊಸ ಸ್ಮಾರ್ಟ್‌ಪೋನು 'ಹಾರ್ಟ್' ಹೇಗಿದೆ..?

ಓದಿರಿ..: ವಿವೋ ವಿ5 ಪ್ಲೆಸ್: ಹಿಂಭಾಗದಲ್ಲಿ 20 MP, ಮುಂಭಾಗದ ಡುಯಲ್ ಸೆಲ್ಫಿ ಕ್ಯಾಮೆರಾ

ಒಟ್ಟಿನಲ್ಲಿ ಎಲ್ಲಾ ಮಾದರಿಯ ಸ್ಮಾರ್ಟ್‌ಪೋನುಗಳನನ್ನು ಪರಿಚಯಿಸುವ ಮೂಲಕ ನೋಕಿಯಾ ಎಲ್ಲಾ ವರ್ಗದ ಗ್ರಾಹಕರನನ್ನು ಆರಂಭದಲ್ಲಿಯೇ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಈ ಪ್ರಯತ್ನದಲ್ಲಿ ಯಶಸ್ವಿಯಾಗಿ ಮತ್ತೆ ಮೊಬೈಲ್ ಲೋಕದಲ್ಲಿ ರಾಜನಾಗಿ ಮೆರೆಯಲಿದೆಯೇ ಎಂಬುದನ್ನು ಕಾದು ನೋಡಬೇಕು.

Best Mobiles in India

Read more about:
English summary
Unless you’ve been living under a rock, you’d be aware of the fact that Nokia, the Finnish company, is making a comeback of sorts to the smartphone industry. to knoe more visit kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X