ದೊಡ್ಡ ಫೋನ್ ಬೇಡ ಎನ್ನುವವರಿಗಾಗಿಯೇ ವಿಶ್ವದ ಅತೀ ಸಣ್ಣ ನ್ಯಾನೋ ಫೋನ್..!

Written By:

ಭಾರತೀಯ ಮೊಬೈಲ್ ಮಾರುಕಟ್ಟೆ ಬಹಳ ವಿಸ್ತಾರವಾಗಿದ್ದು, ಇದು ವಿಶ್ವದ ಸ್ಮಾರ್ಟ್‌ಫೋನ್ ತಯಾರಕರಿಗೆ ಲಾಭವನ್ನು ಮಾಡಿಕೊಡುತ್ತಿದೆ. ಇದೇ ಹಿನ್ನಲೆಯಲ್ಲಿ ಅನೇಕ ಕಂಪನಿಗಳು ಭಾರತದಲ್ಲಿ ತಮ್ಮ ಫೋನ್ ಗಳನ್ನು ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲದೇ ಇಲ್ಲಯೇ ಪ್ಲಾಂಟ್ ಗಳನ್ನು ತೆರೆಯುತ್ತಿದ್ದಾರೆ. ಇದೇ ಸಾಲಿಗೆ ಸೇರಲಿದೆ ಇಲಾರಿ ಕಂಪನಿ.

ದೊಡ್ಡ ಫೋನ್ ಬೇಡ ಎನ್ನುವವರಿಗಾಗಿಯೇ ವಿಶ್ವದ ಅತೀ ಸಣ್ಣ ನ್ಯಾನೋ ಫೋನ್..!

ಓದಿರಿ: ಶೀಘ್ರವೇ ಕಾರ್ಯಾರಂಭಿಸಲಿದೆ HDK ಕ್ಯಾಬ್ಸ್: ಇಲ್ಲಿದೇ ನಿಮಗೆ ಗೊತ್ತಿಲ್ಲದ ಮಾಹಿತಿ..!!!

ಈ ಕಂಪನಿಯೂ ವಿಶ್ವದ ಅತೀ ಸಣ್ಣ ಫೋನ್ ನ್ಯಾನೋ ಫೋನ್ C ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಆನ್‌ಲೈನ್‌ನಲ್ಲಿ ಮಾತ್ರವೇ ಈ ಫೋನ್ ದೊರೆಯುತ್ತಿದ್ದು, Yerha.com ಈ ಫೋನ್ ಅನ್ನು ಸೇಲ್ ಮಾಡುತ್ತಿದೆ. ಇರ ಬೆಲೆ ರೂ.3,940 ಗಳಾಗಿದ್ದು, ನೋಡಲು ಸುಂದರವಾಗಿದ್ದು, ಬಳಕೆ ಮಾಡಿದರೆ ಹೊಸ ಅನುಭವನ್ನು ನೀಡಲಿದೆ.

ಓದಿರಿ: ಜಿಯೋ ಗ್ರಾಹಕರೇ ಗೊಂದಲ ಬೇಡ: ರೂ.399ರ ಪ್ಲಾನ್ ಬೆಸ್ಟ್..!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ಬಣ್ಣದಲ್ಲಿ ಲಭ್ಯ:

ಮೂರು ಬಣ್ಣದಲ್ಲಿ ಲಭ್ಯ:

ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳು ದೊಡ್ಡ ಪರದೆಯ ದೊಡ್ಡ ಸ್ಮಾರ್ಟ್‌ಫೋನ್ ಗಳನ್ನು ಬಳಕೆದಾರರ ಕೈಗೆ ನೀಡಿದರೆ ಇಲಾರಿ ಸಣ್ಣ ಫೋನ್ ಅನ್ನು ಬಿಡುಗಡೆ ಮಾಡಿದೆ. ಬ್ಲಾಕ್, ರೋಸ್ ಗೋಲ್ಡ್, ಸಿಲ್ವರ್ ಬಣ್ಣದಲ್ಲಿ ಈ ಫೋನ್ ದೊರೆಯಲಿದೆ.

ಒಂದು ಇಂಚಿನ ಡಿಸ್ ಪ್ಲೇ..!

ಒಂದು ಇಂಚಿನ ಡಿಸ್ ಪ್ಲೇ..!

ಸುಮಾರು 30 ಗ್ರಾಂ ತೂಕದ ಈ ನ್ಯಾನೋ ಫೋನ್, ಕೇವಲ ಒಂದು ಇಂಚಿನ ಪರದೆಯನ್ನು ಹೊಂದಿದೆ ಅಷ್ಟೆ. ಇದು 128x96 ಪಿಕ್ಸಲ್ TFT ಡಿಸ್‌ಪ್ಲೇಯಾಗಿದೆ. ಇದರಲ್ಲಿ ಮೀಡಿಯಾ ಟೆಕ್ ಚಿಪ್ ಸೆಟ್ ಕಾಣಬಹುದಾಗಿದೆ.

SD ಕಾರ್ಡ್ ಹಾಕುವ ಅವಕಾಶ:

SD ಕಾರ್ಡ್ ಹಾಕುವ ಅವಕಾಶ:

ಅಲ್ಲದೇ 32 MB RAM ಇದರಲ್ಲಿದ್ದು ಜೊತೆಗೆ 32MB ಇಂಟರನಲ್ ಮೆಮೊರಿಯೂ ಇದೆ. ನಿಮಗೆ ಹೆಚ್ಚಿನ ಮೆಮೊರಿ ಅವಶ್ಯವಿದ್ದಲ್ಲಿ SD ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಡ್ಯುಯಲ್ ಸಿಮ್:

ಡ್ಯುಯಲ್ ಸಿಮ್:

ಡ್ಯುಯಲ್ ಮೈಕ್ರೋ ಸಿಮ್ ಅನ್ನು ಈ ಫೋನಿನಲ್ಲಿ ಹಾಕುವ ಅವಕಾಶವಿದೆ. ಈ ಫೋನು ಒಂದು ಚಾರ್ಜ್ ನಲ್ಲಿ ನಾಲ್ಕು ದಿನಗಳ ಕಾಲ ಕಾರ್ಯನಿರ್ವಹಿಸಲಿದ್ದು, ಇದಕ್ಕಾಘಿ 280mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

MP3 ಪ್ಲೇಯರ್ ಇದೆ:

MP3 ಪ್ಲೇಯರ್ ಇದೆ:

ಇದಲ್ಲದೇ ಈ ಸಣ್ಣ ಫೋನಿನಲ್ಲಿ MP3 ಪ್ಲೇಯರ್, FM ರೇಡಿಯೋವನ್ನು ನೀಡಲಾಗಿದೆ. ಅಲ್ಲದೇ ವಾಯ್ಸ್ ರೆಕಾರ್ಡಿಂಗ್ ಅವಕಾಶವೂ ಇದೆ. ಅಲ್ಲದೇ ಇರಯ್ ಫೋನ್ ಕನೆಕ್ಟ್ ಮಾಡಬಹುದಾಗಿದೆ. ಮೈಕ್ರೋ USB ಪೋರ್ಟ್ ಸಹ ಇದರಲ್ಲಿದೆ.

ಆಂಡ್ರಾಯ್ಡ್ ಮತ್ತು ಐಎಸ್‌ಓ ಕನೆಕ್ಟ್ ಮಾಡಬಹುದು:

ಆಂಡ್ರಾಯ್ಡ್ ಮತ್ತು ಐಎಸ್‌ಓ ಕನೆಕ್ಟ್ ಮಾಡಬಹುದು:

ಬ್ಲೂಟೂತ್ ಕನೆಕ್ಟಿವಿಟಿ ಸಹ ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು ಐಎಸ್‌ಓ ಫೋನ್ ಗಳೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದು.

ಪ್ರಾಂಕ್ ಕರೆ ಮಾಡಬಹುದು:

ಪ್ರಾಂಕ್ ಕರೆ ಮಾಡಬಹುದು:

ಅಲ್ಲದೇ ಸ್ಮಾರ್ಟ್‌ಫೋನಿಗೆ ಬರುವ ಕರೆಗಳನ್ನು ಈ ಫೋನಿನಲ್ಲಿಯೇ ರಿಸಿವ್ ಮಾಡುವ ಅವಕಾಶವು ಇದೆ. ಇದರಲ್ಲಿ ಬಳಕೆದಾರು ಪ್ರಾಂಕ್ ಕಾಲ್ ಮಾಡುವ ಸಲುವಾಗಿ ವಾಯ್ಸ್ ಮಾಡುಲೆಷನ್ ಅವಕಾಶವು ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
E-commerce site Yerha.com on Thursday announced the launch of what is claimed to be the 'smallest phone in the world' - the Elari NanoPhone C. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot