ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

|

ಆ್ಯಪಲ್ ಇತ್ತೀಚೆಗೆ ತನ್ನ ಫ್ಲಾಗ್ ಶಿಪ್ ಫೋನುಗಳಾದ ಐಫೋನ್ 7 ಮತ್ತು 7 ಪ್ಲಸ್ ಅನ್ನು ಬಿಡುಗಡೆಗೊಳಿಸಿತು. ಎರಡೂ ಫೋನುಗಳನ್ನು ಫ್ಲಿಪ್ ಕಾರ್ಟ್ ಮೂಲಕ ಪ್ರಿ ಆರ್ಡರ್ ಮಾಡಬಹುದು.

ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

ಹೊಸ ಫೋನುಗಳು ವಿಶ್ಲೇಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ, 3.5 ಎಂಎಂ ಹೆಡ್ ಫೋನ್ ಪೋರ್ಟ್ ಇಲ್ಲದಿರುವುದು ಅಷ್ಟು ಮೆಚ್ಚುಗೆಯಾಗಿಲ್ಲ. 3.5 ಎಂಎಂ ಪೋರ್ಟ್ ಬದಲಿಗೆ ಲೈಟ್ನಿಂಗ್ ಪೋರ್ಟ್ ನೀಡುವುದರಿಂದ ಆಡಿಯೋದ ಗುಣಮಟ್ಟ ಹೆಚ್ಚಾಗುತ್ತದೆ ಮತ್ತು ನಿಸ್ತಂತು ತಂತ್ರಜ್ಞಾನ ಹೆಚ್ಚಾಗುತ್ತದೆ ಎನ್ನುವುದು ಆ್ಯಪಲ್ ನಂಬಿಕೆ.

ಓದಿರಿ: ಫೆಸ್ಟೀವ್‌ ಸೀಸನ್‌ನಲ್ಲಿ 'ಪವರ್‌ ಬ್ಯಾಂಕ್‌' ಖರೀದಿಸುವವರಿಗೆ ಡಬಲ್‌ ದಮಾಕಾ!

2012ರಲ್ಲಿ ಆ್ಯಪಲ್ ಕಂಪನಿಯು ರಿವರ್ಸಿಬಲ್ ಪ್ಲಗ್ ಅನ್ನು ಮೊದಲು ನೀಡಿತ್ತು. ಆಗದು 30 ಪಿನ್ನಿನ ಕನೆಕ್ಟರ್ ಬದಲಿಗೆ 8 ಪಿನ್ನಿನ ಲೈಟ್ನಿಂಗ್ ಕನೆಕ್ಟರ್ ನೀಡಿತ್ತು.

ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

ಯು.ಎಸ್.ಬಿ ಇತ್ತೀಚೆಗೆ ಬಿಡುಗಡೆಗೊಳಿಸಿದ ಟೈಪ್ ಸಿಯಲ್ಲಿ ಇದನ್ನು ಸಾಧಿಸಿದೆ. ಯು.ಎಸ್.ಬಿ ಟೈಪ್ ಸಿ ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲವಾದರೂ, ಬಹುತೇಕ ಫ್ಲಾಗ್ ಶಿಪ್ ಸ್ಮಾರ್ಟ್ ಫೋನುಗಳು ಯು.ಎಸ್.ಬಿ ಟೈಪ್ ಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳಲ್ಲಿ ಯು.ಎಸ್.ಬಿ ಟೈಪ್ ಸಿ ಇರಲಿದೆ.

ಓದಿರಿ: ಏರ್‌ಟೆಲ್ ಡಾಂಗಲ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಬಳಸುವುದು ಹೇಗೆ?

ಈ ಲೇಖನದಲ್ಲಿ ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಲೈಟ್ನಿಂಗ್ ಕನೆಕ್ಟರ್ ನಡುವಿನ ವ್ಯತ್ಯಾಸ ಮತ್ತು ಸಾಮ್ಯತೆಗಳನ್ನು ಪಟ್ಟಿ ಮಾಡಿದ್ದೀವಿ; ಅದು ಗ್ರಾಹಕರ ಅಂದರೆ ನಿಮ್ಮ ಮೇಲೆ ಬೀರುವ ಪರಿಣಾಮವೇನು ಎನ್ನುವುದನ್ನೂ ತಿಳಿಸಿದ್ದೀವಿ.

ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

ಹೇಗೆ ಬೇಕಾದರೂ ಸಿಕ್ಕಿಸಿ!

ಎರಡೂ ಕನೆಕ್ಟರುಗಳನ್ನು ಸ್ಮಾರ್ಟ್ ಫೋನಿಗೆ ಯಾವುದೇ ರೀತಿಯಲ್ಲಾದರೂ ಪ್ಲಗ್ ಮಾಡಬಹುದು. ಮೈಕ್ರೋ ಯು.ಎಸ್.ಬಿ ಯಲ್ಲಿ ಒಂದೇ ದಿಕ್ಕಿನಲ್ಲಿ ಮಾತ್ರ ಹಾಕುವುದು ಸಾಧ್ಯವಿತ್ತು.

ಓದಿರಿ: ಅಕ್ಟೋಬರ್ 5ಕ್ಕೆ ಬಿಡುಗಡೆಯಾಗಲಿರುವ ಹಾನರ್ 8ರ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು.

ವಿವಿಧ ಸ್ಮಾರ್ಟ್ ಫೋನ್ ತಯಾರಕರು ವಿವಿಧ ಕಡೆ ಪೋರ್ಟ್ ಇಟ್ಟಿರುತ್ತಾರೆ, ಹಾಕುವ ರೀತಿಯ ಬೇರೆ ಬೇರೆಯಿರುತ್ತಿತ್ತು. ಒಂದೇ ಸ್ಮಾರ್ಟ್ ಫೋನ್ ಉಪಯೋಗಿಸುವವರು ಇದನ್ನು ಗಮನಿಸದೇ ಇರಬಹುದು, ತನ್ನ ಸಾಧನವನ್ನು ಪದೇ ಪದೇ ಅಪ್ ಡೇಟ್ ಮಾಡಿಕೊಳ್ಳುವವರಿಗೆ ಇದು ಖಂಡಿತಾ ಗೊತ್ತಿರುತ್ತದೆ.

ಯು.ಎಸ್.ಬಿ ಟೈಪ್ ಸಿಯ ಪರಿಚಯದೊಂದಿಗೆ ಇನ್ನು ಈ ಸಮಸ್ಯೆಯಿಲ್ಲ. ಈ ಸಣ್ಣಪುಟ್ಟ ಬದಲಾವಣೆಗಳು ಒಟ್ಟಾರೆ ಅನುಭವವನ್ನು ನಿರ್ಧರಿಸುತ್ತವೆ ಎಂದು ನಮ್ಮ ನಂಬಿಕೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

ವಿನ್ಯಾಸ ಮತ್ತು ಬಾಳಿಕೆ.

ಯಾವ ದಿಕ್ಕಿನಿಂದಾದರೂ ಸಿಕ್ಕಿಸಬಹುದು ಎನ್ನುವುದರ ಜೊತೆಗೆ, ಎರಡೂ ಹೇಗೆ ನಿಮ್ಮ ಸ್ಮಾರ್ಟ್ ಫೋನಿನೊಡನೆ ಸಂಪರ್ಕ ಕಲ್ಪಿಸಿಕೊಳ್ಳುತ್ತದೆ ಎನ್ನುವುದರಲ್ಲಿ ವ್ಯತ್ಯಾಸವಿದೆ.

ಯು.ಎಸ್.ಬಿ ಟೈಪ್ ಸಿ, ನಿಮ್ಮ ಫೋನಿನ ಪೋರ್ಟಿನಲ್ಲಿರುವ ಪಿನ್ನುಗಳೊಡನೆ ಸಂಪರ್ಕವೇರ್ಪಡಿಸಿಕೊಂಡರೆ ಲೈಟ್ನಿಂಗ್ ಕನೆಕ್ಟರಿನಲ್ಲೇ ಪಿನ್ನುಗಳಿವೆ. ಎರಡೂ ವಿನ್ಯಾಸಗಳಿಗೆ ತನ್ನದೇ ಆದಂತಹ ಅನುಕೂಲ - ಅನಾನುಕೂಲತೆಗಳಿವೆ.

ಬಾಳಿಕೆಯ ವಿಷಯಕ್ಕೆ ಬಂದರೆ ಆ್ಯಪಲ್ಲಿನ ಲೈಟ್ನಿಂಗ್ ಕನೆಕ್ಟರ್ ಭಯಂಕರ! ಹೌದು ಭಯಂಕರ! ತಮ್ಮ ಕೇಬಲ್ಲುಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಆ್ಯಪಲ್ ಗಮನ ಕೊಡಬೇಕು. ಯು.ಎಸ್.ಬಿ ಟೈಪ್ ಸಿ ಕೇಬಲ್ಲುಗಳು ಉತ್ತಮ ಗುಣಮಟ್ಟದೊಂದಿಗೆ ಬರುತ್ತದೆ, ತಯಾರಕರ ಮೇಲೆ ವ್ಯತ್ಯಾಸವಾಗುತ್ತದೆ.

ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

ಅನುಕೂಲ ಮತ್ತು ಅನಾನುಕೂಲ.

ಯು.ಎಸ್.ಬಿ ಟೈಪ್ ಸಿ ಕೇಬಲ್ಲುಗಳಲ್ಲಿರುವ ಪಿನ್ ಮತ್ತು ಕನೆಕ್ಟರುಗಳನ್ನು ರಕ್ಷಿಸುತ್ತದೆ, ಆದರೆ ಸ್ವಲ್ಪ ದೊಡ್ಡ ಕನೆಕ್ಟರ್ ಇದ್ದಾಗ, ನಿಮ್ಮ ಸ್ಮಾರ್ಟ್ ಫೋನುಗಳೊಳಗಿನ ಪಿನ್ನುಗಳಿಗೆ ಹಾನಿಯಾಗಬಹುದು. ಆದರೆ ಇದು ಅಪರೂಪಕ್ಕೆ ನೀವು ತುಂಬ ಒತ್ತಡ ಹಾಕಿದರೆ ಮಾತ್ರ ಆಗುತ್ತದೆ.

ಮತ್ತೊಂದೆಡೆ ಲೈಟ್ನಿಂಗ್ ಕೇಬಲ್ಲುಗಳಲ್ಲಿ ಪಿನ್ನುಗಳು ಹೊರಗಡೆ ಇರುತ್ತದೆ, ಬೇಗ ಹಾನಿಗೊಳಗಾಗುತ್ತದೆ, ಧೂಳು ಹಿಡಿಯುತ್ತದೆ.

ಯು.ಎಸ್.ಬಿ ಟೈಪ್ ಸಿ ಮತ್ತು ಆ್ಯಪಲ್ ಎಸ್ ಕನೆಕ್ಟರ್ ನಡುವಿನ ವ್ಯತ್ಯಾಸಗಳು.

ಯು.ಎಸ್.ಬಿ ಟೈಪ್ ಸಿ ಹೆಚ್ಚು ಶಕ್ತಿದಾಯಕ.

ಯು.ಎಸ್.ಬಿ ಟೈಪ್ ಸಿ ನೂರು ವ್ಯಾಟ್ ವರೆಗಿನ (20 ವೋಲ್ಟ್ ಕರೆಂಟ್ ಮತ್ತು 5 ಆ್ಯಂಪೀರ್ ವರೆಗಿನ ಕರೆಂಟ್) ಬೆಂಬಲ ನೀಡುತ್ತದೆ. ಸದ್ಯ ಲಭ್ಯವಿರುವ ಚಾರ್ಜರ್ರುಗಳು 5 ಅಥವಾ ವ್ಯಾಟ್ (5 ವೋಲ್ಟ್ ಮತ್ತು 1/2 ಆ್ಯಂಪೀರ್ ಕರೆಂಟ್) ಅನ್ನು ಮಾತ್ರ ಬೆಂಬಲಿಸುತ್ತದೆ.

ಯು.ಎಸ್.ಬಿ ಟೈಪ್ ಸಿ ಚಾರ್ಜರುಗಳನ್ನು ಉಪಯೋಸಿಕೊಂಡು ಲ್ಯಾಪ್ ಟಾಪ್ ಗಳನ್ನೂ ಚಾರ್ಜ್ ಮಾಡಿಕೊಳ್ಳಬಹುದು. ಆ್ಯಪಲ್ ಮ್ಯಾಕ್ ಬುಕ್ ನೆನಪಾಯ್ತಲ್ಲ?

ಜೊತೆಗೆ ಟೈಪ್ ಸಿ ಕೇಬಲ್ಲುಗಳ ಮೂಲಕ ಸೆಕೆಂಡಿಗೆ ಹತ್ತು ಜಿಬಿಯಷ್ಟು ಡೇಟಾ ವರ್ಗಾಯಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Apple recently launched its latest iteration of flagships, the iPhone 7 and 7 Plus. Both of them will be available for pre-orders starting from tonight on Flipkart.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X