Subscribe to Gizbot

ಏರ್‌ಟೆಲ್‌ ಡಾಟಾ ರೀಚಾರ್ಜ್‌ ಈಗ ಹಿಂದಿಗಿಂತ ಅರ್ಧ ಬೆಲೆಯಲ್ಲಿ ಲಭ್ಯ!

Written By:

ಬ್ರೇಕ್‌ ಇಲ್ಲದೇ 4G ಅನ್‌ಲಿಮಿಟೆಡ್ ಡಾಟಾ ನೀಡಲು ರಿಲಾಯನ್ಸ್ ಜಿಯೋ ಆರಂಭಿಸಿದಾಗಿನಿಂದ, ಭಾರತದ ಇತರೆ ಟೆಲಿಕಾಂ ಸರ್ವೀಸ್ ಪ್ರೊವೈಡರ್‌ಗಳು ಗರಿಷ್ಟ ಮಟ್ಟದಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳಲು ಕರೆ ಮತ್ತು ಡಾಟಾ ಬೆಲೆಯನ್ನು ಇಳಿಸುವಲ್ಲಿ ನಿರತರಾಗಿದ್ದಾರೆ.

ಏರ್‌ಟೆಲ್‌ ಡಾಟಾ ರೀಚಾರ್ಜ್‌ ಈಗ ಹಿಂದಿಗಿಂತ ಅರ್ಧ ಬೆಲೆಯಲ್ಲಿ ಲಭ್ಯ!

ಜಸ್ಟ್‌ ಐಡಿಯಾದ 2GB 4G ಡಾಟಾ ಆಫರ್ ಮತ್ತು ರೂ.1 ಕ್ಕೆ ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ನಂತರ, ಈಗ ಏರ್‌ಟೆಲ್‌ ಇನ್ನೊಂದು ಪ್ಲಾನ್‌ ಅನ್ನು ಪ್ರೀಪೇಡ್ ಗ್ರಾಹಕರಿಗೆ ಜಾರಿಗೊಳಿಸಿದೆ. ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರು 1GB 3G/4G ಡಾಟಾವನ್ನು ರೂ.129 ಕ್ಕೆ ಮತ್ತು 2GB ಡಾಟಾವನ್ನು 265 ರೂಗೆ ಪಡೆಯಬಹುದು.

ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಏರ್‌ಟೆಲ್‌ ಡಾಟಾ ರೀಚಾರ್ಜ್‌ ಈಗ ಹಿಂದಿಗಿಂತ ಅರ್ಧ ಬೆಲೆಯಲ್ಲಿ ಲಭ್ಯ!

ಪ್ರಾಯೋಗಿಕವಾಗಿ ನೋಡುವುದಾದರೆ ಏರ್‌ಟೆಲ್‌ ಈಗ 3G/4G ಡಾಟಾವನ್ನು ಸಾಮಾನ್ಯ ದರಕ್ಕಿಂತ ಅರ್ಧದಷ್ಟು ಕಡಿಮೆ ಬೆಲೆಗೆ ನೀಡಿದೆ. ಈ ಹಿಂದೆ ಏರ್‌ಟೆಲ್‌ ಗ್ರಾಹಕರು 1GB ಡಾಟಾಗೆ ರೂ. 265 ಮತ್ತು 2GB ಡಾಟಾಗೆ ರೂ.455 ಹಣ ಪಾವತಿಸಬೇಕಿತ್ತು.

ಏರ್‌ಟೆಲ್‌ನ ಸದ್ಯದ ಪ್ಲಾನ್‌ನಲ್ಲಿ ಗ್ರಾಹಕರು ರೂ.129 ಮತ್ತು ರೂ.265 ಕ್ಕೆ 6 ತಿಂಗಳವರೆಗೆ ಅನ್‌ಲಿಮಿಟೆಡ್‌ ರೀಚಾರ್ಜ್‌ ಪಡೆಯಬಹುದು. ಅಲ್ಲದೇ ರೂ.495 ಕ್ಕೆ ಒಮ್ಮೆಯೇ ರೀಚಾರ್ಜ್‌ ಪಡೆದು 2GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದು.

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!

 

English summary
Airtel Slashes Data Charges by Half: Get 1GB Data at Rs 129. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot