ಜುಕರ್‌ಬರ್ಗ್ ತಮ್ಮ ಮನೆಯನ್ನು ಫೇಸ್‌ ಮತ್ತು ವಾಯ್ಸ್‌ನಿಂದ ನಿಯಂತ್ರಿಸುತ್ತಾರೆ! ಹೇಗೆ ಗೊತ್ತಾ?

Written By:

ಸದ್ಯದಲ್ಲೇ ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರಿಗೂ ಒಂದು ಕುತೂಹಲಕಾರಿ ಟೆಕ್ನಾಲಜಿಯನ್ನು ಪರಿಚಯಿಸಲಿದ್ದಾರೆ. ಹೌದು, ಇಡಿ ಪ್ರಪಂಚಕ್ಕೆ ಅವರ ಪೆಟ್‌ ಪ್ರಾಜೆಕ್ಟ್ 'ಜಾರ್ವಿಸ್ (Jarvis)' ಬಗ್ಗೆ ಮುಂದಿನ ತಿಂಗಳು ದೃಶ್ಯವನ್ನು ನೋಡುವ ಆಫರ್‌ ನೀಡಲಿದ್ದಾರೆ.

ಜುಕರ್‌ಬರ್ಗ್ ಓದಲೇ ಬೇಕು ಎಂದು ಹೇಳಿದ 20 ಪುಸ್ತಕಗಳು

ಜುಕರ್‌ಬರ್ಗ್ ತಮ್ಮ ಮನೆಯನ್ನು ಫೇಸ್‌ ಮತ್ತು ವಾಯ್ಸ್‌ನಿಂದ ನಿಯಂತ್ರಿಸುತ್ತಾರೆ!

ಏನಪ್ಪಾ ಇದು 'ಜಾರ್ವಿಸ್‌' ಎಂದು ಹೆಚ್ಚಾಗಿ ತಲೆಕರೆದುಕೊಳ್ಳುವುದು ಬೇಡ. ಅಂದಹಾಗೆ ಮುಂದಿನ ತಿಂಗಳು ಮಾರ್ಕ್‌ ಜುಕರ್‌ಬರ್ಗ್‌ ಇಡಿ ಪ್ರಪಂಚವೇ ನೋಡಲು ಆಫರ್‌ ನೀಡುತ್ತಿರುವ 'ಜಾರ್ವಿಸ್‌' ಟೆಕ್ನಾಲಜಿ ಎಂಬುದು ಫೇಸ್ ಮತ್ತು ವಾಯ್ಸ್ (ಮುಖ ಮತ್ತು ಧ್ವನಿ) ಗುರುತಿಸುವಿಕೆ ಸಿಸ್ಟಮ್‌ ಆಗಿದ್ದು, ಇದರಿಂದ ಮಾರ್ಕ್‌ ಜುಕರ್‌ಬರ್ಗ್‌ ತಮ್ಮ ಮನೆಯ ಎಲ್ಲಾ ನಿಯಂತ್ರಣವನ್ನು ಹೊಂದುವುದಾಗಿದೆ. ಈ ಟೆಕ್ನಾಲಜಿಯನ್ನು ಬಹುಶಃ ಟೋನಿ ಸ್ಟಾರ್ಕ್‌ ಆರ್ಡರ್‌ ಮಾಡುವ 'ಐರನ್‌ ಮ್ಯಾನ್‌' ಜಾರ್ವಿಸ್'ನಲ್ಲಿ ನೋಡಬಹುದು.

ಮಾರ್ಕ್ ಜುಕರ್‌ಬರ್ಗ್‌ ಪ್ರಸ್ತುತದಲ್ಲಿ ಅವರ ಮನೆಯೊಳಗೆ ಜಾರ್ವಿಸ್‌ ಟೆಕ್ನಾಲಜಿ ಮೂಲಕ ಕೇವಲ ಫೇಸ್‌ ಮತ್ತು ವಾಯ್ಸ್ ನಿಂದ ಲೈಟ್‌ಗಳನ್ನು ನಿಯಂತ್ರಿಸುವುದು, ಗೇಟ್‌ಗಳನ್ನು ನಿಯಂತ್ರಿಸುವುದು, ಮನೆಯೊಳಗಿನ ಹವಾಮಾನ ನಿಯಂತ್ರಿಸುವ ಚಟುವಟಿಕೆ ಮಾಡುತ್ತಿದ್ದಾರೆ. ಅದರೆ ಅವರ ಹೆಂಡತಿ 'ಪ್ರಿಸ್ಸಿಲಾ ಚಾನ್' ಯಾವುದೇ ನಿಯಂತ್ರಣ ನಿರ್ವಹಿಸಲು ಸಾಧ್ಯವಿಲ್ಲವಂತೆ. ಕಾರಣ ಜಾರ್ವಿಸ್‌ ಅನ್ನು ಪ್ರಸ್ತುತದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಮಾತ್ರ ನಿಯಂತ್ರಿಸುವಂತೆ ಪ್ರೋಗ್ರಾಮ್ ಮಾಡಲಾಗಿದೆಯಂತೆ. ಈ ಎಲ್ಲ ಮಾಹಿತಿಗಳನ್ನು ಮಾರ್ಕ್ ಜುಕರ್‌ಬರ್ಗ್‌'ರವರು ರೋಮ್‌ನಲ್ಲಿ ಜರುಗಿದ್ದ ಪ್ರಶ್ನೆ ಮತ್ತು ಉತ್ತರಗಳ ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಹೇಳಿದರು.

ಜುಕರ್‌ಬರ್ಗ್ ತಮ್ಮ ಮನೆಯನ್ನು ಫೇಸ್‌ ಮತ್ತು ವಾಯ್ಸ್‌ನಿಂದ ನಿಯಂತ್ರಿಸುತ್ತಾರೆ!

ಜುಕರ್‌ಬರ್ಗ್ ಡ್ರೆಸ್‌ಕೋಡ್‌ನಲ್ಲಿ ಅಡಗಿದೆ ನಿಗೂಢತೆ

ಮಾರ್ಕ್‌ ಜುಕರ್‌ಬರ್ಗ್‌'ರ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ 'ಜಾರ್ವಿಸ್‌' ಪ್ರಾಜೆಕ್ಟ್' ಅಭಿವೃದ್ದಿ ಹಂತದಲ್ಲಿದ್ದು, ಮುಂದಿನ ತಿಂಗಳು ಅದು ಹೇಗೆ ವರ್ಕ್‌ ಆಗುತ್ತದೆ ಎಂಬುದನ್ನು ತೋರಿಸುವ ಭರವಸೆ ನೀಡಿದ್ದಾರೆ. ನೀವು ಟೆಕ್‌ ಪ್ರಿಯರಾಗಿದ್ದಲ್ಲಿ, ಮಾರ್ಕ್ ಜುಕರ್‌ಬರ್ಗ್‌ ತಮ್ಮ ಮನೆಯನ್ನು, ಅಲ್ಲಿನ ತಾಪಮಾನ, ಪರಿಸರವನ್ನು ಕೇವಲ ಫೇಸ್ ಮತ್ತು ವಾಯ್ಸ್‌ನಿಂದ ಹೇಗೆ ನಿಯಂತ್ರಿಸುತ್ತಾರೆ ಎಂದು ಮುಂದಿನ ತಿಂಗಳು ನೋಡಬಹುದು.

 

Read more about:
English summary
Facebook CEO Mark Zuckerberg hopes to show off his home assisting Jarvis AI next month. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot