4Gಗೆ ಟಾಟಾ ಹೇಳಿ ಇನ್ನು 5G ಬಳಸಲು ರೆಡಿಯಾಗಿ...!

Written By:

ಹೊಸ ವರ್ಷಕ್ಕೆ ಕಾಲಿಟ್ಟ ಬೆನ್ನಲ್ಲೆ ಹೊಸ ಹೊಸ ಆವಿಷ್ಕಾರಗಳ ಕುರಿತು ಚರ್ಚೆ ಆರಂಭವಾಗಿದೆ. ಜನವರಿ 5 ರಿಂದ 8ರ ವರೆಗೆ ಅಮೆರಿಕಾದ ಲಾಸ್ ವೇಗಸ್ ನಲ್ಲಿ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) ನಡೆಯುತ್ತಿದ್ದು, ಇಲ್ಲಿ ಪ್ರಪಂಚದ ಎಲ್ಲಾ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕರು ತಮ್ಮ ತಮ್ಮ ಹೊಸ ಆವಿಷ್ಕಾರಗಳನ್ನು ಮತ್ತು ಹೊಸ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಅಲ್ಲದೇ ನಾಳಿನ ಟೆಕ್ನಾಲಜಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.

4Gಗೆ ಟಾಟಾ ಹೇಳಿ ಇನ್ನು 5G ಬಳಸಲು ರೆಡಿಯಾಗಿ...!

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಪೋನಿನಲ್ಲಿ ಕ್ವರ್ಟಿ ಕೀಪ್ಯಾಡ್...

ಈಗಾಗಲೇ ಈ ಶೋನಲ್ಲಿ ಕಾಣಿಸಿಕೊಳ್ಳಲು, ತಮ್ಮ ಉತ್ಪನ್ನಗಳನ್ನು ಜಗತ್ತಿನ ಮುಂದೆ ಬಿಚ್ಚಡಲು ವೇದಿಕೆಯಾಗಿರುವ ಶೋನಲ್ಲಿ ಮಿಂಚಲು ಎಲ್ಲಾ ಕಂಪನಿಗಳು ಸಿದ್ಧತೆ ನಡೆಸಿವೆ. ಈ ಬಾರಿ ಶೋನಲ್ಲಿ 5G ಕನೆಕ್ಟಿವಿಟಿಯ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ ಎನ್ನಲಾಗಿದ್ದು, 5G ತರಂಗಂತರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬಹುದಾದ ಸಾಧನಗಳ ಪ್ರದರ್ಶನದ ಸಾಧ್ಯತೆ ಇದೆ ಎನ್ನಲಾಗಿದೆ.

4Gಗೆ ಟಾಟಾ ಹೇಳಿ ಇನ್ನು 5G ಬಳಸಲು ರೆಡಿಯಾಗಿ...!

ಫೇಸ್‌ಬುಕ್ ನಲ್ಲಿ 360 ಡಿಗ್ರಿ ಪೋಟೋ ಪೋಸ್ಟ್‌ ಮಾಡುವುದು ಹೇಗೆ..?

ವರ್ಚುವಲ್ ತಂತ್ರಜ್ಞಾನ, ಮತ್ತಷ್ಟು ಉತ್ತಮ ವಿಡಿಯೋ ಗುಣಮಟ್ಟದ ಕ್ಯಾಮೆರಾಗಳು, ಲಾಪ್‌ಟಾಪ್ ಗಳು, ಮೊಬೈಲ್ ಗಳು ಸೇರಿದಂತೆ ಎಲ್ಲಾ ಮಾದರಿಯ ಉತ್ಪನ್ನಗಳ ಕುರಿತು ಇಲ್ಲಿ ಚರ್ಚೆ ನಡೆಯಲಿದ್ದು, ಮುಂದಿನ ಹಾದಿಯಲ್ಲಿ ಕಾಯುತ್ತಿರುವ 5G ಇಂಟರ್ ನೆಟ್ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು ಎನ್ನಲಾಗಿದೆ.

4Gಗೆ ಟಾಟಾ ಹೇಳಿ ಇನ್ನು 5G ಬಳಸಲು ರೆಡಿಯಾಗಿ...!

ಒಂದೇ ಪೋನಿನಲ್ಲಿ ಎರಡು ಫೇಸ್‌ಬುಕ್ ಆಕೌಂಟ್ ಬಳಸುವುದು ಹೇಗೆ..?

ಎಕೆಂದರೆ ಈಗಾಗಲೇ 4G ವೇಗವು ಇಂದಿನ ಯುವ ಜನರಿಗೆ ಸಾಲುತ್ತಿಲ್ಲ ಈ ಹಿನ್ನಲೆಯಲ್ಲಿ ಇದಕ್ಕಿಂತ ವೇಗವಾಗಿ ಸಂಪರ್ಕ ಸಾಧನಕ್ಕೆ, ವಿಚಾರ ವಿನಿಮಯಕ್ಕೆ 5G ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ 5G ಕುರಿತಂತೆ ಹೆಚ್ಚಿನ ಕುತೂಹಲ ಮನೆ ಮಾಡಿದೆ. ಈಗಾಗಲೇ 5G ಸೇವೆಯ ಪರೀಕ್ಷಾರ್ಥ ನಡೆದಿದ್ದು, ಜಾರಿಗೆ ತರಲು ಬೇಕಾದ ಕ್ರಮಗಳ ಬಗ್ಗೆ ಇಲ್ಲಿ ಮಾತುಕತೆ ನಡೆಯಲಿದೆ, ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯದಲ್ಲಿ 5G ಸೇವೆಯೂ ಆರಂಭವಾದರೆ ಆಚ್ಚರ್ಯಪಡುವ ಅವಶ್ಯಕತೆ ಇಲ್ಲ.

 

Read more about:
English summary
the concept of 5G connectivity is widely talked about by many people and the demand for high-speed connectivity is on the rise. to more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot