2 ದಶಲಕ್ಷ ಭಾರತೀಯರಿಗೆ ಆಂಡ್ರಾಯ್ಡ್ ಅಭಿವೃದ್ದಿ ತರಬೇತಿ; ಗೂಗಲ್‌ ಗುರಿ

Written By:

ಗೂಗಲ್‌, 'ಭಾರತದವನ್ನು ಮೊಬೈಲ್‌ ಆಪ್‌ ಅಭಿವೃದ್ದಿಯಲ್ಲಿ ಜಾಗತಿಕ ನಾಯಕನಾಗಿ ರೂಪುಗೊಳ್ಳಲು ಸಹಾಯ ಮಾಡಲಿದೆಯಂತೆ. ಈ ಹಿನ್ನೆಲೆಯಲ್ಲಿ ಮೋದಿ'ರವರ 'ಸ್ಕಿಲ್‌ ಇಂಡಿಯಾ' ಕಾರ್ಯಕ್ರಮದಡಿಯಲ್ಲಿ ಸಹಾಯ ಪಡೆದು, ಭಾರತದ 2 ದಶಲಕ್ಷ ಸಾಫ್ಟ್‌ವೇರ್‌ ಮತ್ತು ಆಪ್‌ ಅಭಿವೃದ್ದಿಗಾರರಿಗೆ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ಗಾಗಿ ತರಬೇತಿ ನೀಡಲಿದೆ'.

ಗೂಗಲ್‌ ನೀಡುವ ಆಂಡ್ರಾಯ್ಡ್‌ ವೇದಿಕೆಯ ಅಭಿವೃದ್ದಿ ತರಬೇತಿಯು ಭಾರತದಾದ್ಯಂತ ಉಚಿತವಾಗಿದ್ದು, ವಿಶ್ವವಿದ್ಯಾಲಯಗಳ ಮೂಲಕ ದೊರೆಯಲಿದೆ. ಈ ಬಗ್ಗೆ ಇನ್ನಷ್ಟು ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿರಿ.

ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2 ದಶಲಕ್ಷ ಭಾರತೀಯರಿಗೆ ಆಂಡ್ರಾಯ್ಡ್‌ ಅಭಿವೃದ್ದಿ ತರಬೇತಿ

2 ದಶಲಕ್ಷ ಭಾರತೀಯರಿಗೆ ಆಂಡ್ರಾಯ್ಡ್‌ ಅಭಿವೃದ್ದಿ ತರಬೇತಿ

ಮಾಹಿತಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ 'ಆಂಡ್ರಾಯ್ಡ್ ಸ್ಕಿಲ್ಲಿಂಗ್ ಅಂಡ್‌ ಸರ್ಟಿಫಿಕೇಶನ್ ಪ್ರೋಗ್ರಾಮ್‌' ಅನ್ನು ದೆಹಲಿಯಲ್ಲಿ ಅನಾವರಣ ಮಾಡಿದ್ದು, ಮುಂದಿನ ಮೂರು ವರ್ಷಗಳಲ್ಲಿ 2 ದಶಲಕ್ಷ ಆಂಡ್ರಾಯ್ಡ್‌ ಅಭಿವೃದ್ದಿಗಾರರನ್ನು ತರಬೇತಿ ನೀಡಿ ಪ್ರಮಾಣಿಕರಿಸುವ ಗುರಿ ಹೊಂದಿದೆ.

ಗೂಗಲ್‌ ತರಬೇತಿ

ಗೂಗಲ್‌ ತರಬೇತಿ

ಗೂಗಲ್‌, ಆಂಡ್ರಾಯ್ಡ್ ವೇದಿಕೆಗೆ ನೀಡಲಿರುವ ಅಭಿವೃದ್ದಿ ತರಬೇತಿಯು ವಿಶ್ವವಿದ್ಯಾಲಯಗಳಲ್ಲಿ ಉಚಿತವಾಗಿದೆ.

ಗೂಗಲ್‌ನಿಂದ ಸಿಗಲಿರುವ ತರಬೇತಿಗಳು

ಗೂಗಲ್‌ನಿಂದ ಸಿಗಲಿರುವ ತರಬೇತಿಗಳು

ಮೋದಿ'ಯವರ ಸ್ಕಿಲ್‌ ಇಂಡಿಯಾ ಕಾರ್ಯಕ್ರಮದ ಸಹಾಯದ ಅಡಿಯಲ್ಲಿ ಗೂಗಲ್‌ ಕೈಗೆಟಕುವ ಸೃಜನಶೀಲ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಭಿವೃದ್ದಿಗಾರರಿಗೆ ನೀಡಲಿದೆ. ಎಂಡ್‌-ಟು-ಎಂಡ್‌ ಆಂಡ್ರಾಯ್ಡ್ ತರಬೇತಿ, ಚಾನೆಲ್‌ಗಳ ತರಬೇತಿ, ಅಸೋಸಿಯೇಟ್ ಆಂಡ್ರಾಯ್ಡ್ ಡೆವಲಪರ್ ಪ್ರಮಾಣೀಕರಣ ನೀಡುವುದು ಗೂಗಲ್‌ ಕಾರ್ಯಕ್ರಮದ ಮುಖ್ಯ ಅಂಶಗಳಾಗಿವೆ.

ಸೀಸರ್‌ ಸೇನ್‌ಗುಪ್ತಾ - ಗೂಗಲ್‌ ಪ್ರಾಡಕ್ಟ್‌ ಉಪಾಧ್ಯಕ್ಷ

ಸೀಸರ್‌ ಸೇನ್‌ಗುಪ್ತಾ - ಗೂಗಲ್‌ ಪ್ರಾಡಕ್ಟ್‌ ಉಪಾಧ್ಯಕ್ಷ

'ಆಂಡ್ರಾಯ್ಡ್ ಸ್ಕಿಲ್ಲಿಂಗ್ ಅಂಡ್‌ ಸರ್ಟಿಫಿಕೇಶನ್ ಪ್ರೋಗ್ರಾಮ್‌' ಕಾರ್ಯಕ್ರಮ ಉದ್ಘಾಟನೆ ಮಾಡುವ ವೇಳೆ ಮಾತನಾಡಿದ ಗೂಗಲ್‌ ಪ್ರಾಡಕ್ಟ್‌ ನಿರ್ವಾಹಕರಾದ 'ಸೀಸರ್‌ ಸೇನ್‌ಗುಪ್ತಾ', " ವಿಶ್ವದ ಉತ್ತಮ ದರ್ಜೆಯ ಪಠ್ಯಕ್ರಮ ನಿರ್ಮಿಸುವ ಮೂಲಕ ತರಬೇತಿಯು ಸುಲಭವಾಗಿ ದಶಲಕ್ಷ ವಿದ್ಯಾರ್ಥಿಗಳಿಗೆ ಮತ್ತು ಅಭಿವೃದ್ದಿಗಾರರಿಗೆ ಭಾರತದಲ್ಲಿ ಸಿಗುವಂತೆ ಮಾಡಲಾಗುತ್ತದೆ. ಸ್ಕಿಲ್‌ ಇಂಡಿಯಾ ಕಾರ್ಯಕ್ರಮಕ್ಕೆ ನಾವು ಕೊಡುಗೆ ನೀಡಲು ಬಯಸಿದ್ದೇವೆ ಮತ್ತು ಮೊಬೈಲ್‌ ಆಪ್‌ ಅಭಿವೃದ್ದಿಯಲ್ಲಿ ಭಾರತವನ್ನು ಜಾಗತಿಕ ನಾಯಕನಾಗಲು ಸಹಾಯ ಮಾಡುತ್ತೇವೆ" ಎಂದಿದ್ದಾರೆ.

ಸರ್ಟಿಫಿಕೇಶನ್‌ ಪ್ರೋಗ್ರಾಮ್‌

ಸರ್ಟಿಫಿಕೇಶನ್‌ ಪ್ರೋಗ್ರಾಮ್‌

ಸರ್ಟಿಫಿಕೇಶನ್‌ ಪ್ರೋಗ್ರಾಮ್‌ ಆರಂಭದಲ್ಲಿ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ ಸಾಫ್ಟ್‌ವೇರ್‌ ಮತ್ತು ಆಪ್‌ ಅಭಿವೃದ್ದಿಗಾರರು ಬೋಧಕ ನೇತೃತ್ವದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ತರಬೇತಿ ಕೋರ್ಸ್‌ಗಳು ಭಾರತ ಸರ್ಕಾರದ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ನ್ಯಾಷನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಸಂಸ್ಥೆಗಳಲ್ಲಿ ಲಭ್ಯ.

ವ್ಯಕ್ತಿಗತ ತರಬೇತಿ

ವ್ಯಕ್ತಿಗತ ತರಬೇತಿ

ವ್ಯಕ್ತಿಗತ ತರಬೇತಿಯು ಈ ವರ್ಷದಲ್ಲಿ ವಿಶ್ವವಿದ್ಯಾಲಯಗಳ ಕಂಪ್ಯೂಟರ್‌ ವಿಜ್ಞಾನ ಪಠ್ಯಕ್ರಮಕ್ಕೆ ಅಳವಡಿಕೆಯಾಗಿ ನಡೆಯಲಿದೆ.

ಆಂಡ್ರಾಯ್ಡ್ ಕೋರ್ಸ್ ಪಠ್ಯ

ಆಂಡ್ರಾಯ್ಡ್ ಕೋರ್ಸ್ ಪಠ್ಯ

ಇದೇ ತಿಂಗಳ (ಜುಲೈ) 18 ರಿಂದ ಆಂಡ್ರಾಯ್ಡ್ ಫ್ಲಾಟ್‌ಫಾರ್ಮ್‌ ತರಬೇತಿಯ ಪಠ್ಯ ವಸ್ತು 'NPTEL'ನಲ್ಲಿ ಉಚಿತವಾಗಿ ದೊರೆಯಲಿದೆ.

 ಆಂಡ್ರಾಯ್ಡ್‌ ಡೆವಲಪರ್ ಸರ್ಟಿಫಿಕೇಶನ್

ಆಂಡ್ರಾಯ್ಡ್‌ ಡೆವಲಪರ್ ಸರ್ಟಿಫಿಕೇಶನ್

ಗೂಗಲ್‌ ಈಗಾಗಲೇ ಜಾಗತಿಕವಾಗಿ ಪ್ರಖ್ಯಾತವಾಗಿರುವ 'ಜಾಬ್-ಓರಿಯೆಂಟೆಡ್ ಅಸೋಸಿಯೇಟ್‌ ಆಂಡ್ರಾಯ್ಡ್‌ ಡೆವಲಪರ್ ಸರ್ಟಿಫಿಕೇಶನ್' ಅನ್ನು ಭಾರತದಲ್ಲಿ ಪರಿಚಯಿಸಿದೆ. ಸರ್ಟಫಿಕೇಶನ್'ಗಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಯು ಆಂಡ್ರಾಯ್ಡ್‌ ಡೆವಲಪರ್‌ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಹಾಯಕವಾಗುತ್ತದೆ.

ತರಬೇತಿ ನಂತರ?

ತರಬೇತಿ ನಂತರ?

ತರಬೇತಿ ನಂತರ ಡೆವಲಪರ್‌ಗಳು 'ಗೂಗಲ್‌ ಡೆವಲಪರ್‌ ತರಬೇತಿ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಸರ್ಟಿಫಿಕೇಶನ್‌ ಪರೀಕ್ಷೆಯನ್ನು 6,500 ರೂಗಳಲ್ಲಿ ತೆಗೆದುಕೊಳ್ಳಬಹುದಾಗಿದೆ.

ತರಬೇತಿ ಪಾಲುದಾರರು

ತರಬೇತಿ ಪಾಲುದಾರರು

ಪ್ರಾಥಮಿಕವಾಗಿ ಗೂಗಲ್‌ ತರಬೇತಿ ಪಾಲುದಾರರಾಗಿ ಉಡಾಸಿಟಿ, ಎಡುರೆಕ, ಮಣಿಪಾಲ್‌ ಗ್ಲೋಬಲ್‌, ಸಿಂಪ್ಲಿಲರ್ನ್‌, ಕೋನಿಗ್ ಮತ್ತು ಅಪ್‌ಗ್ರೆಡ್'ಗಳನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Google aims to train two million Indian developers on Android platform. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot